SUDDILIVE || SHIVAMOGGA
ಅನುಮಾನಸ್ಪದ ಸಾವು-Suspicious death
ಮನೆಯಲ್ಲಿ ಅನುಮಾನಸ್ಪಾದವಾಗಿ ಮೃತಪಟ್ಟ ತಟ್ಟೆಹಳ್ಳಿ ನಿವಾಸಿ ಈಶ್ವರ್ (೪೭) ಸಾವು ಕೊಲೆ ಎಂದು ಆರೋಪಿಸಿ ಮೃತನ ಪೋಷಕರು ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಟ್ಟೆಹಳ್ಳಿ ನಿವಾಸಿ ಈಶ್ವರ್ ಹುಟ್ಟು ಮೂಗ ಈಶ್ವರ ದಂಪತಿಗಳು ಕಲ್ಲಿಹಾಳ್ ಸಕರ್ಲ್ನಲ್ಲಿ ಇಸ್ತಿç ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದರು. ಮೂಕಪ್ಪ ದಂಪತಿಗಳೊಟ್ಟಿಗೆ ಕೆಲ ದಿನಗಳಿಂದ ಪ್ರದೀಪ ಎಂಬ ಯುವಕನೊಬ್ಬ ವಾಸವಿದ್ದ ಎನ್ನಲಾಗುತ್ತಿದೆ. ಶನಿವಾರ ಬೆಳಗ್ಗೆ ಮುಕಪ್ಪ ಮನೆಯಲ್ಲಿ ಮಲಗಿದಲ್ಲೆ ಮೃತ ಪಟ್ಟಿದ್ದಾನೆ.
ಶುಕ್ರವಾರ ಮೂಕಪ್ಪ ಪತ್ನಿ ರತ್ನಮ್ಮ ಹಾಗೂ ಯುವಕ ಪ್ರದೀಪ ದೊಡ್ಡಬಳ್ಳಾಪುರದ ದೇವಸ್ಥಾನವೊಂದಕ್ಕೆ ಹೋಗಿದ್ದಾರೆ. ಶನಿವಾರ ವಾಪ್ಪಾಸ್ ಮನೆಗೆ ಬಂದು ನೋಡಿದಾಗ ಮೂಕಪ್ಪ ಮಲಗಿದ ಸ್ಥಳದಲ್ಲೆ ಮೃತಪಟ್ಟಿದ ಎನ್ನಲಾಗುತ್ತಿದೆ. ಪಾಲಕರು ನೀಡಿದ ದೂರಿನ ಮೆರೆಗೆ ತನಿಖೆ ನಡೆಸಿದ ಪೊಲೀಸರಿಗೆ ಮೂಕಪ್ಪನ ಪತ್ನಿ ಹಾಗೂ ಪ್ರದೀಪ್ ಬಸ್ ಪ್ರಯಾಣದ ಟಿಕೆಟ್‌ಗಳನ್ನು ತೋರಿಸಿ ತಾವುಗಳು ಊರಲ್ಲೆ ಇರಲಿಲ್ಲ ಎಂದು ಸಮಾಜಾಹಿಸಿ ನೀಡಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಘಟನೆ ನಡೆದ ಜಾಗದಲ್ಲಿ ಕೊಲೆ ಎಂದು ಬಿಂಬಿಸುವ ದೃಷ್ಯಗಳು ಕಂಡು ಬಂದಿಲ್ಲ ಎನ್ನಲಾಗುತ್ತಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತ್ತು. ಹೊಳೆಹೊನ್ನೂರು ಪೊಲೀಸರು ಯುವಕನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಶವ ಪರೀಕ್ಷೆ ವರದಿ ನಂತರ ಪ್ರಕರಣ ಸತ್ಯತೆ ತಿಳಿದು ಬರಬೇಕಿದೆ.
Suspicious death