ಇಂದಿನಿಂದ ಬೆಂಗಳೂರು ಮತ್ತು ಮೈಸೂರು ಕಡೆ ಹೋಗುವ ರೈಲ್ವೆ ಪ್ರಯಾಣಿಕರ ಗಮನಕ್ಕೆ-Attension to railway passangers

 SUDDILIVE || SHIVAMOGGA

ಇಂದಿನಿಂದ ಬೆಂಗಳೂರು ಮತ್ತು ಮೈಸೂರು ಕಡೆ ಹೋಗುವ ರೈಲ್ವೆ ಪ್ರಯಾಣಿಕರ ಗಮನಕ್ಕೆ-Attension to railway passangers

Attension, railway


ಶಿವಮೊಗ್ಗದಿಂದ ಹೊರಡುವ ಮತ್ತು ಶಿವಮೊಗ್ಗಕ್ಕೆ ತಲುಪುವ ರೈಲುಗಳಸೇವೆಯಲ್ಲಿ ಇಂದು ಸೇರಿದಂತೆ ಸೆಪ್ಟಂಬರ್ ತಿಂಗಳ ನಾಲ್ಕು ದಿನಗಳು ವ್ಯತ್ಯಯವಾಗಿದೆ. ಆ.31, ಸೆ.1, 8, 14 ಮತ್ತು15 ರಂದು ರೈಲು ಸೇವೆಗಳ ರದ್ದು, ನಿಯಂತ್ರಣ ಮತ್ತು ಮರು ನಿಗದಿಗೊಳ್ಳುತ್ತಿವೆ. 

ಬೀರೂರು-ಶಿವಪುರ, ಬೀರೂರು-ತಾಳಗುಪ್ಪ ಹಾಗೂ ಬೀರೂರು-ನಾಗವಂಗಲ ಸ್ಟೇಷನ್‌ಗಳ ನಡುವೆ ಲೈನ್ ಮತ್ತು ವಿದ್ಯುತ್ ತಡೆ ಹಾಗೂ ಎನ್‌.ಎಚ್.-206 ರಲ್ಲಿ ಎನ್‌ಎಚ್‌ಎಐ ರಸ್ತೆ ಮೇಲ್ಸೇತುವೆಗೆ (ಆರ್.ಓ.ಬಿ) ಬೋಸ್ಟ್ರಿಂಗ್ ಗರ್ಡರ್ ಅಳವಡಿಸುವ ಕಾರ್ಯಕ್ಕಾಗಿ (ಎಲ್‌.ಸಿ ಸಂಖ್ಯೆ 128 ಮತ್ತು 2 ಬದಲಿಗೆ) ಕೆಳಕಂಡ ಕೆಲವು ರೈಲುಗಳು ರದ್ದುಗೊಳ್ಳುತ್ತವೆ, ನಿಯಂತ್ರಣಕ್ಕೊಳಪಡುತ್ತವೆ ಹಾಗೂ ಮರುನಿಗದಿಗೊಳ್ಳುತ್ತವೆ:

ರದ್ದುಪಡಿಸಿದ ರೈಲುಗಳು

ರೈಲು ಸಂಖ್ಯೆ. 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಆ. 31, ಸೆ.1, ಸೆ.8, ಸೆ.14 ಮತ್ತು ಸೆ. 15  ರಂದು ರದ್ದಾಗಲಿದೆ. ರೈಲು ಸಂಖ್ಯೆ. 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ ಸೆ.1, 2, 9, 15 ಮತ್ತು 16 ಸೆಪ್ಟೆಂಬರ್ 2025 ರಂದು ರದ್ದಾಗಲಿದೆ. ರೈಲು ಸಂಖ್ಯೆ. 16214 ಎಸ್ಎಸ್ಎಸ್ ಹಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದಾಗಲಿದೆ. 

ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ ಸೆ. 9 ರಂದು ರೈಲು ಸಂಖ್ಯೆ. 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಸೆ 8 ರಂದುರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದಾಗಲಿದೆ

ಮರುನಿಗದಿಪಡಿಸಿದ ರೈಲುಗಳು

ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಶಿವಮೊಗ್ಗ ಟೌನ್ ನಿಂದ ಸೆ. 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 75 ನಿಮಿಷ ತಡವಾಗಿ ಹೊರಡಲಿದೆ. ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ ಅರಸೀಕೆರೆಯಿಂದ ಸೆ. 1, 2, 15 ಮತ್ತು 16 ರಂದು  45 ನಿಮಿಷ ತಡವಾಗಿ ಹೊರಡಲಿದೆ.

ನಿಯಂತ್ರಿತ ರೈಲುಗಳು

ರೈಲು ಸಂಖ್ಯೆ. 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 75 ನಿಮಿಷ ನಿಯಂತ್ರಿಸಲಾಗುವುದು. ರೈಲು ಸಂಖ್ಯೆ. 56272 ಚಿಕ್ಕಮಗಳೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 30 ನಿಮಿಷ ನಿಯಂತ್ರಿಸಲಾಗುವುದು.

Attension to railway passangers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close