SUDDILIVE || SHIVAMOGGA
ಪ್ರಜ್ಞಾ ಸಿಂಗ್ ದೋಷ ಮುಕ್ತೆ-ಇದು ಹಿಂದುತ್ವಕ್ಕೆ ಸಿಕ್ಕ ಜಯ-ಶಾಸಕ ಚೆನ್ನಿ-Pragya Singh is free from guilt - this is a victory for Hindutva - MLA Chenni
ಮಾಲೇಗಾವ್ ಸ್ಪೋಟ ನಡೆದಾಗ ಇಡೀ ದೇಶ ನಡುಗಿತ್ತು. ಎನ್ಐಎ ನ್ಯಾಯಾಲಯ ತೀರ್ಪು ನೀಡಿದ್ದು ಇದು ಹಿಂದೂ ರಾಷ್ಟ್ರಕ್ಕೆ ಸಿಕ್ಕ ಜಯ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ಸುಧದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯ ಹೇಳಿದ ಅಂಶಗಳನ್ನ ನೋಡಿದರೆ ಹಿಂದೂ ಸಮಾಜದ ಬಗ್ಗೆ ಹಾಳು ಮಾಡುವ ಯತ್ನವಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಅನೇಕ ಘಟನೆಗಳು ನಡೆದಿದೆ. ಪ್ರಜ್ಞಾ ಸಿಂಗ್ ಅವರ ಜೀವನವನ್ನೇ ಹಾಳು ಮಾಡುವ ಕರ್ನಲ್ ಅವರ ಜೀವನ ಹಾಳು ಮಾಡುವ ಯತ್ನ ನಡೆಸಲಾಗಿತ್ತು ಎಂದು ದೂರಿದರು.
ಪ್ರಜ್ಞಾ ಸಿಂಗ್ ಪರ ಬಂದ ತೀರ್ಪು ಕಾಂಗ್ರೆಸ್ ನ ನೀತಿ ಯನ್ನ ಬಯಲು ಮಾಡಿದೆ. ಈ ತೀರ್ಪು ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಪ್ರಜ್ಞಾ ಸಿಂಗ್ ವೀಲ್ ಚೇರು ಹಿಡಿದಿರುವುದು ಕಾಂಗ್ರೆಸ್ ನ ನೀತಿಯಿಂದಾಗಿದೆ. ತೀರ್ಪು ಪ್ರಜ್ಞಾರನ್ನ ಖುಲಾಸೆಗೊಳಿಸಿದೆ. ಜೀವನವನ್ನ ಹಾಳು ಮಾಡಿದ ಕಾಂಗ್ರೆಸ್ ಗೆ ಶಿಕ್ಷೆ ಇಲ್ವಾ ಎಂದು ಶಾಸಕರು ಪ್ರಶ್ನಿಸಿದರು.
ಷಡ್ಯಂತ್ರದ ಮೂಲಕ ಹಿಂದೂ ಭಯೋತ್ಪಾದನೆ ನಡೆಸಲಾಗುತ್ತಿದೆ ಎಂದು ಬಿಂಬಿಸಲು ಹೊರಟ ಕಾಂಗ್ರೆಸ್ ಬಗ್ಗೆ ಯಾರು ಕ್ರಮ ಜರುಗಿಸುತ್ತಾರೆ? ಹಾಗಾಗಿ ಕಾಂಗ್ರೆಸ್ ಹಿಂದೂ ರಾಷ್ಟ್ರದ ಕ್ಷಮೆ ಕೇಳಬೇಕು ಎಂದ ಅವರು ಹಿಂದೂ ಭಯೋತ್ಪಾದನೆಯನ್ನ ಹುಟ್ಟುಹಾಕುವ ಪ್ರಯತ್ನ ನಡೆದಿತ್ತು ಎಂದರು.
ಕಾಂಗ್ರೆಸ್ ಜಾಯಮಾನಕ್ಕೆ ಇವೆಲ್ಲಾ ಅರ್ಥವಾಗೊಲ್ಲ. ಮಾಲೇಗಾವ್ ನ ಸ್ಪೋಟದಲ್ಲಿ 6 ಜನ ಸತ್ತುಹೋದರು. 100 ಜನ ಗಾಯಗೊಂಡರು ಎನ್ಐಎ ಈ ಘಟನೆಯನ್ನ ಸೆಮಿ ಮಾಡಿದೆ ಎಂದಿತ್ತು. ಅಂದೇ ನಿರ್ಣಯವಾಗಿತ್ತು ಈ ಘಟನೆಯನ್ನ ಸಿಮಿ ಮಾಡಿದ್ದನ್ನ ತಿರುಚಿ ಆ ಸಂಘಟನೆಯನ್ನ ದೇಶ ಭಕ್ತ ಸಂಘಟನೆ ಎಂದು ಬಿಂಬಿಸಲು ಯತ್ನಿಸಿದ ಕಾಂಗ್ರೆಸ್ ಅವರ ರಕ್ಷಣೆಗೆ ನಿಂತಿತ್ತು. ಅಭಿನವ ಭಾರತ ಸಂಘಟನೆಯಲ್ಲಿದ್ದ ಪ್ರಜ್ಞಾ ಸಿಂಗ್ ಸೇರಿದಂತೆ 8 ಜನರು ಆರೋಪಿಗಳೆಂದು ಮಾಡಲಾಯಿತು ಎಂದರು
ನೂರುಲ್ ಕುದಾರನ್ನ ಬಂಧಿಸಲಾಗಿತ್ತು. ಶಬೀರ್ ಬ್ಯಾಟರಿವಾಲಾ ರೈಸ್ ಅಹಮದ್ ರನ್ನ ಹುಡುಕಲು ಆರಂಭಿಸಲಾಯಿತು. ಪೊಲೀಸರು ದಾಳಿಯಲ್ಲಿ ಮತ್ತೊಂದು ಮಸ್ಲೀಂ ಸಂಘಟನೆಯ ಪಾಲ್ಗೊಳ್ಳುವಿಕೆ ಸಹ ಹೊರಬಿದ್ದಿತ್ತು. ಅವರೆಲ್ಲ ಮಾಡಿದ್ದನ್ನ ಬದಿಗೊತ್ತಿ ಪ್ರಜ್ಞಾ ಸಿಂಗ್ ಮತ್ತು ಅಭಿನವ ಭಾರತರ ಮೆಲೆ ಚಾರ್ಜ್ ಶೀಟ್ ಹಾಕಲಾಗಿತ್ತು.
ಎನ್ಐಎ ಅಥವ ಎಟಿಎಸ್ ಹಿಂದೂ ಸಂಘಟನೆಗಳ ಭಾಗಿಯನ್ನ ತಳ್ಳಿಹಾಕಿದೆ. ಬಜರಂಗದಳದ ಕಾರ್ಯಕರ್ತರು ಈ ದೇಶದಲ್ಲಿ ಯಾವುದೇ ಬಾಂಬ್ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಮುಜಾವರ್ ಅವರನ್ನ ತನಿಖೆಯಿಂದ ಹಿಂದೆ ಸರಿಸಿ ಅವರಿಗೆ ಶಿಕ್ಷೆ ನೀಡಲು ಕಾಂಗ್ರೆಸ್ ಮುಂದಾಗಿತ್ತು. ಸೋನಿಯಾ ಮತ್ತು ರಾಹುಲ್ ಈ ದೇಶದ ಪ್ರಜೆನೇ ಅಲ್ಲ. ಇವರನ್ನ ಪ್ರಧಾನಿ ಮಾಡಲು ಹೊರಟಿದ್ರು, ಇವರೆಲ್ಲ ದೇಶದ ಕ್ಷಮೆಯಾಚಿಸಬೇಕು ಎಂದರು.
ಹುಚ್ಚರ ಸಂತೆಯಂತಾಗಿದೆ ಕಾಂಗ್ರೆಸ್, ಇದು ದೇಶವೇ ಅಲ್ಲ ಎಂದಿದ್ದ ಕಾಂಗ್ರೆಸ್ ಇವರಿಗೆ ಬಿಜೆಪಿ ಉತ್ತರಕೊಡಲು ಸಾಧ್ಯವಿಲ್ಲ. ಅಂದಿನ ಎಟಿಎಸ್ ಅಧಿಕಾರಿ ಮೊಹಬೂಬ್ ಮುಜಾವರ್ ಮೇಲೆ ಒತ್ತಡ ಹಾಕಿ ಇಂತಿಂಥಹವನ್ನ ಘಟನೆಯಲ್ಲಿ ಪ್ರಮುಖ ಆರೋಪಿಗಳನ್ನಾಗಿ ಸೇರಿಸಬೇಕು ಎಂದು ಸೂಚಿಸಲಾಗುತ್ತು. ಪ್ರಜ್ಞಾಸಿಂಗ್ ಅವರನ್ನ ಷಡ್ಯಂತ್ರದ ಮೂಲಕ ಆರೋಪಿಸ್ಥಾನದಲ್ಲಿ ನಿಲ್ಲಿಸಲಾಗಿತ್ತು ಎಂದು ದೂರಿದರು
this is a victory for Hindutva