ad

ಕರ್ನಾಟಕ ರಾಜ್ಯ ಎಂದು ದೇವರಾಜ್ ಅರಸ್ ಹೆಸರಿಡದಿದ್ದರೆ ಟಿಪ್ಪು ಸಾಮ್ರಾಜ್ಯವೆಂದು ಹೆಸರಿಡುತ್ತಿದ್ದರು ಈಗಿನ ಕಾಂಗ್ರೆಸ್ ನಾಯಕರು-ಶಾಸಕ ಚೆನ್ನಿ-it would have been named after Tipu's empire

 SUDDILIVE || SHIVAMOGGA

ಕರ್ನಾಟಕ ರಾಜ್ಯ ಎಂದು ದೇವರಾಜ್ ಅರಸ್ ಹೆಸರಿಡದಿದ್ದರೆ ಟಿಪ್ಪು ಸಾಮ್ರಾಜ್ಯವೆಂದು ಹೆಸರಿಡುತ್ತಿದ್ದರು ಈಗಿನ ಕಾಂಗ್ರೆಸ್ ನಾಯಕರು-ಶಾಸಕ ಚೆನ್ನಿ-If Karnataka state had not been named after Devaraj Urs, it would have been named after Tipu's empire: Current Congress leaders-MLA Chenni

MLA, Chennabasappa


ಕಾಂಗ್ರೆಸ್ ನ ರಾಹುಲ್ ಗಾಂಧಿ ಒಬ್ವರೇ ಹುಚ್ಚರು ಎಂದು ಭಾವಿಸಿದ್ವಿ, ರಾಜ್ಯದಲ್ಲಿಯೂ ಅಂತಹ ಹುಚ್ಚ ನಾಯಕರಿದ್ದಾರೆ. ಹುಚ್ಚರ ಸಂತೆಯಂತೆಯಾಗಿದೆ ಕಾಂಗ್ರೆಸ್ ಎಂದು ಶಾಸಕ ಚೆನ್ನಬಸಪ್ಪ ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಮತ್ತು ಕಾಂಗ್ರೆಸ್ ಈ ದೇಶದ ಕ್ಷಮೆ ಕೇಳಬೇಕು. ಸಚಿವ ಸಂತೋಷ್ ಲಾಡ್ ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡುತ್ತಾರೆ. ಅತ್ಯಂತ ದೇಶಪ್ರೇಮಿ ಆದ ಮೋದಿಯನ್ನ ಹಗೂರವಾಗಿ ಮಾತನಾಡುತ್ತಾರೆ. ಅವರು ತಮ್ಮ ವರ್ತನೆಯನ್ನ ಬದಲಿಸಿಕೊಳ್ಳಬೇಕು ಎಂದರು. 

ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ. ನೀವು ನೆಲಸಮವಾಗುತ್ತೀರಿ. ಸಚಿವರ ಇಲಾಖೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕರ ಸಮಸ್ಯೆಯನ್ನ ಅಧ್ಯಾಯನ ಮಾಡಿ ಅವರ ಸಮಸ್ಯೆಯ ಬಗ್ಗೆ ಮಾತನಾಡುತ್ತೀವಿ ಎಂದು ಎಚ್ಚರಿಸಿದ ಶಾಸಕರು, ಚೀನಕ್ಕೆ ಶಕ್ತಿಕೊಡುವ ಬಗ್ಗೆ ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳುತ್ತದೆ. ಬಾಂಗ್ಲ ದೇಶಿಗರಿಗೆ ರೆಡ್ ಕಾರ್ಪೆಟ್ ಹಾಕಿ ದೇಶಕ್ಕೆ ಬನ್ನಿ ಎಂದು ನೆಹರೂ ಕಾಲದಲ್ಲಿ ಪಕ್ಷ ಕರೆದಿತ್ತು. ಅವರ ಅವಧಿಯಲ್ಲಿ 38 ಸಾವಿರ ಸ್ಕ್ವೇರ್ ಕಿಮಿ ಭಾರತದ ಜಾಗವನ್ನ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್. ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳದೆ ಹೋದರೆ ದೇಶದ ಜನ ಇನ್ನೂ ನೆಲಕಚ್ಚುವಂತೆ ಮಾಡುತ್ತಾರೆ ಎಂದು ಗದರಿಸಿದರು. 

ಮಾಡಬಾರದ ಅನಾಚಾರವನ್ನ‌ಮಾಡಿದ್ದು ಕಾಂಗ್ರೆಸ್, ದೇಶವನ್ನ ತುಂಡು ತುಂಡಾಗಿ ಕತ್ತರಿಸಿತ್ತು. ಅತ್ಯಾಚಾರಕ್ಕೆ ಅಡಿಗಲ್ಲು ಹಾಕಿದ್ದು ಕಾಂಗ್ರೆಸ್ ಇನ್ಮುಂದೆ ಗೌರವಿತವಾಗಿ ರಾಜಕಾರಣವನ್ನ‌ಮಾಡಬೇಕು. ಇಂದಿರಾಗಾಂಧಿಗೆ, ರಾಜೀವ್ ಗಾಂಧಿಹಗೆ ಪಾಠ ಕಲಿಸಿದ್ದು ಯಾರು ಎಂಬುದನ್ನ ಅರಿತುಕೊಳ್ಳಬೇಕಾದ ಪಕ್ಷದ ಜೊತೆ ನಮಗೆ  ವೈಯುಕ್ತಿಕ ದ್ವೇಷವಿಲ್ಲ. ದೇಶದ ಶಕ್ತಿ ಕುಸಿಯುವಂತೆ ಮಾಡಿದರೆ ಬಿಜೆಪಿ ಸುಮ್ಮನಿರೊಲ್ಲ ಎಂದು ಎಚ್ಚರಿಸಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ KSRTC ಪ್ರತಿಭಟನೆ ನಡೆಸುತ್ತಿದೆ. ಇದನ್ನ ಹೊಸದಾಗಿ ಹೇಳುತ್ತಿಲ್ಲ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ಸಾರಿಗೆ ನೌಕರರ ಬಗ್ಗೆ ಯಾವುದೇ ನಿರ್ಧಾರ ಮಾಡದೆ ಇದ್ದು, ಎಸ್ಮಾ ಜಾರಿ ಮಾಡುವ ಎಚ್ಚರಿಕೆಯನ್ನ ಸಿಎಂ‌ ಮಾಡಿದ್ದಾರೆ ಎಂದು ದೂರಿದರು. 

ಯಡಿಯೂರಪ್ಪನವರು ಸಾರಿಗೆ ನೌಕರರು ಪ್ರತಿಭಟಿಸುತ್ತಾರೆ ಎಂದಾಗ ಎಸ್ಮಾ ಜಾರಿ ಮಾಡುವ ಬಗ್ಗೆ ಮಾತನಾಡಿದಾಗ ನೌಕರರ ಸಮಸ್ಯೆಯನ್ನ‌ ಬಗೆಹರಿಸುವಷ್ಟು  ಶಕ್ತಿಯಿಲ್ವಾ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಈಗ ಎಸ್ಮಾ ಜಾರಿ ಬಗ್ಗೆ ಮಾತನಾಡಿದ್ದಾರೆ. ಇವರು ಯಾಕೆ ಸಾರಿಗೆ ನೌಕರರನ್ನ ವಿಶ್ವಾಸಕ್ಕೆ  ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. 

ಗ್ಯಾರೆಂಟಿ ಹಣ ಸರಿದೂಗಿಸಿಕೊಳ್ಳಲು ಸಾರಿಗೆ ನೌಕರರ ಬೇಡಿಕೆ ಈಡೇರಿಸುತ್ತಿಲ್ಲ. ಸಾರಿಗೆ ಸಂಸ್ಥೆಗೆ ಸಾವಿರಾರು ಕೋಟಿ ಹಣ ಕೊಡದ ಸರ್ಕಾರ ನೌಕರರ ಬಗ್ಗೆಯಾದರೂ ಕ್ರಮ ಕೈಗೊಳ್ಳಬೇಕು ಎಂದ ಶಾಸಕರು ದೇವರಾಜ್ ಅರಸ್ ನವರು ಕರ್ನಾಟಕ ರಾಜ್ಯ ಎಂದು ಹೆಸರಿಡದಿದ್ದರೆ ರಾಜ್ಯಕ್ಕೆ ಟಿಪ್ಪು ಸಾಮ್ರಾಜ್ಯವೆಂದು ಹೆಸರಿಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು‌.

it would have been named after Tipu's empire

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close