SUDDILIVE || SAGARA
ಸಿಗಂದೂರು ಸೇತುವೆ ಮೇಲೆ ವೀಲಿಂಗ್ ಬಿತ್ತು ದಂಡ-Fined for wheeling on Sigandur bridge
ಸಿಗಂದೂರು ಸೇತುವೆ ಕೇವಲ ದ್ವೀಪದ ಜನರ ಉಸಿರಾಗಿ ಉಳಿದಿಲ್ಲ. ಇದು ಆ ಭಾಗದ ಜನರ ಕನಸು ಸಹವಾಗಿದೆ. ಆದರೆ ಕೆಲವರ ಹುಚ್ಚಾಟ ಮಿತಿ ಮೀರುತ್ತಿದೆ. ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್ ಮಾಡಿದ ಯುವಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದಿದ್ದಾರೆ.
ಆಗಸ್ಟ್ 15ರಂದು ಯುವಕನೊಬ್ಬ ಸಿಗಂದೂರು ಸೇತುವೆ ಮೇಲೆ ಯುವಕನೊಬ್ಬ ವೀಲಿಂಗ್ ಮಾಡಿದ್ದ. ಈತ ಬೈಕ್ ಸ್ಟಂಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಗ್ರಾಮಾಂತರ ಠಾಣೆ ಪೊಲೀಸರು ಬೈಕ್ ಸವಾರನನ್ನು ಪತ್ತೆ ಹಚ್ಚಿ, ಆತನಿಗೆ ದಂಡ ವಿಧಿಸಿದ್ದಾರೆ.
ದುಬಾರಿ ಬೆಲೆ ಕವಾಸಕಿ ಬೈಕ್ ಸವಾರನಿಗೆ ₹5000 ದಂಡ ವಿಧಿಸಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ. ಇನ್ಮುಂದೆ ಯಾರು ಈ ರೀತಿಯ ತಪ್ಪು ಮಾಡಬಾರದು ಎಂದು ಆತ ವಿಡಿಯೋದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಪ್ರಜರಣ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Fined for wheeling on Sigandur bridge

