ad

ಭಾರಿ ವಾಹನಗಳಿಗೆ ಹುಲಿಕಲ್ ಘಾಟಿ ರಸ್ತೆ ಸಂಚಾರ ಬಂದ್-ಪರ್ಯಾಯ ಮಾರ್ಗ ಸೂಚನೆ-Hulikal Ghati road closed

 SUDDILIVE || SHIVAMOGGA

ಭಾರಿ ವಾಹನಗಳಿಗೆ ಹುಲಿಕಲ್ ಘಾಟಿ ರಸ್ತೆ ಸಂಚಾರ ಬಂದ್-ಪರ್ಯಾಯ ಮಾರ್ಗ ಸೂಚನೆ-Hulikal Ghati road traffic closure for heavy vehicles-alternative route notice

Hulikal, Ghati


ರಾಷ್ಟ್ರೀಯ ಹೆದ್ದಾರಿ 52 ಬಾಳೇ ಬರೆ ಘಾಟಿಯಲ್ಲಿ ಬಾರಿ ವಾಹನಗಳ ಸಂಚಾರವನ್ನು ರದ್ದುಗೊಳಿಸಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶಿಸಿದ್ದಾರೆ. ಜೊತೆಗೆ ಪರ್ಯಾಯಮಾರ್ಗವನ್ನು ಸೂಚಿಸಿದ್ದಾರೆ.

ಬಾಳೆಬರೆ ಘಾಟಿಯಲ್ಲಿ ಅತಿಯಾದ ಮಳೆ ಹಾಗೂ ಮಣ್ಣು ಕುಸಿತದಿಂದಾಗಿ ರಸ್ತೆ ಮಾರ್ಗವೂ ಖುಷಿಯುತ್ತಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ಆದೇಶದಲ್ಲಿ ಡಿಸಿ ಅವರು ತಿಳಿಸಿದ್ದಾರೆ.

ಮಾಸ್ತಿ ಕಟ್ಟೆ ಹುಲಿಕಲ್ ಘಾಟಿ ಸಿದ್ದಾಪುರ ಮಾರ್ಗವಾಗಿ ಕುಂದಾಪುರ ಸೇರುವ ಮಾರ್ಗವನ್ನು ಬಾರಿವಾನಗಳಿಗೆ ನಿಷೇಧಿಸಿ ತೀರ್ಥಹಳ್ಳಿ, ರಾವೆ, ನಗರ, ಕಾನಗೋಡು ಕೊಲ್ಲೂರು ಕುಂದಾಪುರ ಮಾರ್ಗವಾಗಿ ಸಂಚರಿಸಲು ಪರ್ಯಾಯಮಾರ್ಗವನ್ನು ಸೂಚಿಸಿದ್ದಾರೆ.

Hulikal Ghati road closed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close