ad

ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ 10 ವರ್ಷ ಕಾರಾವಾಸ ಶಿಕ್ಷೆ- Man sentenced to 10 years in prison for assaulting woman

SUDDILIVE |  SHIVAMOGGA

ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ 10 ವರ್ಷ ಕಾರಾವಾಸ ಶಿಕ್ಷೆ-Man sentenced to 10 years in prison for assaulting woman

Prison, sentenced



ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ವ್ಯಕ್ತಿಗೆ 10 ವರ್ಷ ಕಠಿಣ ಕಾರಾಗೃಹ, 35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 

ದಿನಾಂಕಃ 27-03-2021  ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮರನಹಳ್ಳಿ ತಾಂಡ್ಯಾದ ವಾಸಿ ತಾವರಾನಾಯ್ಕ ಈತನು ತನ್ನ ಮನೆಯ ಪಕ್ಕದ ವಾಸಿ ಜಯಾ ಬಾಯಿ ರವರೊಂದಿಗೆ ಸುಖಾ ಸುಮ್ಮನೆ ಜಗಳ ತೆಗೆದು ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಏಕೆ ಈ ರೀತಿ ಅವಾಚ್ಯವಾಗಿ ಬೈಯ್ಯುತ್ತೀಯ ಎಂದು ಕೇಳಿದ ಜಯಾಬಾಯಿ ರವರಿಗೆ ಕೊಲೆ ಮಾಡುವ ಉದ್ದೇಶದಿಂದ   ಮಚ್ಚಿನಿಂದ ಕುತ್ತಿಗೆ ಹಾಗೂ ತಲೆಗೆ ಮಾರಣಾಂತಿಕ ಹಲ್ಲೆ   ಮಾಡಿದ್ದನು. ಈ ಕುರಿತು ಠಾಣೆಯಲ್ಲಿ ನೊಂದ ಮಹಿಳೆಯ ಮಗಳು ನೀಡಿದ ದೂರಿನ ಮೇರೆಗೆ ದೂರು ದಾಖಲಾಗಿತ್ತು. 


ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಮಂಜೇಶ್, ಎಎಸ್ಐ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ತೀರ್ಪು ಹೊರಬಿದ್ದಿದೆ. 

ನ್ಯಾಯಾಧಿಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ರವರು ಆರೋಪಿ ತಾವರಾನಾಯ್ಕ ತಂದೆ ಮೀಟ್ಯಾನಾಯ್ಕ (58) ನಿಗೆ  10 ವರ್ಷ ಕಠಿಣ ಕಾರಾವಾಸ ಶಿಕ್ಷೆ ‍ 35,000/-  ದಂಡ ಹಾಗೂ ದಂಡ ಕಟ್ಟಲು ವಿಫಲನಾದಲ್ಲಿ 3 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ  ಆದೇಶಿಸಿದ್ದಾರೆ. 

Man sentenced to 10 years in prison for assaulting woman

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close