SUDDILIVE || SHIVAMOGGA
ರಸ್ತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿ :- ಪಾಲಿಕೆ ಆಯುಕ್ತರಿಗೆ SDPI ಮನವಿ-Install electric lights on the road: SDPI appeals to the Municipal Commissioner
ರಾಮೇನಕೊಪ್ಪದ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದು ಅದರಲ್ಲಿ ವಿದ್ಯುತ್ ದೀಪಗಳೇ ಹತ್ತದಿರುವ ಬಗ್ಗೆ ಎಸ್ ಡಿ ಪಿಐ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ.31 ರಲ್ಲಿ ನಾರಾಯಣ ಹೃದಯಾಲಯದ ಪಕ್ಕದಲ್ಲಿರುವ ರಾಮೇನಕೊಪ್ಪ ಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 55 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು ಇದರಲ್ಲಿ ಕೇವಲ 5 ಕಂಬಗಳಲ್ಲಿ ಮಾತ್ರ ಬೀದಿ ದೀಪಗಳು ಉರಿಯುತ್ತಿವೆ.
ಈ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರು, ಸಾರ್ವಜನಿಕರು ದಿನನಿತ್ಯ ಸಂಚರಿಸುವ ರಸ್ತೆಯಾಗಿದ್ದು ಕತ್ತಲಾದರೆ ಈ ರಸ್ತೆಯಲ್ಲಿ ಓಡಾಡಲು ಬಹಳ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ಸಂಚರಿಸುವಾಗ ರಸ್ತೆ ಮಧ್ಯದಲ್ಲಿ ಜಾನುವಾರುಗಳು ಓಡಾಡುವುದರಿಂದ, ರಸ್ತೆಯ ಅಕ್ಕಪಕ್ಕದಲ್ಲಿ ಗಿಡ ಮರಗಳು ಬೆಳೆದು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಮತ್ತು ಈ ರಸ್ತೆಯ ಪ್ರಸ್ತುತ ಸ್ಥಿತಿ ಕಳ್ಳರಿಗೆ ಅನುಕೂಲವಾಗುವ ರೀತಿಯಲ್ಲಿದೆ. ಆದ್ದರಿಂದ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಇವರ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಶಿವಮೊಗ್ಗ ಜಿಲ್ಲಾ ಪ್ರ.ಕಾರ್ಯದರ್ಶಿ ಇಮ್ರಾನ್ ಅಹ್ಮದ್, ಜಿಲ್ಲಾ ಕಾರ್ಯದರ್ಶಿ ಮನ್ಸೂರ್ ಅಲಿಖಾನ್, ರಾಮೇನಕೊಪ್ಪ ನಿವಾಸಿಗಳಾದ ಮುಜಾಹಿದ್, ಬರ್ಕತ್, ಅದ್ನಾನ್ ರವರು ಹಾಜರಿದ್ದರು.
Install electric lights on the road: SDPI appeals