SUDDILIVE || SHIVAMOGGA
ಪುಂಡಾಟ ಮೆರೆದಿದ್ದ ಎರಡು ಕಾಡಾನೆಗಳು ಶಿವಮೊಗ್ಗದ ಸಕ್ರೆಬೈಲಿಗೆ-Two wild elephants that were roaming freely reached Sakrebailu in Shimoga
ಪುಂಡಾಟ ಮೆರೆದಿದ್ದ ಎರಡು ಕಾಡಾನೆಗಳನ್ನ ಶಿವಮೊಗ್ಗದ ಸಕ್ರೆಬೈಲಿಗೆ ಕರೆತರಲಾಗಿದೆ. ಎನ್ ಆರ್ ಪುರದಲ್ಲಿ ಬೆಳೆ ಹಾನಿ ಮಾಡಿದ್ದ ಹಾಗೂ ಬಾಳೆಹೊನ್ನೂರಿನಲ್ಲಿ ಇಬ್ಬರನ್ನ ಬಲಿ ಪಡೆದಿದ್ದ ಎರಡು ಗಂಡು ಕಾಡಾನೆಗಳನ್ನ ಶಿವಮೊಗ್ಗದ ಸಕ್ರೆಬೈಲಿಗೆ ಕರೆತರಲಾಗಿದೆ.
ಎನ್ ಆರ್ ಪುರದ ಬಳಿ ಕಾಡಾನೆಯೊಂದು ಕಳೆದ 6 ತಿಂಗಳಿಂದ ಬೆಳೆ ಹಾನಿ ಮಾಡಿತ್ತು. ಈ ಬಗ್ಗೆ ದೂರು ಹೊತ್ತೊಯ್ದ ರೈತರು ಅರಣ್ಯ ಇಲಾಖೆ ವರ್ತನೆಯ ಬಗ್ಗೆ ಆಕ್ಷೇಪಣೆ ಎತ್ತಿದ್ದರು.
ಇದರ ಬೆನ್ನಲ್ಲೇ ಬಾಳೆಹೊನ್ನೂರಿನ ಬಳಿ ಇಬ್ಬರನ್ನ ಬಲಿಪಡೆದಿದ್ದ ಆನೆಯ ಪುಂಡಾಟಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಖಾಂಡ್ಯ ಮತ್ತು ಎನ್ ಆರ್ ಪುರ ರಸ್ತೆಯನ್ನ ತಡೆದು ಪ್ರತಿಭಟಿಸಿದ್ದರು. ಜನರ ಆಕ್ರೋಶಕ್ಕೆ ಮಣಿದ ಇಲಾಖೆ ಅದನ್ನ ಭದ್ರ ಅಭಯಾರಣ್ಯದ ಬಳಿ ಬಿಡಲು ನೋಡಿದ್ದಾರೆ.
ಇಲ್ಲೂ ಜನ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಕ್ರಬೈಲಿನಲ್ಲಿ ಬಿಡಲು ತೀರ್ಮಾನಿಸಲಾಗಿದೆ. ಹೀಗೆ ಸರ್ಕಾರ ಸಧ್ಯಕ್ಕೆ ತಲೆದೋರಿರುವ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿ ನಂತರ ಜನರ ಆಕ್ರೊಶಕ್ಕೆ ಮಣಿದಿದೆ.
Elephant in sakrebailu