SUDDILIVE || SHIVAMOGGA
ಇ-ಚಲನ್ ದಂಡಕ್ಕೆ ಭರಪೂರ ಸ್ಪಂಧನೆ-Huge response to e-challan fine
ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಸಂಖ್ಯೆ ಟಿಡಿ 27 ಟಿಡಿಓ 2023 ಬೆಂಗಳೂರು ದಿನಾಂಕಃ 21-08-2025 ರ ರೀತ್ಯಾ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇಕಡಾ 50% ರಷ್ಟು ರಿಯಾಯಿತಿಯನ್ನು ನೀಡಿ ಆದೇಶಿಸಿರುತ್ತದೆ.
ಶಿವಮೊಗ್ಗ ಜಿಲ್ಲೆಯ ಸಂಚಾರ ಪೊಲೀಸರಿಂದ ದಿನಾಂಕಃ 23-08-2025 ರಿಂದ ಈ ವರೆಗೆ ಒಟ್ಟು 5709 ಇ-ಚಲನ್ ಗಳನ್ನು ಮುಕ್ತಾಯ ಮಾಡಿ ಒಟ್ಟು ₹ 23,49,450/- ದಂಡದ ಹಣವನ್ನು ಸಂಗ್ರಹಿಸಲಾಗಿದೆ.
ಸಾರ್ವಜನಿಕರಿಂದ ಈ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆದೊರತಿದ್ದು, ಈ ಆದೇಶವು ದಿನಾಂಕಃ 23-08-2025 ರಿಂದ 12-09-2025 ರವರೆಗೆ ಜಾರಿಯಲ್ಲಿರಲಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
Huge response to e-challan fine