SUDDILIVE || SHIVAMOGGA
ಅನ್ಯ ಕೋಮಿನ ಯುವತಿಗೆ ಮೆಸೇಜ್, ಯುವಕನ ಅಪಹರಣ-ಆರೋಪಿ ನ್ಯಾಯಾಂಗ ಬಂಧನಕ್ಕೆ-Message to a young woman of another community, kidnapping of a young man - accused in judicial custody
ಭದ್ರಾವತಿಯಲ್ಲಿ ಅನ್ಯಧರ್ಮಿಯ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಫೈನಾನ್ಸೊಂದರಲ್ಲಿ ಮ್ಯಾನೇಜರ್ ಆಗಿದ್ದ ವ್ಯಕ್ತಿಯನ್ನೇ ಅಪಹರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನ್ಯೂಟೌನ್ ಮತ್ತು ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಓಲ್ಡ್ ಟೌನ್ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಜಾತಿ ನಿಂದನೆ ಪ್ರಕರಣದಲ್ಲಿ ಆತನನ್ನ ಬಂದಿಸಲಾಗಿದೆ.
ಭದ್ರಾವತಿಯ ಭಾರತ್ ಫೈನಾನ್ಸ್ ನಲ್ಲಿ ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ ಆಗಿ ಕಳೆದ 8 ತಿಂಗಳಿಂದ ಕೆಲಸ ಮಾಡಿಕೊಂಡಿದ್ದ ಕಿರಣ್ ಎಂಬತನಿಗೆ ಅದೇ ಫೈನಾನ್ಸಿನ ಸಂಘದ ಗ್ರೂಪ್ ನ ಮ್ಯಾನೇಜರ್ ಆಗಿದ್ದ ಅನ್ಯ ಕೋಮಿನ ಯುವತಿಗೆ ನಾಳೆ ಎಷ್ಟೊತ್ತಿಗೆ ಕೆಲಸಕ್ಕೆ ಬರುತ್ತೀರಾ ಎಂದು ಮೆಸೇಜ್ ಮಾಡಿದ್ದಾರೆ. ಮೆಸೇಜ್ ಮಾಡಿದ್ದಕ್ಕೆ ಆ ಕಡೆಯಿಂದ ಯುವತಿಯ ಕಡೆಯವನು ಎಂದು ಹೇಳಿಕೊಂಡು ಶಾಹೀದ್ ಖಾನ್ ಎಂಬಾತ ನೀನು ಭದ್ರಾವತಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಿಗು ನಮ ಹುಡುಗಿಗೆ ನೀನು ಮೆಸೇಜ್ ಮಾಡಿದ್ದೀಯಾ. ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿದ್ದಾನೆ.
ಆಗಸ್ಟ್ 17ರಂದು ಬೆಳಿಗ್ಗೆ ಮ್ಯಾನೇಜರ್ ಆದ ಕಿರಣ್ ಎಫ್ ಜೆಡ್ ಬೈಕ್ ನಲ್ಲಿ ಭದ್ರಾವತಿ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ ಹಿಂಬದಿಯಿಂದ ಒಬ್ಬ ವ್ಯಕ್ತಿಯು ಬಂದು ಕುಳಿತುಕೊಂಡು ಜಾತಿನಿಂದನೆ ಮಾಡಿ ನನ್ನ ಹುಡುಗಿಗೆ ಮೆಸೇಜ್ ಮಾಡ್ತೀಯಾ ಎಂದು ಚಾಕು ತೋರಿಸಿ ನಾನು ಹೇಳಿದ್ದ ಕಡೆ ಬೈಕ್ ಹೊಡಿ ಎಂದು ಬೆನ್ನಿಗೆ ಚಾಕುವನ್ನು ಇಟ್ಟಿದ್ದಾನೆ.
ಬೈಕ್ ಅನ್ನು ಬಾಬಳ್ಳಿ ಕಡೆ ಹೊಡಿಯಲು ಸೂಚಿಸಿದ್ದಾನೆ ಸುಮಾರು ಕಡೆ ಸುತ್ತಾಡಿಸಿ ನಂತರ ಈ ಕಡೆ ಪೊಲೀಸ್ ಬರಬಹುದು ಎಂದು ಆತನ ಕೈಯಲ್ಲಿದ್ದ ಮೊಬೈಲ್ ಮತ್ತು ಬೈಕ್ ಅನ್ನು ಕಿತ್ತುಕೊಂಡು ಅರ್ಧ ದಾರಿಯಲ್ಲಿ ಬಿಟ್ಟು ಆ ವ್ಯಕ್ತಿ ಹೋಗಿದ್ದಾನೆ. ಕಿರಣ್ ನಂತರ ಭದ್ರಾವತಿಗೆ ಬಂದು ನ್ಯೂಟನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಅದರಂತೆ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ಶಾಹೀದ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾನೆ.
Message to a young woman of another community
.jpg)