SUDDILIVE || SHIVAMOGGA
ಗೌಡನಕೆರೆಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ- Missing youth found dead in Gowdanakere
ಹೊಸೂರು ಗ್ರಾಮದ ನಿಶಾಂತ್‌ಗಾಗಿ (25) ಹುಡುಕಾಟ ನಡೆಯುತ್ತಿದೆ. ಇವತ್ತು ಬೆಳಗ್ಗೆ ಮನೆಯಿಂದ ಬೈಕಿನಲ್ಲಿ ಹೊರಟಿದ್ದ ನಿಶಾಂತ್ ಕೆರೆ ಬಳಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದಾನೆ. ಗೌಡನಕೆರೆ ದಂಡೆ ಮೇಲೆ ಬೈಕ್, ನಿಶಾಂತನ ಚಪ್ಪಲಿಗಳು ಪತ್ತೆಯಾಗಿದ್ದವು.
ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ನಿಶಾಂತ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಸೂರು ಗ್ರಾಮದ ಗಾರೆ ಕೆಲಸ ಮಾಡಿಕೊಂಡಿದ್ದ ನಿಶಾಂತ್ ಗೌಡನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಆತನ ಮೃತ ದೇಹವನ್ನ ಶಿವಮೊಗ್ಗದ ಮೆಗ್ಗಾನ್ ಮರುಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Missing youth found dead in Gowdanakere