ad

ಬಹುಮಹಡಿ ಕಟ್ಟಡದ ಪಕ್ಕದ ರಸ್ತೆಯ ಅಂಗಡಿಗಳಿಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್-DySP Khadak warns shops

 SUDDILIVE || SHIVAMOGGA

ಬಹುಮಹಡಿ ಕಟ್ಟಡದ ಪಕ್ಕದ ರಸ್ತೆಯ ಅಂಗಡಿಗಳಿಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್-DySP Khadak warns shops on the road next to multi-storey building

Dysp, warns

ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಚಾಲನೆಗೊಂಡಿದೆ. ಸುತ್ತಮುತ್ತಲ ಜಾಗದಲ್ಲಿ ಪಾರ್ಕಿಂಗ್ ಅವ್ಯವಸ್ಥೆಯಿದ್ದು ಇದನ್ನ  ನಿಯಂತ್ರಿಸ ಮೂಲಕ ಬಹುಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಗಮ ಗೊಳಿಸಬೇಕಿದೆ. 

ನಿನ್ನೆಯ ಮಧ್ಯಾಹ್ನದ ನಂತರ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ಗೆ ಸುಗಮವಾಗಿ ಜನ ಸ್ವಯಂ ಪ್ರೇರಿತರಾಗಿ ಬರ್ತಾಯಿದ್ದಾರೆ. ಜನಗಳ ಬಾಯಿಯಿಂದ ಬಾಯಿಗೆ ಹರಡುವ ಮಾಹಿತಿಯ ಆಧಾರದ ಮೇರೆಗೂ ಪಾರ್ಕಿಂಗ ಗೆ ಬರಬೇಕಿದೆ. 

ಮೊದಲ 2 ಗಂಟೆಗೆ ಕಾರಿಗೆ 20 ರೂ. ತದನಂತರ  ಗಂಟೆಗೆ ಹತ್ತು ರೂ. ಚಾರ್ಜ್ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಮೊದಲ ಎರಡು ಗಂಡೆಗೆ 10 ನಂತರದ ಗಂಟೆಗೆ 5 ರೂ. ಚಾರ್ಜ್ ಮಾಡಲಾಗುವುದು. 

ಬಹುಮಹಡಿ ಕಟ್ಟಡದ ಮಗ್ಗಿಲನಲ್ಲೇ ಇರುವ ಹೂವಿನ ಅಂಗಡಿಗಳಿಗೆ ಖಡಕ್ ವಾರ್ನಿಂಗ್

ಬಹುಮಹಡಿ ಕಟ್ಟಡದ ಪಕ್ಕದ ರಸ್ತೆಯಲ್ಲಿ ರಸ್ತೆಯ ಮೇಲೆಯೇ ಅಂಗಡಿಗಳು ಬಂದಿರುವುದರಿಂದ ನೇದಾಡುವುದಕ್ಕೂ ತೊಂದರೆ ಉಂಟಾಗಿದೆ. ಇಂದು ಡಿವೈಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿ ವಾರ್ನ್  ಮಾಡಿದ್ದಾರೆ. 

ಓಉಟ್ ಪಾತ್ ಮೇಲೆ ಸುಮಾರು ಏಳೆಂಟು ಅಡಿ ಬಿಟ್ಟು ರಸ್ತೆಯ ಮೇಲೆ ಅಂಗಡಿಗಳು ಬಂದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಅಂಗಡಿಗಳಿಂದ ಬಹುತೇಕ ಬಂದ್ ಆದಂತೆ ಆಗಿರುವುದರಿಂದ ಸೋಮವಾರದ ಒಳಗೆ ಅಂಗಡಿಗಳು ಹಿಂದಕ್ಕೆ ಹೋಗ ಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿ ಬಂದಿದ್ದಾರೆ. ಈ ಅಂಗಡಿಗಳು ಹಿಂದಕ್ಕೆ ಹೋಗುತ್ತವಾ ಅಥವಾ ಎಚ್ಚರಿಕೆಯ ನಂತರವೂ ಹಾಗೆ ಉಳಿಯುತ್ತವಾ ಕಾದು ನೋಡಬೇಕಿದೆ. 

DySP Khadak warns shops on the road next to multi-storey building

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close