ಭದ್ರಾವತಿಯಲ್ಲಿ ಮನೆ ಕಳ್ಳತನ ಆರೋಪಿಗಳ ಬಂಧನ-House bulgary accused arrest in Bhadravathi

SUDDILIVE || BHADRAVATHI

ಭದ್ರಾವತಿಯಲ್ಲಿ ಮನೆ ಕಳ್ಳತನ ಆರೋಪಿಗಳ ಬಂಧನ-House bulgary accused arrest in Bhadravathi

ಆ.18 ರಂದು 5ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ಎಂಬುವರ ವಾಸದ ಮನೆಯ ಬೀರುವಿನಲ್ಲಿದ್ದ 95 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗುರುವ ಬಗ್ಗೆ ಭದ್ರಾವತಿ ಪೇಪರ್ ಟೌನ್ ನಲ್ಲಿ ದೂರು ದಾಖಲಾಹಿದ್ದವು.‌

ನಂತರದ ಪ್ರಕರಣದಲ್ಲಿ ಆರೋಪಿಗಳನ್ನು ಮತ್ತು ಮಾಲು ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಜಿಲ್ಲೆ, ಮತ್ತು ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ, ಜಿಲ್ಲೆ, ರಮೇಶ್ ಕುಮಾರ್ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ, ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಹಾಗೂ ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ ಆರ್ ನಾಗರಾಜ ರವರ ಮೇಲ್ವಿಚಾರಣೆಯಲ್ಲಿ, ಶ್ರೀಮತಿ ನಾಗಮ್ಮ ಕೆ ಪೊಲೀಸ್ ನಿರೀಕ್ಷಕರು ಪೇಪರ್ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಶ್ರೀ ರತ್ನಾಕರ್ ಎ ಎಸ್ ಐ, ಸಿಹೆಚ್ ಸಿ 89 ಪ್ರಕಾಶ, ಸಿಹೆಚ್ ಸಿ 372 ಅರುಣ್, ಸಿಹೆಚ್ಸಿ 16 ನಾಗರಾಜ ಎಂ ಸಿಪಿಸಿ 1276, ಸಿಪಿಸಿ 1460 ಹನುಮಂತ, ಮಪಿಸಿ 1640 ಆಸ್ಮಾ, ಮಪಿಸಿ 1771 ಸ್ವೀಕೃತ, ಮಪಿಸಿ 1829 ಅನುರೂಪ ಇವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 

House, Bulgary

ತನಿಖಾ ತಂಡವು  ಆ.30  ರಂದು ಪ್ರಕರಣದ ಆರೋಪಿತರುಗಳಾದ 1) ಮಂಜುಳಾ ಆರ್, 21 ವರ್ಷ, ವಾಸ ಕೆಂಗೇರಿ ಬೆಂಗಳೂರು. 2) ಸುಜೈನ್ ಖಾನ್, 24 ವರ್ಷ, ವಾಸ ಕೆಂಗೇರಿ ಬೆಂಗಳೂರು ರವರುಗಳನ್ನು ವಶಕ್ಕೆ ಪಡೆದು,  ಕಳ್ಳತನ ಮಾಡಿದ್ದ ಅಂದಾಜು 7,82,000/- ರೂ ಮೌಲ್ಯದ 83 ಗ್ರಾಂ ತೂಕದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ, ಜಿಲೆ. ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Home bulgary accused arrest in Bhadravathi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close