SUDDILIVE || BHADRAVATHI
ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ರೂಟ್ ಮಾರ್ಚ್-Root march in Bhadravati rural area
ಭದ್ರಾವತಿಯಲ್ಲಿ ವಿಶೇಷ ಕಾರ್ಯಪಡೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ರೂಟ್ ಮಾರ್ಚ್ ನಡೆದಿದೆ. ರೂಟ್ ಮಾರ್ಚ್ ನ್ನ ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ನಡೆಸಲಾಗಿದೆ.
ಶಿವಮೊಗ್ಗದ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಈ ದಿನ ದಿನಾಂಕಃ 06-08-2025 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನೊಳಗೊಂಡ ತಂಡವು ರೂಟ್ ಮಾರ್ಚ್ ಅನ್ನು ಹಮ್ಮಿಕೊಂಡಿದ್ದು, ಸದರಿ ರೂಟ್ ಮಾರ್ಚ್ ಅನ್ನು 0ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಘಟ್ಟದಿಂದ ಪ್ರಾರಂಭಿಸಿ, ಶಂಕರಘಟ್ಟ, ಸಿಂಗನಮನೆಯಿಂದ ಬಿ.ಆರ್.ಪಿಗೆ ಬಂದು ಮುಕ್ತಾಯ ಮಾಡಲಾಯಿತು.
ಸದರಿ ರೂಟ್ ಮಾರ್ಚ್ ನಲ್ಲಿ ವಿಶೇಷ ಕಾರ್ಯಪಡೆ ಹಾಗೂ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Root march in Bhadravati rural area

