ad

ಬಲವಂತವಾಗಿ ತರಬೇತಿ ಮತ್ತು ಖಾಸಗಿ ಬಸ್ ಚಾಲಕರ ಬಳಕೆಯಾಗುತ್ತಿದೆ-ಮಹದೇವು ಆರೋಪ-Forced training and use of private bus drivers - Mahadev alleges

 SUDDILIVE || SHIVAMOGGA

ಬಲವಂತವಾಗಿ ತರಬೇತಿ ಮತ್ತು ಖಾಸಗಿ ಬಸ್ ಚಾಲಕರ ಬಳಕೆಯಾಗುತ್ತಿದೆ-ಮಹದೇವು ಆರೋಪ-Forced training and use of private bus drivers - Mahadev alleges

Training, driver



ರಾಜ್ಯ ರಸ್ತೆ ಸಾರಿಗೆ ನೌಕರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ದೊರತಿದೆ. ಈ ಕುರಿತು ಮಾತನಾಡಿರುವ ಎಐಟಿಯುಸಿ KSRTC ನೌಕರರ ಜಂಟಿ ಸಮಿತಿ ಉಪಾಧ್ಯಕ್ಷ ಮಹದೇವು ಮಾತನಾಡಿ ಬಲವಂತವಾಗಿ ಖಾಸಗಿ ಬಸ್ ಚಾಲಕರು ಮತ್ತು ತರಬೇತಿದಾರರನ್ನ ಬಲವಙತದಿಂದ ಬಸ್ ಗಳನ್ನ ಓಡಾಡಿಸಲಾಗುತ್ತಿದೆ ಎಂದು ದೂರಿದರು. 

ಇದು ಸ್ವಯಂ ಪ್ರೇರಿತ ಬಂದ್ ಆಗಿದೆ. ಯಾವುದೇ ಬಲವಂತವಾಗಿ ನೌಕರರನ್ನ ಬಂದ್ ಗೆ ಬಳಸಿಕೊಳ್ಳಲಾಗುತ್ತಿಲ್ಲ. ಆದರೆ ಅಧಿಕಾರಿಗಳು ಕೆಲ ತರಬೇತಿದಾರರನ್ನ ಬಲವಂತವಾಗಿ ಒತ್ತಡ ಮಾಡಿ ಕೆಲಸಕ್ಕೆ ಕಳುಹಿಸಲಾಗಿದೆ. ಖಾಸಗಿ ಚಾಲಕರನ್ನ ಮತ್ತು ತರಬೇತಿದಾರರನ್ನ ನೇಮಿಸಿಕೊಂಡು ಬಸ್ ಗಳ ಓಡಾಟ ನಡೆಸಲಾಗುತ್ತಿದೆ. 


1.14 ಲಕ್ಷ ಸಾರಿಗೆ ನೌಕರರು ಇದ್ದಾರೆ. ಅವರಿಗೆ ಸಂಬಳ ಹೆಚ್ಚಿಸಿ 38 ತಿಂಗಳ ಅರಿಯಸ್ ಹಣ ಕೊಡಿ ಎಂದು ಬೇಡಿಕೆ ನೀಡಲಾಗಿತ್ತು. ಶಿವಮೊಗ್ಗ ಡಿಪೋದಿಂದ 350 ಬಸ್ ಗಳು ಸಂಚರಿಸುತ್ತದೆ. ಇದರಲ್ಲಿ 7-8 ಜನರನ್ನ ತರಬೇತಿ ಚಾಲಕರನ್ನ‌ ಬಳಸಿಕೊಳ್ಳಲಾಗಿದೆ. 

ಸಿಎಂ ಮತ್ತು ನೌಕರರ ನಡುವಿನ ಸಭೆ ವಿಫಲವಾಗಿದೆ. ಪ್ರತಿಭಟನೆ ಯಶಸ್ವಿಯಾಗಲಿದೆ ಎಂದರು. ಸಂಸ್ಥೆಯ ಚಾಲಕ ವೃತ್ತಿ ನಡೆಸುತ್ತಿದ್ದ ರಮೇಶ್ ಮಾತನಾಡಿ, ಭ್ರಷ್ಠಾ ಅಧಿಕಾರಿಗಳು ಮತ್ತು ಸರ್ಕಾರ ನೌಕರರ ಹಣ ಕೇಳಿದರೆ ಹಣ ಕೊಡುತ್ತಿಲ್ಲ. ಬೆಂಗಳೂರಿನಿಂದ ಬಂದಿದ್ದೇವೆ ಕೆಲಸಕ್ಕೆ ಹೋಗದಿದ್ದರೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಾರೆ ಎಂದು ದೂರಿದ್ದಾರೆ. 

ಸಾರಿಗೆ ನೌಕರರ ಪ್ರತಿಭಟನೆಯ ನಡುವೆ ಖಾಸಗಿ ಬಸ್ ಗಳು ನಿಲ್ದಾಣದ ಒಳಗೆ ಬಂದು ಹೋಗುತ್ತಿವೆ. ಪ್ರಯಾಣಿಕರನ್ನ ಕೂರಿಸಿಕೊಳ್ಳುವ ಪ್ರಯತ್ನಗಳು ನಡೆದಿದೆ. ಏಳು ಗಂಟೆಗೆ 17 ಬಸ್ ಗಳು ಡಿಪೋದಿಂದ ಹೊರಡಬೇಕಿತ್ತು. 10 ಬಸ್ ಗಳು ವಿವಿಧ ಊರಿಗೆ ಹೋಗುವ ಬಸ್ ಗಳು ಡಿಪೋದಿಂದ ಹೊರಬಿದ್ದಿದೆ.

Forced training and use of private bus drivers - Mahadev alleges

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close