ad

ಗುಜರಾತ್ ನಲ್ಲಿ ಸೀಜ್ ಆದ ಡ್ರಗ್ಸ್ ಹಣ ಪೆಹ್ಗಾಮ್ ಗೆ ಹೋಗಿದೆ-ಸಚಿವ ಲಾಡ್-Drug money seized in Gujarat went to Pehgam: Minister Lad

SUDDILIVE || SHIVAMOGGA

ಗುಜರಾತ್ ನಲ್ಲಿ ಸೀಜ್ ಆದ ಡ್ರಗ್ಸ್ ಹಣ ಪೆಹ್ಗಾಮ್ ಗೆ ಹೋಗಿದೆ-ಸಚಿವ ಲಾಡ್-Drug money seized in Gujarat went to Pehgam: Minister Lad

Drug, money


ಕಾಂಗ್ರೆಸ್ ವತಿಯಿಂದ ನಾಳೆ ಬೆಂಗಳೂರಿನಲ್ಲಿ ಮತ ಕಳ್ಳತನದ ವಿರುದ್ಧ ಹಮ್ಮಿಕೊಂಡಿರುವ ಪಾದಯಾತ್ರೆ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸಂತೋಷ್ ಲಾಡ್ ಪ್ರಜಾಪ್ರಭುತ್ವ ಉಳಿವಿಗೆ ಪಾದಯಾತ್ರೆ ಅವಶ್ಯಕವೆಂದು ಸಚಿವ ಸಂತೋಷ್ ಲಾಡ್ ತಿಳಿಸಿದರು. 

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಪಾರ್ಲಿಮೆಂಟ್, ಅಸೆಂಬ್ಲಿ ಚುನಾವಣೆ ನಂತರ ೪೧ ಲಕ್ಷ ಮತ ಹೆಚ್ಚಾಗುತ್ತದೆ. ಆದರೆ ಬಿಹಾರ ಚುನಾವಣೆ ಸಮೀಪಿಸುತ್ತಿರುವಾಗ ೬೫ ಲಕ್ಷ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತದೆ. ಬಿಹಾರ್ ನಲ್ಲಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ವೋಟ್ ಹಾಕಿದ ಮತದಾರರಿಗೆ ಈಗ ಅಸೆಂಬ್ಲಿ ಚುನಾವಣೆಯಲ್ಲಿ ವೋಟ್ ಹಾಕಲು ಅವಕಾಶ ಇಲ್ಲವಾಗಿದೆ ಎಂದರು. 

ಮಹಾರಾಷ್ಟ್ರದಲ್ಲಿ ಆರು ತಿಂಗಳ ಅವಧಿಯಲ್ಲಿ 41 ಲಕ್ಷ ಮತದಾರರ ಸಂಖ್ಯೆ ಹೇಗೆ ಹೆಚ್ಚಾಗುತ್ತದೆ? ದೇಶದ ಪ್ರಧಾನಿ ಕಳೆದ 11 ವರ್ಷಗಳಿಂದ ಬರೀ ಚುನಾವಣಾ ಪ್ರಚಾರದಲ್ಲೇ ಕಾಲ ಕಳೆದಿದ್ದಾರೆ. ಬಿಹಾರ್ ಗೆ ಪದೇಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮಣಿಪುರಕ್ಕೆ ಈ ತನಕ ಹೋಗಿಲ್ಲ ಏಕೆ ಎಂದು ಪ್ರಶ್ನಿಸಿದರು. 

ದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈ ಬಿಡುವುದು ಸೇರಿದಂತೆ ಚುನಾವಣಾ ಅಕ್ರಮದ ವಿರುದ್ಧ ನಾವು ಹೋರಾಟ ರೂಪಿಸುತ್ತಿದ್ದೇವೆ. ಮತದಾರರ ಪಟ್ಟಿಯ ಪರಿಷ್ಕಣೆಯ ಬಗ್ಗೆ ನಾವು ಅಕ್ಷೇಪಿಸುತ್ತಿಲ್ಲ. ಕೆಲವೇ ಕೆಲವು ತಿಂಗಳ ಅವಧಿಯಲ್ಲಿ ಲಕ್ಷಾಂತರ ಮತದಾರರ ಹೆಸರನ್ನ ಕೈಬಿಟ್ಟಿರುವ ಬಗ್ಗೆ ನಮ್ಮ ಆಕ್ಷೇಪ ಇದೆ ಎಂದರು. 

ಹಾಗಿದ್ದರೆ ಆಧಾರ್ ಲಿಂಕ್ಡ್ ಪದ್ಧತಿಯನ್ನು ಏಕೆ ಅಳವಡಿಸ ಬಾರದು. ನಾಗರಿಕತ್ವವನ್ನು ಸಾಬೀತುಪಡಿಸುವ ಆಧಾರನ್ನು ಏಕೆ ಅವರು ಕಡೆಗಣಿಸುತ್ತಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ನಡೆದು ಒಂದು ವರ್ಷ ಕಳೆದಿಲ್ಲ. ಅಷ್ಟರೊಳಗೆ 65 ಲಕ್ಷ ಮತದಾರರ ಹೆಸರನ್ನು ಕೈಬಿಡುವುದು ಎಷ್ಟರಮಟ್ಟಿಗೆ ಸರಿ ಎಂದರು. 

ಇದೇ ಪ್ರಕ್ರಿಯೆಯನ್ನು ಪಾರ್ಲಿಮೆಂಟ್ ಚುನಾವಣೆಗೆ ಮುನ್ನ ಏಕೆ ಮಾಡಲಿಲ್ಲ. ಅವರದು ಒಂದೇ ಒಂದು ಅಜೆಂಡಾ. ಹೇಗಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದೇ ಅವರ ಉದ್ದೇಶವಿದೆ. ಕಳೆದ 11 ವರ್ಷದಿಂದ ಅಧಿಕಾರದಲ್ಲಿರುವ ನೀವು ಅಷ್ಟೊಂದು ಸಲ ಬಿಹಾರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗುವ ಅಗತ್ಯ ಇದೆಯೇ ಎಂದು ಪ್ರಶ್ನಿಸಿದ ಸಂತೋಷ್ ಲಾಡ್, ಪ್ರತಿ ಭಾಷಣದಲ್ಲೂ ಪ್ರಧಾನಮಂತ್ರಿ ಮುಸಲ್ಮಾನ- ಪಾಕಿಸ್ತಾನ ಎಂಬುದನ್ನು ಬಿಟ್ಟರೆ ಬೇರೇನು ಹೇಳುವುದಿಲ್ಲ ಎಂದರು. 

ಆರು ತಿಂಗಳ ಅವಧಿಯಲ್ಲಿ ೪೧ ಲಕ್ಷ ವೋಟ್ ಹೆಚ್ಚಾದರೆ ಐದು ವರ್ಷಕ್ಕೆ ಎರಡೂವರೆ ಕೋಟಿ ಅಷ್ಟು ಹೆಚ್ಚಾಗುತ್ತದೆ. ಅವರು ಬರೀ ಮೋಸದಿಂದ ಚುನಾವಣೆ ಗೆಲ್ಲುವುದಾದರೆ ಗೆಲ್ಲಲಿ ಬಿಡಿ. ಬಿಹಾರದಲ್ಲಿ 70,000 ಕೋಟಿ ಹಣ ದುರ್ಬಳಕೆ ಆಗಿದೆ ಎಂದು ಕೇಂದ್ರದ ಸಿಎಜಿ ವರದಿಯೇ ಹೇಳಿದೆ. ಅಲ್ಲದೆ ಕಳೆದ ಐದು ಅವಧಿಯಿಂದ ಬಿಹಾರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. 

ಗಜರಾತ್ ನಿಂದ ಅತಿ ಹೆಚ್ಚು ಜನ ಅಮೇರಿಕಾಕ್ಕೆ ವಲಸೆ ಹೋಗಿದ್ದಾರೆ

ಹೀಗಿದ್ದೂ ಅಭಿವೃದ್ಧಿಯ ವಿಚಾರದಲ್ಲಿ ಬಿಹಾರದ ಪರಿಸ್ಥಿತಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ತಲಾ ಆದಾಯ ಸಹ ಅಲ್ಲಿ ಕುಸಿಯುತ್ತಿದೆ. ಅಲ್ಲಿ ಅಭಿವೃದ್ಧಿ ಆಗಿದ್ದರೆ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಜನ ಏಕೆ ನಮ್ಮ ರಾಜ್ಯಕ್ಕೆ ವಲಸೆ ಬರುತ್ತಿದ್ದರು. ಇವರ ಅಧಿಕಾರದಲ್ಲಿ ಯಾವ ಹಿಂದೂ ಬಡತನ ರೇಖೆಗಿಂತ ಮೇಲೆ ಬಂದಿಲ್ಲ. ದೇಶದಲ್ಲಿ ಈ ತನಕ 20 ಲಕ್ಷ ಜನ ತಮ್ಮ ಪಾಸ್ಪೋರ್ಟ್ ಅನ್ನು ಸೆರೆಂಡರ್ ಮಾಡಿದ್ದಾರೆ. 

ದೇಶದಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗಿರುವ ಒಂದು ಲಕ್ಷದಲ್ಲಿ 70 ಸಾವಿರದಷ್ಟು ಜನ ಗುಜರಾತ್ ನವರೇ ಆಗಿದ್ದಾರೆ. ದೇಶದ ಜನ ಇಲ್ಲಿಂದ ಏಕೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಆಗಬೇಕಲ್ಲವೇ. ನಮ್ಮ ನಾಯಕ ರಾಹುಲ್ ಗಾಂಧಿ ಕಳೆದ ಹತ್ತು ವರ್ಷದಲ್ಲಿ ಮಾತನಾಡಿರುವ ಎಲ್ಲಾ ವಿಷಯಗಳು ನಿಜವೆಂದು ಸಾಬೀತಾಗಿದೆ ಎಂದರು. 

ಕೋವಿಡ್, ಜಿ ಎಸ್ ಟಿ,  ವಿದೇಶಿ ಸಂಬಂಧ ಅವರು ಮಾತನಾಡಿರುವ ಎಲ್ಲಾ ವಿಷಯಗಳು ನಿಜವಾಗ್ಲೂ ದೃಢಪಟ್ಟಿದೆ. ಬಿಹಾರದಲ್ಲಿ ನಿಮಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂಬುದು ಗೊತ್ತಾಗಿಯೇ ಮತದಾರರ ಪಟ್ಟಿಯಿಂದ ಜನರನ್ನು ಕೈ ಬಿಡುತ್ತಿದ್ದಾರೆ ಎಂದರು. 

ಡ್ರಗ್ಸ್ ಹಣ ಪೆಹಲ್ಗಾಮ್ ಗೆ ಹೋಗಿದೆ

ಮಾಲೆಗಾವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ ಕುರಿತ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನಾವು ಕ್ಷಮೆ ಕೇಳುವ ಅಗತ್ಯವೇ ಇಲ್ಲ. ಇದೇ ಎನ್ ಐಎ ಕಳೆದ ವರ್ಷ ಈ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ವಾದ ಮಾಡಿತ್ತು. ಅಷ್ಟಕ್ಕೂ ಎನ್ ಐ ಎ ಯಾರ ಅಧೀನದಲ್ಲಿದೆ. ಹಾಗಾಗಿ ಅದಕ್ಕೆ ನಾವು ಉತ್ತರಿಸುವ ಅಗತ್ಯವೇ ಇಲ್ಲ. ಗುಜರಾತ್‌ ನ ಮುಂದ್ರಾ ಪೋರ್ಟ್ ನಲ್ಲಿ 21,000 ಕೋಟಿ ಮೌಲ್ಯದ ಡ್ರಗ್ಸ್ ಸೀಸ್ ಆಗಿತ್ತು. ಆ ಹಣ ಪೆಹಲ್ಗಾವ್ ಘಟನೆಗೆ  ಬಳಕೆಯಾಗಿದೆ ಎಂದು ಎನ್ ಐಎ ಹೇಳಿದೆ ಎಂದರು. 

ನಾಳೆಯಿಂದ ಕೆಎಸ್ಆರ್ಟಿ ನೌಕರರು ಮುಷ್ಕರಕ್ಕೆ ಮುಂದಾಗಿರುವ ವಿಚಾರ, ಈ ತರದ ವಿಚಾರ ಪ್ರತಿ ಸರ್ಕಾರದಲ್ಲೂ ಆಗಿದೆ. ಮುಷ್ಕರ ಮಾಡಲು ಕಾರ್ಮಿಕರಿಗೆ ಹಕ್ಕು ಇದೆ. ಕಾರ್ಮಿಕರನ್ನು ಕರೆದು ಸಂಧಾನ ಮಾಡುವುದು, ಚರ್ಚೆ ಮಾಡುವುದು ಎಲ್ಲಾ ಸರ್ಕಾರದಲ್ಲೂ ಆಗಿದೆ ಎಂದರು. 

ಈಗಾಗಲೇ ಸಾರಿಗೆ ಸಚಿವರೊಂದಿಗೆ ಮಾತನಾಡಿದ್ದೇನೆ ಟ್ರೇಡ್ ಯೂನಿಯನ್ ನೊಂದಿಗೆ ಅವರು ಮಾತನಾಡಲಿದ್ದಾರೆ. ಸಮಸ್ಯೆ ಬಗೆಹರಿಸುವ ವಿಶ್ವಾಸ ನನಗೆ ಇದೆ. 

ಧರ್ಮಸ್ಥಳದ ವಿಚಾರ

ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಪ್ರಕರಣದ ತನಿಖೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಆ ಘಟನೆಯ ಕುರಿತು ಎಸ್ಐಟಿ ತನಿಖೆ ನಡೆಯುತ್ತಿದೆ. ಪ್ರತಿದಿನವೂ ಆ ಬಗ್ಗೆ ತನಿಖೆ ನಡೆಯುತ್ತಿದ್ದು ಅದರ ಸ್ಪಷ್ಟ ಚಿತ್ರಣ ನನ್ನ ಬಳಿ ಇಲ್ಲ, ಹಾಗಾಗಿ ತನಿಖೆ ಮುಗಿಯುವವರೆಗೂ ಕಾಯಬೇಕಿದೆ. 

ಈ ಘಟನೆಯಲ್ಲಿ ಕೇರಳದವರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪ ವಿಚಾರದಲ್ಲಿಯೂ ಸಚಿವರು, ಕೇಂದ್ರ ಸಚಿವ ಜೋಶಿ ಅವರು ಸೆಲೆಕ್ಟಿವ್ ಆಗಿ ಮಾತನಾಡುತ್ತಾರೆ. ಅವರಿಗೆ ಅನುಕೂಲ ಆಗುವ ವಿಚಾರವನ್ನಷ್ಟೇ ಅವರು ಮಾತನಾಡುತ್ತಾರೆ. ಅಷ್ಟಕ್ಕೂ ಸೌಜನ್ಯ ಪ್ರಕರಣ ಯಾವಾಗ ನಡೆಯಿತು ಎಂದು ಪ್ರಶ್ನಿಸಿದರು. 

ಒಂದು ಪಕ್ಷ ಜೋಶಿ ಅವರ ಬಳಿ ಇದು ಪ್ಲಾಂಟೆಡ್ ಎಂಬ ಬಗ್ಗೆ ದಾಖಲೆ ಇದ್ದರೆ ತಂದು ಕೊಡಲಿ. ಅಷ್ಟೇ ಅಲ್ಲ ಸಿಬಿಐ ಸಹ ಅವರ ಬಳಿ ಇದೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ. ಬಿಜೆಪಿಯವರು ಕೇವಲ ಆಯ್ದ ವಿಚಾರಗಳನ್ನು ಅಷ್ಟೇ ಮಾತನಾಡುತ್ತಾರೆ ಎಂದು ದೂರಿದರು. 

ಜಿಡಿಪಿ ವಿಷಯ

ಜಿಡಿಪಿ, ತಲಾ ಆದಾಯ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅಷ್ಟಕ್ಕೂ ಮೇಘಾಲಯದಲ್ಲಿ 41000 ಟನ್ ಕಲ್ಲಿದ್ದಲು ನಾಪತ್ತೆಯಾಗಿದೆ. ಇದರ ಬಗ್ಗೆ ಕೇಳಿದರೆ ಮಳೆ ಬಂದು ಕೊಚ್ಚಿ ಹೋಗಿದೆ ಎಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು, ವಿದ್ಯಾರ್ಥಿಗಳು ಮತ್ತಿತರ ವಿಚಾರಗಳ ಬಗ್ಗೆ ಅವರು ಮಾತನಾಡುವುದೇ ಇಲ್ಲ ಎಂದು ದೂರಿದರು. 

ಮತಕ್ಕಾಗಿ ಬಿಜೆಪಿಗೆ ಹಿಂದೂ ಮುಸ್ಲೀಂ ಬೇಕು

ಬಿಜೆಪಿಯವರಿಗೆ ವೋಟಿಗಾಗಿ ಹಿಂದೂ ಮುಸ್ಲಿಂ ಅಷ್ಟೇ ಬೇಕು. ರಾಮ ಮಂದಿರವನ್ನು ಸಹ ಅವರು ಜನರ ದುಡ್ಡಿನಲ್ಲಿ ನಿರ್ಮಿಸಿದ್ದಾರೆ. ಅಷ್ಟಕ್ಕೂ ಹಿಂದುಗಳಿಗಾಗಿ ಅವರೇನು ಪ್ರತ್ಯೇಕ ಸ್ಕೀಮ್ ಮಾಡಿದ್ದಾರೆ? ಬಿಜೆಪಿಯರ ಮನೆಯಲ್ಲಿ ಬಂಗಾರದ ತಟ್ಟೆ ಇದೆಯೇ ಹೊರತು ಹಿಂದುಗಳ ಮನೆಯಲ್ಲಿ ಅಲ್ಲ ಎಂದು ದೂರಿದರು. 

ಅದು ಹೋಗಲಿ ಬಿಜೆಪಿಯ ಕಚೇರಿಯನ್ನು ಸಹ ಜನರ ದುಡ್ಡಿನಲ್ಲೇ ಕಟ್ಟಿದ್ದಾರೆ. ಇವರಿಗೆ ಚುನಾವಣೆ ಬಂದಾಗ ಹಿಂದುಗಳ ವೋಟ್ ಬೇಕು ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್

Drug money seized in Gujarat went to Pehgam: Minister Lad

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close