SUDDILIVE || SHIVAMOGGA
ಶಿಷ್ಠಾಚಾರ ಉಲ್ಲಂಘಿಸಿ ಯುದ್ಧ ನೌಕೆ ಸ್ಥಾಪನೆಯಾಗುತ್ತಾ?Is a warship being established in violation of protocol?
ಫ್ರೀಡಂ ಪಾರ್ಕ್ ನಲ್ಲಿ ಯುದ್ಧ ವಿಮನ ಬಂದು ಇಳಿದಿದೆ. ಕಿರಣ್ ಎಂಬ ಯುದ್ಧ ವಿಮಾನ ಬಂದಿಳಿದಿದ್ದು ಇದನ್ನ ಸ್ಥಾಪಿಸುವ ಕೆಲಸ ನಡೆಯಲಿದೆ.
ಭೂಸೇನಾ ನೌಕಾದಳದಿಂದ ಹೈದರಾಬಾದ್ ನಿಂದ ಬಂದ ವಿಮಾನವನ್ನ ಫ್ರೀಡಂ ಪಾರ್ಕ್ ನಲ್ಲಿ ತಂದಿರಲಾಗಿದೆ. ರೆಕ್ಕೆ, ಬಾಲಗಳನ್ನ ಜೋಡಿಸಿ ಯುದ್ಧ ಟ್ಯಾಂಕರ್ ನ್ನ ಜೋಡಿಸಿದ ರೀತಿಯಲ್ಲಿ ಈ ಯುದ್ಧ ವಿಮಾನವನ್ನ ಸ್ಥಾಪಿಸಲಾಗುತ್ತಿದೆ.
ವಿಮಾನದ ವಿಶೇಷತೆ
ವಾಯು ಸೇನೆ ಪೈಲಟ್‌ಗಳಿಗೆ ತರಬೇತಿ ನೀಡಲು ಬಳಸುತ್ತಿದ್ದ ಎರಡು ಸೀಟ್‌ನ ಹೆಚ್ ಎ ಎಲ್ ಹೆಚ್ ಜೆಟಿ-16 ಕಿರಣ್ ಯುದ್ದ ವಿಮಾನ ಎಂದು ಕರೆಯಲಾಗುತ್ತದೆ. ಈ ವಿಮಾನವನ್ನು ಹಿಂದೂಸ್ಥಾನ್ ಏರೊನಾಟಿಕಲ್ ಲಿಮಿಟೆಡ್‌ನಿಂದ ಭಾರತೀಯ ವಾಯಪಡೆಗಾಗಿ ಅಭಿವೃದ್ಧಿಪಡಿಸಿದೆ.
ಇದನ್ನು ನೌಕಾಪಡೆಯು ಬಳಕೆ ಮಾಡಿದೆ. ಈ ವಿಮಾನ ಆರ್ಮ್‌ಸ್ಟ್ರಾಂಗ್ ಸಿಡ್ಡೆಲಿ ವೈಪರ್ ಮಾದರಿಯ ಎಂಜಿನ್ ಹೊಂದಿದೆ.ಈ ಮಾದರಿಯ ಮೊದಲ ವಿಮಾನ 4 ಸೆಪ್ಟೆಂಬರ್ 1964ರಲ್ಲಿ ಹಾರಾಟ ಆರಂಭಿಸಿದೆ. ಕಿರಣ್ ವಿಮಾನ 50 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ.
ವಿಮಾನವು 10.60 ಮೀಟರ್ ಉದ್ದವಿದೆ. ರೆಕ್ಕೆಗಳ ಅಗಲ 10.70 ಮೀ, ಎತ್ತರ 3.64 ಮೀ, ತೂಕ 2,560 ಕೆಜಿ. ಗರಿಷ್ಠ ಉಡ್ಡಯನ ತೂಕ 4,235 ಕೆಜಿ, ಇಂಧನ ಸಾಮರ್ಥ್ಯ 1,137 ಲೀ., ಗರಿಷ್ಠ ವೇಗ ಸಮುದ್ರ ಮಟ್ಟದಲ್ಲಿ ಗಂಟೆಗೆ 695 ಕಿ.ಮೀ, ಕ್ರೂಸ್ ವೇಗ 324 ಕಿಮೀ ಪ್ರತಿ ಗಂಟೆಗೆ, ಇದೆ ಮಾದರಿಯ ವಿಮಾನಗಳು ದೇಶ ವಿದೇಶದಲ್ಲಿ ವೈಮಾನಿಕ ಪ್ರದರ್ಶನ ನೀಡಿವೆ. ಈ ವಿಮಾನ ಒಂದು ಕಾಲದಲ್ಲಿ ನಮ್ಮ ವಾಯುಪಡೆಯ ಪೈಲಟ್‌ಗಳಿಗೆ ತರಬೇತುದಾರ ಆಗಿತ್ತು.
ಶಿಷ್ಠಾಚಾರ ಉಲ್ಲಂಘಿಸಿ ಯುದ್ಧ ನೌಕೆ ಉದ್ಘಾಟನೆ ಆಗುತ್ತಾ?
ಸಿಗಂದೂರು ಸೇತುವೆ ಬಳಿ ಯುದ್ಧ ನೌಕೆ ಸ್ಥಾಪನೆಯ ಮಾತು ಕೇಳಿ ಬಂದಿದೆ. ಬಸವೇಶ್ವರ ಪುತ್ಥಳಿ, ಸಾಗರ ರಸ್ತೆಯ ಐಬಿ ರಸ್ತೆಯ ಬಳಿ ಯುದ್ಧ ವಿಮಾನವನ್ನ ಸ್ಥಾಪಿಸುವ ಮಾತುಗಳನ್ನ ಇಲ್ಲಿನ ಜನಪ್ರತಿನಿಧಿಗಳವ ಬಾಯಿಯಿಂದ ಕೇಳಿ ಬಂದಿತ್ತು. ಪ್ರತಿಮೆಗಳನ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸ ಬಾರದು ಎಂಬ ನಿಯಮದ ಹಿನ್ನಲೆಯಲ್ಲಿ ಫ್ರೀಡಂ ಪಾರ್ಕ್ ಗೆ ಶಿಫ್ಟ್ ಆಗಿದೆ.
ಈಗ ಯುದ್ಧ ನೌಕೆಯನ್ನ ಸಿಗಂದೂರು ಸೇತುವೆ ಬಳಿ ನಿರ್ಮಿಸುವ ಮಾತು ಕೇಳಿ ಬಂದಿದೆ. ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನ ಶಿಷ್ಠಾಚಾರ ಉಲ್ಲಂಘಿಸಿದಂತೆ ರಾಷ್ಟ್ರೀಯ ಹೆದ್ದಾರಿ ನಿಯಮವನ್ನೇ ಉಲ್ಲಂಘಿಸಿ ಸ್ಥಾಪಿಸಲಿದ್ದಾರಾ ಕಾದು ನೋಡಬೇಕಿದೆ?
Is a warship being established in violation of protocol?