SUDDILIVE || SHIVAMOGGA
ಧರ್ಮಸ್ಥಳದ ಪ್ರಕರಣವನ್ನ ಎನ್ಐಎಗೆ ಕೊಡಿ-ಈಶ್ವರಪ್ಪ, ಸೆ.2 ರಂದು ಧರ್ಮಸ್ಥಳ ಶುದ್ಧೀಕರಣ-ಕಾಂತೇಶ್-Give the Dharmasthala case to the NIA - Eshwarappa, Dharmasthala will be cleaned on September 2 - Kantesh
ಧರ್ಮಸ್ಥಳ ಪ್ರಕರಣದಲ್ಲಿ ಹುಟ್ಟಿಕೊಂಡ ಅನುಮಾನುಗಳು ತೀರಿ ಹೋಗಿವೆ. ಚಿನ್ನಯ್ಯ ಮತ್ತು ಸುಜಾತ ಭಟ್ ಹೇಳಿಕೆ ಧರ್ಮಸ್ಥಳದ ಬಗ್ಗೆ ಇದ್ದ ಅನುಮಾನವನ್ನ ಪರಿಹಾರಿಸಿವೆ. ಆದರೆ ಈ ಪ್ರಕರದ ಹಿಂದಿನ ಷಡ್ಯಂತ್ರ ನಡೆಸಿದವರು ಬಹಿರಂಗವಾಗಬೇಕಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿನ್ನಯ್ಯ ಹಗಲಿನಲ್ಲಿ ಎಸ್ಐಟಿ ಜೊತೆ ಗುಂಡಿ ತೆಗೆಯುವುದರಲ್ಲಿ ಕಾಣಿಸಿಕೊಂಡರೆ ಸಂಜೆಯ ನಂತರ ಸೂತ್ರಧಾರಿಗಳ ಜೊತೆ ಸಭೆ ನಡೆಸುತ್ತಿದ್ದನು. ಮಹೇಶ್ ತಿಮರೋಡಿ, ಜಯಂತ್ ಮತ್ತಿತ್ತರ ಜೊತೆ ಸಭೆ ನಡೆಸಲಾಗುತ್ತಿದೆ. ಯೂಟ್ಯೂಬರ್ ಸಮೀರ್ ಸರೆಂಡರ್ ಆದರೂ ಅಧಿಕೃತವಾಗಿ ಆತನನ್ನ ಅರೆಸ್ಟ್ ಮಾಡಬೇಕು ಎಂದರು.
ಅಧಿಕೃತ ಬಂಧನ ಮಾಡಿ ತಪ್ಪಗಳು ಬಹಿರಂಗಗೊಳ್ಳಬೇಕು. ಧರ್ಮಸ್ಥಳದಲ್ಲಿ ದೊರಕದ ಬುರುಡೆ ಗ್ಯಾಂಗ್ ಬುರುಡೆನ ದೆಹಲಿಯವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಯಾವ ನಾಯಕರ ಜೊತೆ ಅವರ ಶಾಮೀಲಿದೆ ಗೊತ್ತಿಲ್ಲ. ಅವೆಲ್ಲ ಬಹಿರಂಗವಾಗಬೇಕು. ಮತ್ತು ಎಸ್ಡಿಪಿಐ ಹಾಗೂ ಸಮೀರ್ ಗೆ ಏನು ಸಂಬಂಧ, ಇವರುಗಳಿಗೆ ಹಿಂದೂ ದೇವಸ್ಥಾನದ ಬಗ್ಗೆ ಏನು ಸಂಬಂಧವೆಂದು ಪ್ರಶ್ನಿಸಿದ ಅವರು 12 ವರ್ಷದ ಹಿಂದೆ ಚರ್ಚೆ ಆಗಿದೆ. ಎಸ್ಐಟಿ ರಚನೆಗೆ ಧರ್ಮವಿರೋಧಿಗಳು, ದೇಶದ್ರೋಹಗಳಿದ್ದಾರೆ ಅಥವಾ ಎಡಪಂಥೀಯರ ಪಾತ್ರವಿದೆಯ ಎಂಬುದು ಬಹಿರಂಗವಾಗಬೇಕು.
ಚಿನ್ನಯ್ಯ, ಸುಜಾತ ಭಟ್, ಮೊದಲಾದವರುಹೊರತು ಪಡಿಸಿ ರಾಷ್ಟ್ರದ್ರೋಹಿ ಸಂಘಟನೆಗಳು ಈ ಪ್ರಕರಣದಲ್ಲಿ ಇವೆಯಾ? ಅಥವಾ ವಿದೇಶಿಗರು ಇದ್ದಾರಾ? ಮುಸ್ಲೀಂ ಸಂಘಟನೆ ಇದೆಯಾ ಎಂಬುದನ್ನ ಕಂಡುಹಿಡಿಯಲು ಎಸ್ಐಟಿ ಯಿಂದ ಆಗಲ್ಲ. ರಾಷ್ಟ್ರೀಯ ತನಿಖಾದಳಕ್ಕೆ ವಹಿಸಬೇಕು. ಧರ್ಮ ಉಳಿಸುವ ನಿಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳೆ ಸಹ ಎನ್ಐಗೆ ತನಿಖೆಗೆ ಕೊಟ್ಟರೆ ತಪ್ಪಿಲ್ಲ ಎಂದಿದ್ದಾರೆ. ಹಾಗಾಗಿ ಈ ಪ್ರಕರಣವನ್ನ ಎನ್ಐಎಗೆ ನೀಡಬೇಕು ಎಂದರು.
ಎಸ್ಐಟಿ ವರದಿ ಇನ್ನೂ ಬಂದಿಲ್ಲ. 400 ಮೂಳೆ ಸಿಕ್ಕಿದೆ ಎಫ್ಎಸ್ಎಲ್ ವರದಿ ಮಣ್ಣಿನ ವರದಿ ಬರಬೇಕು ಎನ್ನುವರು 18 ಅಡಿ ಗುಂಡಿ ತೆಗೆಸಬೇಕಾ? ಎಸ್ಐಟಿ ಮದ್ಯಾಂತರ ವರದಿಯನ್ನ ನೀಡಬೇಕಿತ್ತು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಚಿನ್ನಯ್ಯ ತಿಮರೋಡಿ, ಜಯಂತ್ ಯೂಟ್ಯೂಬರ್ ಗಳನ್ನ ಒದ್ದು ಒಳಗೆ ಹಾಕಬೇಕು. ಇದನ್ನ ನಾನು ಎಂದು ಮೊದಲಿನಿಂದಲೂ ಹೇಳುತ್ತಿದ್ದೆ. ಈ ಗ್ಯಾಂಗ್ ಬೆಳೆಯಲು ರಾಜ್ಯ ಸರ್ಕಾರದ ಸಹಾಯವಿದೆಯಾ? ಇವೆಲ್ಲಾ ಬಹಿರಂಗವಾಗಬೇಕು ಹಾಗಾಗಿ ಈ ಪ್ರಕರಣವನ್ನ ಎನ್ಐಎಗೆ ತನಿಖೆಗೆ ಕೊಟ್ಟರೆ ಸರ್ಕಾರದ ಪಾತ್ರನೂ ಎಷ್ಟಿತ್ತು ಎಂಬುದು ಹೊರಗೆ ಬರಲಿದೆ.
ಯೂಟ್ಯೂಬರ್ ನಿನ್ನೆ ಹೇಳಿಕೆ ಕೊಟ್ಟಿದ್ದ ಆತ ದಾಖಲಾತಿ ಇಲ್ಲದೆ ಹೇಳಿರುವುದಾಗಿ ಹೇಳಿದ್ದಾನೆ. ಇವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಈ ಬುರುಡೆ ಗ್ಯಾಂಗ್ ನ ಬಗ್ಗೆ ಹೊರಬಂದಿದೆ. ಪಾತ್ರದಾರಿಗಳು ಸೂತ್ರದಾರಿಗಳು, ಫಂಡಿಂಗ್ ಆಗಿರುವ ಬಗ್ಗೆ ಸಂಘಟನೆಗಳ ಪಾಲ್ಗೊಂಡಿರುವ ಬಗ್ಗೆ ಎಲ್ಲವೂ ತನಿಖೆಯಿಂದ ಬಹಿರಂಗಗೊಳ್ಳಬೇಕು ಇದು ಎಸ್ಐಟಿಯಿಂದ ಸಾಧ್ಯವಿಲ್ಲ ಎನ್ಐಎಯಿಂದ ಮಾತ್ರ ಸಾಧ್ಯ ಎಂದರು.
ಎಸ್ಐಟಿ ತನಿಖೆ ಮುಗಿಯಲಿ ಎಂದರೆ 10 ವರ್ಷ ತೆಗೆದುಕೊಳ್ಳುತ್ತದೆ. ಮದ್ಯಾಂತರ ವರದಿ ನೀಡಲು ಸರ್ಕಾರ ಹೇಳಬೇಕಿತ್ತು. ಮಧ್ಯಾಂತರ ವರದಿನೀಡಲು ಸರ್ಕಾರ ಅಡ್ಡ ಬರುತ್ತಿರುವುದೇಕೆ? ಎಂದು ಪ್ರಶ್ನಿಸಿದರು. ಪರಿಶುದ್ಧವಾಗಲು ಎನ್ಐಎ ತನಿಖೆಗೆ ಕೊಡಬೇಕು. ಪ್ರಕರಣ ಬಹುತೇಕವಾಗಿ ಏನು ಎಂಬುದು ಗೊತ್ತಾಗಿದೆ. ವೀರೇಂದ್ರ ಹೆಗಡೆಯವರ ಪಾತ್ರವಿಲ್ಲೆಂಬುದು ಗೊತ್ತಾಗಿದೆ. ಉಳಿದಿದ್ದನ್ನ ಎನ್ಐಎಗೆ ನೀಡಬೇಕು ಎಂದರು.
ಗುತ್ತಿಗೆದಾರ ಸಂಘ ಈ ಸರ್ಕಾರದಲ್ಲಿ ಭ್ರಷ್ಠಾಚಾರ ಹೆಚ್ಚಿದೆ ಎಂದು ಹೇಳಿದರೂ ಸರ್ಕಾರದ ಸಿಎಂ ಆಗಲಿ ಸಚಿವರಾಗಲಿ ಮಾತನಾಡುತ್ತಿಲ್ಲ. ಒಂದೋ ಸರ್ಕಾರದ ಸಿಎಂ ಮತ್ತು ಸಚಿವರು ಸ್ಪಷ್ಟನೆ ನೀಡಬೇಕು. ಇಲ್ಲ ಇದು ಸುಳ್ಳು ಎಂದರೆ ಗುತ್ತಿಗೆದಾರರ ಸಂಘದ ವಿರುದ್ಧ ಪ್ರಕರಣ ದಾಖಲಿಸಬೇಕೆಂದರು.
ಶಿವಮೊಗ್ಗದ ಗೋಪಿಶೆಟ್ಟಿ ಮತ್ತು ಗೋವಿಂದಾಪುರದಲ್ಲಿ ನಡೆದಿರುವ ಆಶ್ರಯ ಮನೆ ಹಂಚಿಕೆ ಸರಿಯಾಗಿಲ್ಲ. ಹಂಚಿಜೆಯಾದವರ ಮಬೆಯ ಬೀಗದ ಕೈನ್ನ ವಾಪಾಸ್ ಪಡೆದಿದ್ದಾರೆ. ಹಾಗಾಗಿ ಗುತ್ತಿಗೆದಾರರ ಸಂಘದ ಆರೋಪ ಸರಿಯಿದೆ. ಸರ್ಕಾರ ಸ್ಪಷ್ಟನೆ ನೀಡಬೇಕು ಎಂದ ಅವರು ಧರ್ಮಸ್ಥಳದಲ್ಲಿ ಕೇಳಿ ಬರುತ್ತಿರುವ ಎಂಪಿ ಸೇಂಥಿಲ್ ಅವರ ಪಾತ್ರವೂ ಕೇಳಿ ಬರುತ್ತಿದೆ. ಹಾಗಾಗಿ ಎನ್ಐಎಗೆ ನೀಡಬೇಕೆಂದರು.
ಭಾನು ಮಸ್ತಾಕ್ ಬಗ್ಗೆ ಟೀಕಿಸೊಲ್ಲ. ವಿಜಯ ದಶಮಿ ಉತ್ಸವ ಇಡೀ ದೇಶದಲ್ಲಿ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತೆ. ಭಾನು ಮುಶ್ತಾಕ್ ಅವರನ್ನ ಆಹ್ವಾನಿಸಲಾಗಿದೆ. ಚಾಮುಂಡಿ ದೇವಿಯನ್ನ ಪೂಜಿಸಿ ನಂತರ ದಸರಾಗೆ ಚಾಲನೆ ನೀಡಬೇಕು. ಶಿವಮೊಗ್ಗದಲ್ಲೂ ದಸರಾ ನಡೆದಿದೆ ಅನೇಕರು ಅನ್ಯ ಧರ್ಮಿಯ ತಹಶೀಲ್ದಾರ್ ಅವರು ಪೂಜೆ ಮಾಡಿ ಅಂಬುಕಡಿಯುತ್ತಾರೆ ಹಾಗೆ ಭಾನುಮುಷ್ತಾಕ್ ಅವರು ಚಾಮುಙಡಿ ತಾಯಿಯನ್ನಪೂಜಿಸಿ ದಸರಾಗೆ ಚಾಲನೆ ನೀಡಿಲಿವೆಂದರು
ಸೆ.2 ರಂದು ಗಂಗೆ ಮತ್ತು ತುಂಗೆಯ ತೀರ್ಥ ತೆಗೆದುಕೊಂಡು ಧರ್ಮಸ್ಥಳಕ್ಕೆ ಹೋಗಿ ಧರ್ಮಸ್ಥಳದ ವೃಂದದವರಿಂದ ಬೀದಿ ಬೀದಿಗಳಲ್ಲಿ ಶುದ್ದೀಕರಣಗೊಳಿಸಲಾಗುವುದು. ತುಂಗೆ ಮತ್ತು ಗಂಗೆಯ ಬಗ್ಗೆ ಧರ್ಮದಲ್ಲಿ ಪಾವಿತ್ರತೆಯಿದೆ ಎಂದು ಉಲ್ಲೇಖವಿದೆ ಹಾಗಾಗಿ ಅದರಿಂದ ಬೀದಿಗಳನ್ನಶುದ್ದೀಕರಣಗೊಳಿಸಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ತಿಳಿಸಿದರು.
Give the Dharmasthala case to the NIA