SUDDILIVE || SHIKARIPURA
ಜಾಗದ ವಿಚಾರದಲ್ಲಿ ಬಹಿಷ್ಕಾರದ ಆರೋಪ, 20 ಮಂದಿ ವಿರುದ್ಧ ಬಿತ್ತು ಎಫ್ಐಆರ್-FIR filed against 20 people for boycotting land dispute
ಜಾಗ ವಿವಾದದ ಸಂಬಂಧ ಗ್ರಾಮದ ಕೆಲವರಿಂದ ಕುಟುಂಬಕ್ಕೆ ಬಹಿಷ್ಕಾರದ ಆರೋಪ ಮಾಡಲಾಗಿದೆ- ಇಬ್ಬರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿದೆ.ಶಿಕಾರಿಪುರ ತಾಲೂಕಿನ ಮುಳ್ಳುಕೊಪ್ಪದಲ್ಲಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡ ಗಾಯಾಳು ಷಣ್ಮುಖ ಮತ್ತು ಲೋಕೇಶ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ಮುಳ್ಳುಕೊಪ್ಪ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ.
ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಮೂವತ್ತಕ್ಕೂ ಹೆಚ್ಚು ಜನರಿದ್ದ ಗುಂಪು ಒಂದು ಜಾಗದ ವಿಚಾರವಾಗಿ ಜಟಾಪಟಿ ನಡೆಸಿದೆ.
10×30 ಅಡಿ ಜಾಗವನ್ನು ಬಿಟ್ಟುಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಮಗೆ ಸೇರಿದ ಜಾಗದಲ್ಲಿ ಮನೆ ಕಟ್ಟುತ್ತಿದ್ದನ್ನು ಪ್ರಶ್ನಿಸಿದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವಿಷಯವಾಗಿ 2012 ರಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬ ಈಗ ಮತ್ತೊಮ್ಮೆ ಬಹಿಷ್ಕಾರದ ಆರೋಪ ಎದುರಿಸುತ್ತಿದೆ. ಈ ಕುರಿತು ಬಹಿಷ್ಕಾರದ ಬಗ್ಗೆ ದೂರು ಕುಟುಂಬ ನೀಡಿದ್ದರಿಂದ ಷಣ್ಮುಕಪ್ಪ ಎಂಬುವರಿಗೆ ಗ್ರಾಮಸ್ಥರು ದೂರನ್ನು ಹಿಂದೆ ಪಡೆಯುವಂತೆ ಒತ್ತಾಯಿಸುತ್ತಿದ್ದರು.
ದೇವಸ್ಥಾನಕ್ಕೆ ಬಂದು ಬಗೆ ಹರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಸುಮಾರು 300 ಅಡಿಯಷ್ಟು ಜಾಗವನ್ನು ಬಿಟ್ಟು ಕೊಡುವಂತೆ ರಾಜಶೇಖರಪ್ಪ ಆಗ್ರಹಿಸಿದ್ದರು. ಕಳೆದ ಹತ್ತಾರು ವರ್ಷದಿಂದಲೂ ದೇವಸ್ಥಾನಕ್ಕೆ ಹೋಗದಂತೆ, ನೀರು ಹಿಡಿಯದಂತೆ ಗುಂಪು ಒತ್ತಾಯಿಸಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ಸಂಬಂಧ ಇಪ್ಪತ್ತಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ.
FIR filed against 20 people for boycotting land dispute

