SUDDILIVE || SHIVAMOGGA
ಗುರುಪುರದಲ್ಲಿ 20 ನೇ ವರ್ಷದ ಗೌರಿ ಹಬ್ಬ-20th Annual Gauri Festival in Gurupur
ಇಂದು ಗೌರಿ ಹಬ್ಬದ ಅಂಗವಾಗಿ. ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನದಲ್ಲಿ.. ಬಸವೇಶ್ವರ ವೀರಶೈವ ಲಿಂಗಾಯತ ಸೇವಾ ಸಮಾಜದಿಂದ ಗೌರಿ ಹಬ್ಬ ವನ್ನು ಗೌರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರೆ, ಗುರುಪುರ ನಲ್ಲಿ 20 ವರ್ಷದ ಗೌರಿ ಹಬ್ಬವನ್ನ ಆಚರಿಸಲಾಯಿತು.
ಗುರುಪುರದಲ್ಲಿ ನಂಜುಡೇಶ್ವರ ದೇವಸ್ಥಾನದಲ್ಲಿ ಮೂರುದಿನಗಳ ಕಾಲ ಗೌರಮ್ಮನನ್ನಕೂರಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತಿದೆ. ಮೂರನೇದಿನ ರಾಜಬೀದಿ ಉತ್ಸವ ನಡೆಯುತ್ತಿದೆ. ಗಣೇಶನನ್ನ ಮೂರರಿಂದ 15 ದಿನದಿಂದ ಒಂದು ತಿಂಗಳವರೆಗೆ ಪ್ರತಿಷ್ಠಾಪಿಸಲಾಹುತ್ತದೆ. ಈ ಗುರುಪುರದ ಗೌರಮ್ಮನನ್ನ 3 ದಿನ ನಡೆಸಿ ರಾಜಬೀದಿ ಉತ್ಸವ ಮಾಡಿ ತುಂಗನದಿಯಲ್ಲಿ ವಿಸರ್ಜಿಸಲಾಗುತ್ತಿದೆ. ಇಲ್ಲಿನಗೌರಿ 6 ಅಡಿ ಗೌರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ಅದರಂತೆ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಗಣಪನ ವಿಗ್ರಹದ ಜೊತೆ ಗೌರಿಯ ಮೂರ್ತಿಯನ್ನಮಾರಾಟ ಮಾಡಲಾಗುತ್ತಿದೆ. 5 ಅಡಿ ಗೌರಿಗೆ 8000 ರೂಗೆ ಮಾರಾಟವಾಗಿದೆ.
ಈ ಬಸವೇಶ್ವರ ದೇವಸ್ಥಾನದ ಗೌರಿ ಪ್ರತಿಷ್ಠಾಪನೆಯಲ್ಲಿ ನಿರ್ದೇಶಕರಾದ ಹಾಗೂ ನಿಕಟಪೋರ್ವ ಕಾರ್ಪೊರೇಟರ್ ಆದ ಅನಿತಾ ರವಿಶಂಕರ್. ಮುರುಳೇಶ್.. ಉಪಾಧ್ಯಕ್ಷರಾದ ಶಾಂತ ಆನಂದ್. ನಿರ್ದೇಶಕರಾದ ರತ್ನಮ್ಮ ಜೆ. ಸುಜಾಲ ಅವಿನಾಶ್. ಸುರೇಖಾ ಮುರುಳೇಶ್ ಉಮಾ. ಪುಟ್ಟ ಮಯ. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್.. ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಉಪಾಧ್ಯಕ್ಷ. ಎಲ್ಎಂ ಮೋಹನ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
20th Annual Gauri Festival in Gurupur

