SUDDILIVE || HOSANAGARA
ಗಣೇಶೋತ್ಸವ ಹಿನ್ನಲೆ ಉಚಿತ ಅರೋಗ್ಯ ತಪಾಸಣೆ-Free health check-up ahead of Ganesh Chaturthi
ಸ್ವಾತಂತ್ರ್ಯ ಹೋರಾಟದ ಹಿನ್ನಲೆಯಲ್ಲಿ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಇಂದು ದೇಶದ ಗಲ್ಲಿ ಗಲ್ಲಿಗಳಲ್ಲಿ ಯುವಕರ ಸಂತೋಷವನ್ನಇಮ್ಮುಡಿಗೊಳಿಸಿದೆ. ಆದರೆ ಈ ಹಬ್ಬದ ಹಿನ್ನಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಹೊಸನಗರ ತಾಲೂಕಿನ ವಿಜಾಪುರದ ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಆವರಣದಲ್ಲಿ 51ನೇ ಗಣೇಶೋತ್ಸವ ಹಿನ್ನೆಲೆಯಲ್ಲಿ ರಕ್ತನಿಧಿ ವಿಭಾಗ ಮೆಗ್ಗನ್ ಆಸ್ಪತ್ರೆ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಊರಿನ ಪ್ರಮುಖ ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಪೇರಿತವಾಗಿ ರಕ್ತದಾನ ಮಾಡಿದರು. 26 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಶಿಬಿರದಲ್ಲಿ ಯುವಕರು ರಕ್ತದಾನ ಮಾಡುವ ಮೂಲಕ,ಜಾಗೃತಿ ಮೂಡಿಸಿದರು.
ಅರೋಗ್ಯ ತಪಾಸಣೆ ಭಾಗವಾಗಿ ಹಾಜರಾದವರಿಗೆ ರಕ್ತದೂತ್ತಡ, ಮಧುಮೇಹ, ಹಿಮೋಗ್ಲೋಬಿನ್, ಸಾಮಾನ್ಯ ಅರೋಗ್ಯ ತಪಾಸಣೆ ಉಚಿತವಾಗಿ ಮಾಡಲಾಯಿತು.ವೈದ್ಯಕೀಯ ಸಿಬ್ಬಂದಿಗಳು ಊರಿನ ಗ್ರಾಮಸ್ಥರಿಗೆ ಅರೋಗ್ಯ ಕಾಪಾಡಿಕೊಳ್ಳುವ ಆಗತ್ಯ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೆಗ್ಗನ್ ಆಸ್ಪತ್ರೆ ರಕ್ತ ನಿಧಿ ವಿಭಾಗದ ಸಿಬ್ಬಂದಿಗಳು. ಆಯುರ್ವೇದಿಕ್ ಆಸ್ಪತ್ರೆ ಡಾಕ್ಟರ್ ರಾಜೇಶ್ವರಿ, ವಿದ್ಯಾ ಗಣಪತಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Free health check-up ahead of Ganesh Chaturthi

