ad

ಒಳಮೀಸಲಾತಿಯನ್ನ‌ ಪುನರ್ ಪರಿಶೀಲಿಸಿ-Internal reservation has been reviewed

 SUDDILIVE || SHIVAMOGGA

ಒಳಮೀಸಲಾತಿಯನ್ನ‌ ಪುನರ್ ಪರಿಶೀಲಿಸಿ-Internal reservation has been reviewed

ಅಖಿಲ ಕರ್ನಾಟಕ ಕೊರಚ ಮಹಾಸಂಘವು ಸರ್ಕಾರದ ಒಳಮೀಸಲಾತಿಯನ್ನ ಪುನರ್ ಪರಿಶೀಲಿಸುವಂತೆ ಆಗ್ರಹಿಸಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾ ಸಂಘದ ಸುರೇಶ್, ಮೀಸಲಾತಿಯನ್ನ ಬಲ ಸಮುದಾಯಕ್ಕೆ 6% ಎಡ ಮೀಸಲಾತಿಗೆ 6% ಮತ್ತು ಇತರೆ ಸ್ಪರ್ಶ ಸಮುದಾಯವಾಗಿ 5% ಮೀಸಲು ನೀಡಲಾಗಿದೆ. ದೊಡ್ಡ ಸಮುದಾಯದ ಜೊತೆ ನಾವು ಫೈಟ್ ಮಾಡಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದೆ ಬರಲು ಅಲೆಮಾರಿ ಅಥವ ಅಸ್ಪರ್ಶಸಮುದಾಯದ ಜೊತೆಗೆ ಸೇರಿಸಬೇಕು ಎಂದರು. 

2011 ನೇ ಸಾಲಿನಲ್ಲಿ ನಡೆದ ಜನಗಣತಿ ವೇಳೆ 55 ಸಾವಿರ ಜನಸಂಖ್ಯೆಯಿತ್ತು. ಈಗಲೂ 55 ಸಾವಿರದ 800 ಜನಸಂಖ್ಯೆಯಿದೆ ಎಂದು ವರದಿಯಲ್ಲಿ ತಿಳಿಸಲಸಗಿದೆ. ಇದು ಅವೈಜ್ಞಾನಿಕವಾಗಿದೆ.  1% ಮೀಸಲು ನೀಡಿ ಅಲೆಮಾರಿಯಲ್ಲಿಡಿ, ಗೌರವಾಧ್ಯಕ್ಷ ಜಯಪ್ಪ ಮಾತನಾಡಿ ನಮ್ಮ‌ಜಾತಿಯ ಹೆಸರನ್ನ‌ ಹೇಳಿಕೊಂಡು ಬದುಕುವುದು ಕಷ್ಟವಾಗಿದೆ. ನಾವು ಸಹ ಅಸ್ಪೃಶ್ಯರಾಗಿದ್ದೇವೆ. ಬಲ ಅಥವಾ ಎಡಗೈಗೆ ಸೇರಿಸಿ ಎಂದರು. 

ಕೊರಚ ಸಮುದಾಯದಿಂದ ಇಲ್ಲಿಯವರೆಗೂ ಒಬ್ಬ ಶಾಸಕನಿಲ್ಲ. ಐಎಎಸ್, ಐಪಿಎಸ್ ಪ್ರೋಫೆಸರ್ ಸಹ ಆಗಿಲ್ಲ. ಹಾಗಾಗಿ ಮೀಸಲಾತಿಯನ್ನ‌ ಪುನರ್ ಪರಿಶೀಲಿಸಬೇಕು ಎಂದರು. 

Internal reservation has been reviewed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close