SUDDILIVE || SHIVAMOGGA
ಲಾಡ್ಜ್ ಮತ್ತು ಕಲ್ಯಾಣ ಮಂದಿದ ಮಾಲೀಕರ ಸಭೆ-Lodge and Kalyana Mandira Owners Meeting
ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮುಂಬರುವ ಗೌರಿ ಹಾಗೂ ಗಣೇಶ ಹಬ್ಬ ಮತ್ತು ಈದ್ ಮಿಲಾದ್, ಹಬ್ಬಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಲಾಡ್ಜ್, ಕಲ್ಯಾಣ ಮಂಟಪಗಳ ಮಾಲೀಕರುಗಳ ಸಭೆ ನಡೆದಿದೆ. ಅಡಿಷನಲ್ ಎಸ್ಪಿ ಎ ಜಿ ಕಾರ್ಯಪ್ಪ ರವರು ಸಭೆಯ ನೇತೃತ್ವವನ್ನು ವಹಿಸಿದ್ದು, ಸಭೆಯಲ್ಲಿ ಕೆಲ ತೂರ್ಮಾನಗಳನ್ನ ತೆಗೆದುಕೊಳ್ಳಲಾಗಿದೆ.
1) ಲಾಡ್ಜ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಸಿ. ಸಿ. ಕ್ಯಾಮೆರಾಗಳನ್ನ ಅಳವಡಿಸ ಬೇಕು.
2) ಎಂಟ್ರಿ ಮತ್ತು ಎಕ್ಸಿಟ್ ಗೇಟ್ ಬೇರೆ ಬೇರೆ ಇರದೇ ಒಂದೇ ಗೇಟ್ ಇರಬೇಕು.
3) ತಂಗುವ ಗ್ರಾಹಕರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದಿರಬೇಕು.
4) ಸಂಶವಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಬೇಕು.
5) ಯಾವುದೇ ತುರ್ತು ಸಂದರ್ಭಗಳಲ್ಲಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿರುತ್ತದೆ.
6) ಕಡ್ಡಾಯವಾಗಿ ಎಲ್ಲಾ ಅಗತ್ಯವಾದ ದಾಖಲೆಗಳನ್ನು ನಿರ್ವಹಣೆ ಮಾಡಬೇಕು.
7)ಸಿಸಿಟಿವಿ ಕ್ಯಾಮೆರಾ ಗಳ ಸಂಗ್ರಹಣೆಯು ಕನಿಷ್ಠಪಕ್ಷ ಒಂದು ತಿಂಗಳ ಅವಧಿಗೆ ಇರುವ ಹಾಗೆ ನಿರ್ವಹಿಸಬೇಕು.
8) ಉತ್ತಮ ರೀತಿಯ ಸ್ವಚ್ಛತೆಯನ್ನು ಕಾಪಾಡುವ ವ್ಯವಸ್ಥೆಯನ್ನು ಹೊಂದಿರಬೇಕು
9) ಗ್ರಾಹಕರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರತಿವಾರ ವ್ಯಾಪ್ತಿಯ ಪೊಲೀಸ್ ಠಾಣೆಗೆ ಒದಗಿಸಬೇಕು.
10) ನೀರಿನ ಟ್ಯಾಂಕ್ ಅನ್ನು ಪ್ರತಿದಿನ ಪರಿಶೀಲಿಸಬೇಕು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
11) ಹೊರ ರಾಜ್ಯದ ಗ್ರಾಹಕರಗಳು ತಂಗಲು ಬಂದಲ್ಲಿ ಕಡ್ಡಾಯವಾಗಿ ಅವರುಗಳ ಸಮರ್ಪಕ ದಾಖಲೆಗಳನ್ನು ಪಡೆದು ಜೆರಾಕ್ಸ್ ಕಾಪಿಯನ್ನು ನಿರ್ವಹಿಸಬೇಕು.
ಹಬ್ಬದ ಸಮಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಎಲ್ಲ ರೀತಿಯ ಸಹಕಾರದಿಂದ ಇರಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಬಾಬು ಆಂಜನಪ್ಪ ಹಾಗೂ ಸಂಜೀವ್ ಕುಮಾರ್, ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ನಿರೀಕ್ಷಕರು ಪೊಲೀಸ್ ಉಪನಿರೀಕ್ಷಕರು ಹಾಗೂ ಶಿವಮೊಗ್ಗ ನಗರದ ಲಾಡ್ಜ್ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರುಗಳು ಉಪಸ್ಥಿತರಿದ್ದರು.
Lodge and Kalyana Mandira Owners Meeting