SUDDILIVE || SAGARA
ಕರ್ತವ್ಯ ಪ್ರಜ್ಞೆ ಮೆರೆದ ಲೈನ್ ಮ್ಯಾನ್ ಗಳು-Linemen who showed a sense of duty
ಪ್ರತಿ ವರ್ಷ ಮೆಸ್ಕಾಂ ಪವರ್ ಮ್ಯಾನ್ ಗಳ ಸಾಹಸದ ಕೆಲಸಗಳು ಬೆಳಕಿಗೆ ಬರ್ತಾಯಿದೆ. ಸುರಕ್ಷತೆಯಿಲ್ಲದೆ ಪವರ್ ಮ್ಯಾನ್ ಗೂ ಕೆಲಸ ಮಾಡುತ್ತಿದ್ದು ಸರ್ಕಾರ ಸುರಕ್ಷತೆಗೆ ಕ್ರಮಕೈಗೊಳ್ಳದಿರುವುದು ದುರಂತ. ಕಳೆದ ಬಾರಿ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಪವರ್ ಮ್ಯಾನ್ ಗಳು ಈಜಿ ಹೋಗಿ ಕೆಲಸ ಮಾಡಿದ ಬಗ್ಗೆ ವಿಡಿಯೋ ಹರಿದಾಡಿದ್ದವು.
ಈಗ ಸಾಗರ ತಾಲೂಕು ಹಿರೇನಲ್ಲೂರು ಗ್ರಾಮದ ಸಣ್ಣಮನೆ ಮತ್ತು ಯಲಕುಂದಿ ನಡುವೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಲೈನ್ ಮ್ಯಾನ್ ಗಳು ನೀರಿನಲ್ಲೇ ಸಾಗಿ ಅದನ್ನ ರಿಪೇರಿ ಮಾಡಿರುವ ದೃಶ್ಯ ಲಭ್ಯವಾಗಿದೆ. ಹಿರೇನಲ್ಲೂರಿನ ಉಮೇಶ ಮತ್ತು ಪಠಾಣ್ ನೀರಿನಲ್ಲಿ ಸಾಗಿ ರಿಪೇರಿ ಮಾಡಿದ್ದಾರೆ.
ಬೇಸಿಗೆಯಲ್ಲಿ ಇವು ಗದ್ದೆಗಳಾಗಿರ್ತಾವೆ ಮಳೆಗಾಲದಲ್ಲಿ ಇದು ಹೊಳೆಯಾಗಿ ಹರಿದು ಬಂದಿದೆ. ವರದ ನದಿಯು ಗದ್ದೆಗೆ ನುಗ್ಗಿ ಹರಿದು ಬರುತ್ತದೆ. ಕಳೆದ ಬಾರಿ ಸಚಿವರು ಇಲ್ಲಿ ಭೇಟಿ ನೀಡಿ 6 ಚೆಕ್ ಡ್ಯಾಂ ನಿರ್ಮಿಸುವುದಾಗಿ ಹೇಈದ್ದರು. ಆ ಕೆಲಸ ಆಮೆಗತಿಯಲ್ಲಿ ಸಾಗಿದೆ. ಎರಡು ಮೂರು ಅಡಿ ಇರಬಹುದು ಎಂದು ಲೈನ್ ಮ್ಯಾನ್ ಗಳು ನಡೆದುಕೊಂಡು ಬಂದಿದ್ದಾರೆ. ನೋಡಿದರದ ಎದೆಯ ಮಟ್ಟ ನೀರು ಹರಿಯುತ್ತಿದೆ. ಮೆಸ್ಕಾಂ ಈ ಭಾಗದಲ್ಲಿ ಸುರಕ್ಷತೆಯಿಲ್ಲದೆ ಇಳಿಸುತ್ತಿರುವುದು ದುರುಂತ
Linemen who showed a sense of duty

