SUDDILIVE || SHIVAMOGGA
ಇಂದು ಜೋಗದಲ್ಲಿ ಪ್ರವಾಸಿಗರ ದಂಡು-A crowd of tourists at Jog today
ಶಿವಮೊಗ್ಗ ಜಿಲ್ಲೆ ಜೋಗ ಜಲಪಾತದಲ್ಲಿ ಇಂದು ಅಚ್ಚರಿಯ ಜನ ಭೇಟಿ ನೀಡಿದ್ದಾರೆ. ವಾಹನ ಪಾರ್ಕಿಂಗ್ ಗೆ ಚೈನಾ ಗೇಟ್ ನ ವರೆಗೂ ತಲುಪಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಜಲಪಾತದಲ್ಲಿ ರಾಜಾ, ರಾಣಿ, ರೋರಲ್ ರಾಕೆಟ್ ಜಲಪಾತದ ಭೋರ್ಗರೆತ ಪ್ರವಾಸಿಗರ ಕಣ್ಮನ ತಣಿಸಿದೆ.
ಇಂದು ಜೋಗದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಈ ಸಂಖ್ಯೆ ಇನ್ನು ಒಂದು ವಾರದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಜೋಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಸಯುತ್ತಿರುವ ಮಧ್ಯೆಯೇ ಪ್ರವಾಸಿಗರ ವಿಸಿಟ್ ಅಲ್ಲಿನ ಪಾರ್ಕಿಂಗ್ ವ್ಯವಸ್ಥೆ ಹದಗೆಡೆಸಿದೆ.
ಇಂದು ಜೋಗಜಲಪಾತ ವಯ್ಯಾರದಿಂದ ಕೂಡಿತ್ತು. ಜೋಗದಲ್ಲಿ ಮಳೆ ಇಲ್ಲದ ಕಾರಣ ಮೋಡಗಳ ನಡುವೆ ಜಲಪಾತ ಪ್ರವಾಸಿಗರನ್ನಹೆಚ್ಚು ಸೂರೆ ಹಿಡಿದಿದೆ.
A crowd of tourists at Jog today
