ad

ಮಹಿಳೆಯನ್ನ ಸಾವಿನ ಅಂಚಿನಿಂದ ಪಾರು ಮಾಡಿದ ಮ್ಯಾಕ್ಸ್ ವೈದ್ಯರು-Max doctor saves woman

 SUDDILIVE || SHIVAMOGGA

ಮಹಿಳೆಯನ್ನ ಸಾವಿನ ಅಂಚಿನಿಂದ ಪಾರು ಮಾಡಿದ ಮ್ಯಾಕ್ಸ್ ವೈದ್ಯರು-Max doctor saves woman from the brink of death

Max, Doctor


ಅತ್ಯಂತ ಕ್ಲಿಷ್ಟಕರ ಸರ್ಜರಿಯನ್ನ ಮ್ಯಾಕ್ಷ ಆಸ್ಪತ್ರೆ ವೈದ್ಯರು ಯಶಸ್ಸಾಗಿ ನಡೆಸಿದ್ದಾರೆ. ಸಾವಿನ ಅಂಚಿನಲ್ಲಿದ್ದ ಗರ್ಭಿಣಿಯನ್ನ ಉಳಿಸಲಾಗಿದೆ ಎಂದು ಆಸ್ಪತ್ರೆಯ ಚೀಫ್ ಆಫೀಸರ್ ಕೌಶಿಕ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಸಾವಿನಂಚಿನಲ್ಲಿದ್ದ ಮಹಿಳೆಗಾಗಿ ನಗರದ ದುರ್ಗಿಗುಡಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಸಮಯದ ಜೊತೆ ಸ್ಪರ್ಧೆ ಮಾಡಿ ಆಕೆಯನ್ನು ಸಾವಿನ ದವಡೆಯಿಂದ ಕಾಪಾಡಿದ್ದಾರೆ 35 ವಯಸ್ಸಿನ ಮಹಿಳೆಗೆ ಅಪರೂಪದ ಹಾಗೂ ಗಂಭೀರವಾದ ಮಹಾಪದಮಣಿ ತುರ್ತು ಚಿಕ್ಕ ಶಸ್ತ್ರಚಿಕಿತ್ಸೆಯನ್ನು ಡಾ. ಸುಧೀರ್ ಭಟ್ ಮತ್ತು ತಂಡ ನಡೆಸಿದ್ದು ಯಶಸ್ವಿಯಾಗಿದ್ದಾರೆ ಎಂದರು. 


35 ವರ್ಷದ ಮಹಿಳೆ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಇದರಿಂದ ಆಕೆಗೆ ಸಹಿಸಲು ಸಾಧ್ಯವಾದ ನೋವು ಕಾಣಿಸಿಕೊಂಡಿತ್ತು. ಅವರನ್ನು ನಗರದ ದುರ್ಗಿಗುಡಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆ ತರಲಾಗಿತ್ತು. ಉದಾರ ಶಾಸ್ತ್ರ ಚಿಕಿತ್ಸೆ ತಜ್ಞರ ಅವರನ್ನು ತಪಾಸಣೆ ಮಾಡಿದಾಗ ಅಘಾತಕಾರಿ ಸುದ್ದಿ ಬೆಳಕಿಗೆ ಬಂದಿತ್ತು. ಅವರ ದೇಹದ ಅತ್ಯಂತ ಪ್ರಮುಖ ರಕ್ತನಾಳ ಓದಿಕೊಂಡು ಹೊಡೆದು ಹೋಗಿತ್ತು. ಅದರ ಪರಿಣಾಮವಾಗಿ ತೀವ್ರ ಸ್ವರೂಪದ ರಕ್ತಸ್ರಾವ ಅವರನ್ನು ಜೀವಪಾಯಕ್ಕೆ ದೂಡಿತ್ತು ಎಂದರು. 

ಈ ಚಿಕಿತ್ಸೆಯನ್ನು ಡಾ. ಸುಧೀರ್ ಭಟ್ ಅವರ ನೇತೃತ್ವದಲ್ಲಿ ನಡೆದ ತುರ್ತು ಶಸ್ತ್ರ ಚಿಕಿತ್ಸೆಯ ಯಶಸ್ವಿಯಾಗಿದೆ ಪರಿಸ್ಥಿತಿ ಗಂಭೀರತೆಯನ್ನು ರೋಗಿಯ ಸಂಬಂಧಗಳಿಗೆ ವಿವರಿಸಲಾಗಿತ್ತು. ಕುಟುಂಬವೂ ಸಹ ತುರ್ತು ಶಸ್ತ ಚಿಕಿತ್ಸೆಗೆ ಸ್ಪಂಧಿಸಿದ್ದರು. 

ಈ ಕುರಿತು ಪರಿಸ್ಥಿತಿಯನ್ನ ವಿವರಿಸಿದ ಡಾ.ಸುಧೀಂದ್ರ ಭಟ್ ಕ್ಷಣ ಕ್ಷಣಕ್ಕೂ ರಕ್ತದ ಒತ್ತಡ ಕಡಿಮೆಯಾಗುತ್ತಿತ್ತು ರಕ್ತಸ್ರಾವದ ಪರಿಣಾಮವಾಗಿ ಹಿಮೋಗ್ಲೋಬಿನ್ ಕಡಿಮೆಯಾಗಿತ್ತು ತಕ್ಷಣವೇ ರಕ್ತ ಟ್ರಾನ್ಸ್ಲ್ಯೂಷನ್ ಮಾಡಿ ರಕ್ತದ ಒತ್ತಡವನ್ನು ಮೇಲೆ ತರುವ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅರವಳಿಕೆ ತಜ್ಞರಾಗಿದ್ದ ಶ್ರೀನಿವಾಸ್ ಮತ್ತು ಡಾ. ಶಿವಕುಮಾರ್ ಅವರ ಕಾರ್ಯ ವೈಖರೊಯನ್ನ ನೆನಪಿಸಿಕೊಂಡರು. 

ಅಬ್ಡಾಮನ್ ಅಯೋಟಿಕ್ ಅಯೂರಿಸಮ್ ಎಂದು ಈ  ಕಾಯಿಲೆಗೆ ಹೆಸರಾಗಿದೆ. ಶಸ್ತ್ರ ಚಿಕಿತ್ಸೆಯ ನಂತರವೂ ರೋಗಿಯ ಶುಶ್ರೂಷೆ ಸಹ ಸವಾಲಾಗಿತ್ತು. 15 ದಿನಗಳ ನಂತರ ಅವರು ಗುಣಮುಖರಾಗಿ ಹೋಗಿದ್ದಾರೆ ಎಂದರು.


 

ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆ ಶ್ರೀಲಕ್ಷ್ಮೀ ಮಾತನಾಡಿ, ಮ್ಯಾಕ್ಸ್ ಆಸ್ಪತ್ರೆಯ ವೈದ್ಯರನ್ನ‌ಮರೆಯಲು ಸಾಧ್ಯವೇ ಇಲ್ಲ. ಇದು ನನ್ನ ಪುನರ್ಜನ್ಮವಾಗಿದೆ ಎಂದು ಭಾವುಕರಾದರು. ಶ್ರೀಲಕ್ಷ್ಮೀಯ ತಂದೆ ಮಾತನಾಡಿ, ಮಗುವಿಗೆ ತಂದೆಯಿರಲಿಲ್ಲ. ಮ್ಯಾಕ್ಸ್ ವೈದ್ಯರು ಅದರಲ್ಲೂ ಡಾ.ಸುದ್ದೀರ್ ಭಟ್ ಮಗುವಿನ ತಾಯಿಯನ್ನ ಉಳಿಸಿಕೊಟ್ಟಿದ್ದಾರೆ. ನಮ್ಮ ಕುಟುಂಬ ಕೃತಜ್ಞರಾಗಿದ್ದಾರೆ. 

ಮ್ಯಾಕ್ಸ್ ಆಸ್ಪತ್ರೆಯ ಸಿಇಒ ಲತಾ ನಾಗೇಂದ್ರ, ಸುಬ್ಬಯ್ಯ ದಂತವೈದ್ಯಕೀಯ ವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ. ವಿನಯಾ, ಡಾ.ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು. 

Max doctor saves woman

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close