SUDDILIVE || SHIVAMOGGA
ರಾಗಿಗುಡ್ಡದಲ್ಲಿ ಆರ್ ಎಎಫ್ ಮತ್ತು ಎಸ್ಎಎಫ್ ರೂಟ್ ಮಾರ್ಚ್, ಹೂಗುಚ್ಚ ಹಾಕಿ ಸ್ವಾಗತ-RAF and SAF root march in Ragigudda, welcome with bouquets
ಗೌರಿ, ಗಣೇಶ ಮತ್ತು ಈದ್ ಹಬ್ಬದ ಪ್ರಯುಕ್ತ ಕಳೆದ ಒಂದು ತಿಂಗಳಿಂದ ಪೊಲೀಸ್ ಇಲಾಖೆ ರೂಟ್ ಮಾರ್ಚ್ ಗಳನ್ನ ಪೊಲೀಸ್ ಇಲಾಖೆ ಹಲವು ಠಾಣಾ ವ್ಯಾಪ್ತಿಯಲ್ಲಿ ನಡೆಸಿದೆ. ಇಂದು ಹಬ್ಬದ ದಿನವೂ ರಾಗಿಗುಡ್ಡದಲ್ಲಿ ಆರ್ ಎ ಎಫ್ ಮತ್ತು ಎಸ್ ಎಎಫ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ರೂಟ್ ಮಾರ್ಚ್ ನಡೆಸಿದ್ದಾರೆ.
ರಾಗಿಗುಡ್ಡದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆದ ಗಲಭೆ ಪ್ರಕರಣ ಮರೆಯುವ ಮುಂಚೆ ಕಳೆದ ಎರಡು ತಿಂಗಳ ಹಿಂದೆ ಬಂಗಾರಪ್ಪ ನವರ ಕಾಲೋನಿಯಲ್ಲಿ ಅನ್ಯ ಧರ್ಮೀಯರಿಂದ ವಿಗ್ರಹಗಳ ಹಾನಿಯಾಗಿತ್ತು. ಈ ವೇಳೆ ಸ್ವಲ್ಪ ಗೊಂದಲಗಳು ಉಂಟಾಗಿತ್ತು. ಇದನ್ನ ತಿಳಿಗೊಳಿಸಲು ಪೊಲೀಸ್ ಇಲಾಖೆ ಹರಸಾಹಸವನ್ನೇ ಮಾಡಿತ್ತು.
ಸೌಹಾರ್ಧ ಕ್ರಿಕೆಟ್ ಸಹ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಸ್ಥಳೀಯ ಸಂಘಸಂಸ್ಥೆಗಳು ಪ್ರಯತ್ನವೂ ಸಹ ಮರೆಯಲಾಗದು, ಪೊಲೀಸರ ಸಭೆಗಳು ಶಾಂತಿ ನೆಲೆಸಲು ಅನುವು ಮಾಡಿಕೊಟ್ಟಿದೆ. ಹಬ್ಬದ ದಿನದಂದೆ ಪೊಲೀಸ್ ಇಲಾಖ ಎರಡು ಕಡೆ ರೂಟ್ ಮಾರ್ಚ್ ಹಮ್ಮಿಕೊಂಡಿದೆ. ಒಂದು ರಾಗಿಗುಡ್ಡ ಮತ್ತೊಂದು ಕಡೆ ಸೂಳೆಬೈಲಿನಲ್ಲಿ ಹಮ್ಮಿಕೊಂಡಿದೆ.
ರಾಗಿಗಯಡ್ಡದಲ್ಲಿ ಸ್ಥಳೀಯರು ಪೊಲೀಸರ ರೂಟ್ ಮಾರ್ಚ್ ಗೆ ಹೂಗುಚ್ಚ ಹಾಕಿ ಸ್ವಾಗತಿಸಿದ್ದಾರೆ. ಈ ಸ್ವಾಗತದಿಂದ ಸ್ಥಳೀಯರು ಪೊಲೀಸರ ಜೊತೆ ಇರುವ ಸಂದೇಶವನ್ನ ರವಾನಿಸಿದ್ದಾರೆ. ಅಡಿಷನಲ್ ಎಸ್ಪಿ ಕಾರ್ಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್, ಕೋಟೆ ಒಇಐ ಹರೀಶ್ ಪಟೇಲ್, ಟ್ರಾಫಿಕ್ ಸಿಪಿಐ ದೇವರಾಜ್, ಗ್ರಾಮಾಂತರ ಠಾಣೆ ಪಿಐ ಸತ್ಯನಾರಾಯಣ ಮತ್ತು ಸಿಬ್ಬಂದಿಗಳು ರೂಟ್ ಮಾರ್ಚ್ ನಲ್ಲಿ ಭಾಗಿಯಾಗಿದ್ದರು. ರಾಗಿಗುಡ್ಡದಲ್ಲಿ ಕಳೆದ ಬಾರಿ 14 ಕಡೆ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರೆ ಈ ಬಾರಿ 17 ಕಡೆ ಪ್ರತಿಷ್ಠಾಪನೆ ಮಾಡಲಾಗಿದೆ.
RAF and SAF root march in Ragigudda, welcome with bouquets

