SUDDILIVE || SHIVAMOGGA
ಚಂದ್ರಗುತ್ತಿಯಲ್ಲಿ ಆರ್ಭಟಿಸಿದ ಮಳೆ-Rain pouring down in Chandragutti
ಪುರಾಣ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ಧಾರಕಾರ ಮಳೆಯಾಗಿದೆ. ರಸ್ತೆಯ ಮೇಲೆ ಮಳೆಯ ನೀರು ಹೊಳೆಯಂತೆ ರಭಸವಾಗಿ ಹರಿದಿದೆ. ಚಂದ್ರಗುತ್ತಿಯಲ್ಲಿ ಆಶ್ಲೇಷ ಮಳೆ ಆರ್ಭಟಿಸುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಗಾಂಧಿ ವೃತ್ತದಿಂದ ರಭಸವಾಗಿ ಮಳೆ ಹರಿಯುತ್ತಿದೆ. ಸೊರಬಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿವೆ ಹಾಗೂ ಮಳೆ ನೀರಿನಿಂದ ಜಲಾವೃತವಾಗಿದೆ. ಗ್ರಾಮದ ಕಾಲೋನಿಗಳಲ್ಲಿ ಇರುವ ಮನೆಗಳಿಗೂ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.
ರಸ್ತೆ ಅಕ್ಕಪಕ್ಕದ ಅಂಗಡಿಗಳಿಗೂ ಮಳೆ ನೀರು ನುಗ್ಗುತ್ತಿದ್ದು, ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
Rain pouring down in Chandragutti