SUDDILIVE || SHIVAMOGGA
ನೌಕರರ ಮುಷ್ಕರ ನಡುವೆಯೂ ಶಿವಮೊಗ್ಗ ನಿಲ್ದಾಣದಲ್ಲಿ KSRTC ಬಸ್ ಗಳ ಓಡಾಟ-KSRTC buses ply at Shivamogga station despite employee strike
ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದಾಗ್ಯೂ ಸಹ ಕೆಲ ಬಸ್ ಗಳ ಸಂಚಾರ ನಡೆದಿದೆ. ಕೆಲ ಬಸ್ ಗಳಲ್ಲಿ ಪ್ರಯಾಣಿಕರು ಬಸ್ ಹತ್ತುತ್ತಿರುವ ದೃಶ್ಯ ಕಂಡು ಬಂದಿದೆ. ಬೆಂಗಳೂರು, ಉಡುಪಿ, ಹೊಸಪೇಟೆ, ಸಾಗರ, ಕುಮಟಾ ಹೋಗುವ ಬಸ್ ಗಳ ಓಡಾಟ ಶಿವಮೊಗ್ಗ ಬಸ್ ನಿಲ್ದಾಣದಿಂದ ಆರಂಭವಾಗಿದೆ.
ಕೊಪ್ಪಳ, ಬೆಂಗಳೂರಿನಿಂದ ಬರುವ ಬಸ್ ಗಳಲ್ಲಿ ಪ್ರಯಾಣಿಕರು ಬಂದಿಳಿವ ದೃಶ್ಯಗಳು ಲಭ್ಯವಾಗಿದೆ. ಸರ್ಕಾರದ ಸಂಧಾನ ವಿಫಲ ಮತ್ತು ಹೈಕೋರ್ಟ್ ಆದೇಶದ ನಡುವೆಯೂ KSRTC ಜಂಟಿ ಕ್ರಿಯಾ ಸಮಿತಿ ಪ್ರತಿಭಟನೆಗೆ ಕರೆನೀಡಿದ್ದವು. ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಕರ್ತವ್ಯಕ್ಕೆ ಹಾಜರಾಗದೆ ನೌಕರರು ಮುಷ್ಕರಕ್ಕಿಳಿಯಲಿದ್ದಾರೆ ಎಂದು ಸಂಘಟನೆ ತಿಳಿಸಿತ್ತು.
ಆದರೆ ಸಂಘಟನೆ ತಿಳಿಸಿದ ಹಾಗೆ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿ ಇಲ್ಲ. ಎಲ್ಲ ಬಸ್ ಗಳು ಡಿಪೋ ಸೇರಿಲ್ಲ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಕಂಡು ಬಂದಿದೆ. ಕೆಲ ಬಸ್ ಗಳ ಓಡಾಟ ಆರಂಭವಾಗಿದೆ. ಕೆಲ ಪ್ರಯಾಣಿಕರಿಗೆ ಬಸ್ ಕಂಡಕ್ಟರ್ ಗಳೆ ಎಲ್ಲಿಯ ವರೆಗೆ ಸಾಗಲು ಅವಕಾಶವಿದೆಯೋ ಅಲ್ಲಿಯವರೆಗೆ ಕರೆದುಕೊಂಡು ಹೋಗುವುದಾಗಿ ಪ್ರಯಾಣಿಕರಿಗೆ ತಿಳಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ. ಬಂದೋಬಸ್ತ್ ಗಾಗಿ KSRP ವಾಹನ ನಿಯೋಜಿಸಲಾಗಿದೆ.
KSRTC Bus ply at shivamogga Bus terminals