ad

ಮತಗಳ್ಳತನದ ವಿರುದ್ಧ ಜಿಲ್ಲಾ ಯುವಕಾಂಗ್ರೆಸ್ ನಿಂದ ಬಿತ್ತಿಪತ್ರ ಅಂಟಿಸುವ ಅಭಿಯಾನ- campaign against vote rigging in SHIVAMOGGA KSRTC bus stand

 SHIVAMOGGA || SHIVAMOGGA

ಮತಗಳ್ಳತನದ ವಿರುದ್ಧ ಜಿಲ್ಲಾ ಯುವಕಾಂಗ್ರೆಸ್ ನಿಂದ ಬಿತ್ತಿಪತ್ರ ಅಂಟಿಸುವ ಅಭಿಯಾನ-District Youth Congress holds poster-sticking campaign against vote rigging in SHIVAMOGGA KSRTC bus stand 

Shivamogga, KSRTC


ಮತಗಳ್ಳತನದ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಶಿವಮೊಗ್ಗ KSRTC  ಬಸ್ ನಿಲ್ದಾಣದ ಗೋಡೆ, ಆಟೋ ರಿಕ್ಷಾ,  ಬಸ್ ಗಳಿಗೆ 'ಸ್ಟಾಪ್ ಮತಗಳ್ಳತನ' ಎಂಬ ಸ್ಟಿಕ್ಕರ್ ಅಂಟಿಸಿ ಪ್ರತಿಭಟಿಸಿದೆ

ಪ್ರಧಾನಿ ಮೋದಿ ವಿರುದ್ಧ ಮತ್ತು ಚುನಾವಣೆ ಆಯೋಗ ವಿರುದ್ಧ ಘೋಷಣೆ ಕೂಗಲಾಯಿತು. ಚೋರ್ ನರೇಂದ್ರ ಮೋದಿಗೆ ದಿಕ್ಕಾರ, ಮತಗಳ್ಳತನದಿಂದ ಪ್ರಧಾನಿ ಆದ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ KSRTC ಬಸ್ ಗಳಿಗೆ ಸ್ಟಾಪ್ ಮತಗಳ್ಳತನದ ಸ್ಟಿಕ್ಕರ್ ಅಂಟಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ಮತಗಳ್ಳತನದಿಂದ ಪ್ರಧಾನಿ ಮೋದಿ ಇದುವರೆಗೆ ಚುನಾವಣೆ ಗೆಲ್ಲುತ್ತ ಬಂದಿದ್ದಾರೆ. ಅವರ ಗೆಲುವಿನ ಸೂಕ್ಷ್ಮತೆಯನ್ನ ರಾಹುಲ್ ಗಾಂಧಿ ಕಂಡುಹಿಡಿದು ನರೇಂದ್ರ ಮೋದಿಯವರ ಗೆಲುವಿನ ರಹಸ್ಯವನ್ನ ಬಹಿರಂಗ ಪಡಿಸಿದ್ದಾರೆ. ಪ್ರಧಾನಿ ಮೋದಿ ರಾಜೀನಾಮೆ ನೀಡಿ ಮರು ಆಯ್ಕೆಯಾಗಲಿ ಎಂದು ಆಗ್ರಹಿಸಿದರು. 

ಬಸ್ ನಿಲ್ದಾಣದಲ್ಲಿ ಆಕ್ಷೇಪಣೆ

ಬಸ್ ನಿಲ್ದಾಣದಲ್ಲಿ ಸಾರಿಗೆ ವಾಹನ ಮತ್ತು ಕಟ್ಟಡದ ಮೇಲೆ ಜಿಲ್ಲಾ ಯುವ ಕಾಂಗ್ರೆಸ್ ಬಿತ್ತಿಪತ್ರ ಅಂಟಿಸುತ್ತಿರುವುದನ್ನ ಶಿವಮೊಗ್ಗ KSRTC ಬಸ್ ನಿಲ್ದಾಣದ ಕರ್ತವ್ಯ ನಿರತ ಅಧಿಕಾರಿಗಳು ಆಕ್ಷೇಪಿಸಿದ್ದಾರೆ. ಬಸ್ ಗಳಿಗೆ ಬಿತ್ತಿಪತ್ರ ಅಂಟಿಸಲು ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ. ನಂತರ ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ ಗಳಿಗೆ ಬಿತ್ತಿಪತ್ರ ಅಂಟಿಸುವುದನ್ನ‌ ನಿಲ್ಲಿಸಿದೆ. 

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್, ವಿಜಯಕುಮಾರ್, ಬಾಲಾಜಿ, ಚೇತನ್ ಗೌಡ ಮೊದಲಾದವರು ಈ ಮತಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close