ad

ಬಸ್ ಪಲ್ಟಿ, ಶಿವಮೊಗ್ಗದಲ್ಲಿ ಧರೆಗುರುಳಿದ ಮರ- Bus overturns, tree falls in Shivamogga

SUDDILIVE || SHIKARIPURA|| SHIVAMOGGA

ಬಸ್ ಪಲ್ಟಿ, ಶಿವಮೊಗ್ಗದಲ್ಲಿ ಧರೆಗುರುಳಿದ ಮರ-Bus overturns, tree falls in Shivamogga

Overturns, treefalls

ಶಿಕಾರಿಪುರದ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಪಲ್ಟಿ ಹೊಡೆದರೆ, ಶಿವಮೊಗ್ಗದ ಲಕ್ಷ್ಮೀ ಚಲನಚಿತ್ರ ಮಂದಿರದ ಬಳಿ ಮರವೊಂದು ಧರೆಗುರುಳಿದೆ. 

ಶಿಕಾರಿಪುರದ ಸದಾಶಿವಪುರ ತಾಂಡದಲ್ಲಿ ಹಾದು ಹೋಗುವ ಹೊನ್ನಾಳಿ ರಸ್ತೆಯಲ್ಲಿ ಆನವಟ್ಟಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಗದ್ದೆಯ ಅಂಚಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಸುಮಾರು 20 ಜನ ಪ್ರಯಾಣಿಕರಿದ್ದ ಬಸ್ ನ ಪ್ರಯಾಣಿಕರಿಗೆ ಗಾಯಗಳಾಗಿವೆ. 


ಅದೃಷ್ಠವಶಾತ್ ಯಾವ ಪ್ರಯಾಣಿಕನಿಗೂ ಮತ್ತು ಚಾಲಕ ನಿಯಂತ್ರಿಕರಿಗೂ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಶಿವಮೊಗ್ಗದಿಂದ ಬಸವಾಸಿಗೆ ಹೊರಟಿದ್ದ ಖಾಸಗಿ ಬಸ್ ನ್ಯಾಮತಿ ಮೂಲಕ ಶಿಕಾರಿಪುರದ ಜೀನಹಳ್ಳಿ ಶಿಕಾರಿಪುರ, ಶಿರಾಳಕೊಪ್ಪ ಸೊರಬ ಮೂಲಕ ಬಸವಾಸಿಗೆ ತೆರಳುವ ಬಸ್ ಇದಾಗಿತ್ತು.

ಜೀನಹಳ್ಳಿ ಮೂಲಕ ಶಿಕಾರಿಪುರ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸದಾಶಿವಪುರ ತಾಂಡದ ಕೆರೆ ಏರಿಯಾದ ಮೇಲೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿ ಹೊಡೆದಿದೆ. ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಇಂದು ಬೆಳಿಗ್ಗೆ 8-10 ಕ್ಕೆ ಸಂಭವಿಸಿದೆ. 


ಶಿವಮೊಗ್ಗದಲ್ಲಿ ಧರೆಗುರುಳಿದ ಬೃಹದಾಕಾರದ ಮರ

Overturns, treefalls

100 ಅಡಿ ರಸ್ತೆಗೆ ಅಡ್ಡಲಾಗಿ ಬೃಹತ್‌ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್‌ ಅನಾಹುತ ತಪ್ಪಿದೆ. ಲಕ್ಷ್ಮೀ ಟಾಕೀಸ್‌ ಸಮೀಪ ಫ್ರೀಡಂ ಪಾರ್ಕ್‌ನ ಕಾಂಪೌಂಡ್‌ ಪಕ್ಕದಲ್ಲಿಯೆ ಇದ್ದ ಮರ ಧರೆಗುರುಳಿದೆ. ಗಾಳಿ, ಮಳೆಯಿಂದಾಗಿ ಮರ ಉರುಳಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಟ್ರಾಫಿಕ್‌ ಸಿಗ್ನಲ್‌ ಬಿಟ್ಟ ಕೆಲವೇ ಕ್ಷಣದಲ್ಲಿ ಮರ ಉರುಳಿದೆ. ಹಾಗಾಗಿ ರಸ್ತೆಯಲ್ಲಿ ವಾಹನಗಳು ಇರಲಿಲ್ಲ. ದೊಡ್ಡ ಅನಾಹುತ ತಪ್ಪಿದಂತಾಗಿದೆ.


ಮರ ತೆರವು ಕಾರ್ಯಚರಣೆ ನಡೆದಿದೆ. ಇನ್ನು, ಮರ ಉರುಳಿರುವುದರಿಂದ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮತ್ತೊಂದು ಬದಿಯಲ್ಲಿ ಎರಡು ದಿಕ್ಕಿನಲ್ಲಿ ವಾಹನಗಳು ಸಂಚರಿಸುತ್ತಿವೆ. ಹಾಗಾಗಿ ಲಕ್ಷ್ಮೀ ಟಾಕೀಸ್‌ ಸಮೀಪ ಸಂಚಾರ ದಟ್ಟಣೆ ಉಂಟಾಗಿದೆ.

Bus overturns, tree falls in Shivamogga



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close