ad

ನಿಯಮ ಬಾಹಿರವಾಗಿ ಸನ್ ಗ್ಲಾಸ್ ಅಳವಡಿಕೆ, ಜಿಪಂ ವಾಹನಕ್ಕೆ ಹೇಳೊರಿಲ್ಲ ಕೇಳೋರಿಲ್ಲ..! Illegally wearing sunglasses

 SUDDILIVE || SHIVAMOGGA

ನಿಯಮ ಬಾಹಿರವಾಗಿ ಸನ್ ಗ್ಲಾಸ್ ಅಳವಡಿಕೆ, ಜಿಪಂ ವಾಹನಕ್ಕೆ ಹೇಳೊರಿಲ್ಲ ಕೇಳೋರಿಲ್ಲ..!Illegally wearing sunglasses, no one told or listened to the ZP vehicle..!

Illegally, sunglasses


ಜಿಲ್ಲಾ ಪಂಚಾಯತ್ ಯೋಜನಾ (ಅಭಿವೃದ್ಧಿ)ಯ ಅಧಿಕಾರಿಗಳಿಗೆ ಕೊಟ್ಟಿರುವ ಬೊಲೆರೋ ವಾಹನದಲ್ಲಿ ಶೇ 50 ಪಾರದರ್ಶಕ ಇಲ್ಲದೆ ವಾಹನಕ್ಕೆ ಕೂಲಿಂಗ್ ಪೇಪರ್ ಹಾಕಲಾಗಿದೆ. ಇಷ್ಟೆಲ್ಲಾ ಆದರೂ ಆರ್ ಟಿಒ ಗಳಾಗಲಿ, ಟ್ರಾಫಿಕ್ ಪೊಲೀಸರಾಗಲಿ ಕಣ್ಣು ಮುಚ್ಚಿ ಕುಳಿತಿದ್ದಾರಾ ಎಂಬ ಪ್ರಶ್ಬೆ ಮೂಡಿದೆ. 

ಜಿಲ್ಲಾ ಪಂಚಾಯತ್ ಯೋಜನಾ (ಅಭಿವೃದ್ಧಿ) ಮಹಿಳಾ ಅಧಿಕಾರಿಗೆ ಓಡಾಡಲು ಬೊಲೆರೋ ವಾಹನ ನೀಡಲಾಗಿದೆ. ಸುಪ್ರೀಂ ಕೋರ್ಟ್  ಆದೇಶದ ಹಿನ್ನಲೆಯಲ್ಲಿ ವಾಹನಗಳ ಕಿಟಕಿ ಮತ್ತು ವೀಂಡ್ ಶೀಲ್ಡ್ ಗ್ಲಾಸ್ ಗಳಿಗೆ ಕೂಲಿಂಗ್ ಪೇಪರ್ ಹಾಕುವುದನ್ನ ನಿಷೇಧಿಸಿದೆ. ಮುಂದಿನ ವಿಂಡ್ ಶೀಲ್ಡ್ ಗ್ಲಾಸ್ ಗಳಲ್ಲಿ ಶೇ.70 ರಷ್ಟು ಪಾರದರ್ಶಕವಿರಬೇಕು. ಮತ್ತು ಕಿಡಕಿ ಮತ್ತು ಹಿಂಬದಿಯ ಗ್ಲಾಸ್ ಗಳಲ್ಲಿ ಶೇ50 ವಿಂಡ್ ಶೀಲ್ಡ್ ಟ್ರಾನ್ಸಪರೆಂಟ್ ಇರಬೇಕು ಎಂಬ ಕಾನೂನು ಜಾರಿ ಮಾಡಲಾಗಿದೆ. 

ಈ ಆದೇಶವನ್ನ ಸುಪ್ರೀಂಕೋರ್ಟ್ ಜಾರಿ ಮಾಡಿ ದಶಕಗಳೆ ಕಳೆದಿದೆ. ಆದರೆ ಸಂಬಂಧ ಪಟ್ಟ ಇಲಾಖೆಗಳು ಕಣ್ಣುಮುಚ್ಚಿ ಕುಳಿತ ಪರಿಣಾಮ ಸನ್ ಗ್ಲಾಸೆಸ್ ಗಳು ಮತ್ತೆ ತಲೆ ಎತ್ತಿವೆ. ಕಿಟಕಿ ಕಡೆಯ 50% ಪಾರದರ್ಶಕತೆ ಕಾಣಬೇಕೆಂಬ ನಿಯಮ ಗಾಳಿಗೆ ತೂರಲಾಗಿದೆ. ಇತರೆ ದಂಡ ಪೀಕಿಸುವಲ್ಲೇ ಇಲಾಖೆಗಳ ಗಮನ ಹರಿಯುತ್ತಿರುವುದರಿಂದ ಈ ಕಾನೂನು ಜಾರಿಯಿಲ್ಲವೆಂಬಂತಾಗಿದೆ. 

ಈ ಬಗ್ಗೆ ಮಾಧ್ಯಮಗಳಿಗೆ ಉತ್ತರಿಸಿರುವ ಜಿಪಂನ  ಮಹಿಳಾ ಅಧಿಕಾರಿ ನನ್ನ ರಕ್ಷಣೆಗೆ ಸನ್ ಗ್ಲಾಸೆಸ್ ನ ಮೊರೆ ಹೋಗಿರುವುದಾಗಿ ತಿಳಿಸಿದ್ದಾರೆ. ರಕ್ಷಣೆಗೆ ಪೊಲೀಸ್ ಠಾಣೆಗೆ ಅರ್ಜಿಕೊಟ್ಟು ಪೊಲೀಸ್ ಸಿಬ್ವಂದಿಗಳನ್ನ ನೇಮಿಸಿಕೊಳ್ಳುತ್ತಾರಾ? ಅಥವಾ ಸನ್ ಗ್ಲಾಸ್ ಮೊರೆ ಹೋಗುತ್ತಾರೋ ಎಂಬ ಗೊಂದಲ್ಲಿ ಮಾಧ್ಯಮವಿದೆ. 

ಜಿಲ್ಲಾ ಪಂಚಾಯತ್ ಸಿಇಒಗಳನ್ನೇ ನೀವು ಕೇಳಿ ಬೇಕಾದರೆ ಎಂಬ ಉಡಾಫೆ ಉತ್ತರವನ್ನ‌ ಮಹಿಳಾಧಿಕಾರಿಗಳು ನೀಡಿತ್ತಿರುವುದರಿಂದ ಜಿಪಂ ಸಿಇಒ ಸಹ ಇವರ ಬೆನ್ನಿಗೆ ನಿಂತಿರುವ ಶಂಕೆಯಿದೆ. ಒಟ್ಟಿನಲ್ಲಿ ಕಾನೂನು ಕ್ರಮಗಳು ಗಾಳಿಗೆ ತೂರಿ ವಸೂಲಿ ಗಿರಾಕಿಗಳಂತೆ ಇಲಾಖೆಯವರು ಕಂಗೊಳಿಸುತ್ತಿರುವುದರಿಂದ ಇಂತಹ ಸಣ್ಣಪುಟ್ಟ ನಿಯಮಗಳ ಕತ್ತುಹಿಸಕಲಾಗಿದೆ. 

Illegally wearing sunglasses

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close