SUDDILIVE || SHIVAMOGGA
ಶಿಕಾರಿಪುರ| ಶ್ರೀಗಂಧ ಕಳ್ಳರ ಬಂಧನ-Shikaripura| sandalwood thrives arrested
ಸಾಗರ ವಿಭಾಗ, ಶಿಕಾರಿಪುರ ಉಪವಿಭಾಗ, ಶಿಕಾರಿಪುರ ವಲಯದಲ್ಲಿ ಶ್ರೀಗಂಧ ಕಳ್ಳರ ಬಂಧನವಾಗಿದೆ. ಶಿಕಾರಿಪುರ ವಲಯದ ಕೆಂಗಟ್ಟೆ ಶ್ರೀಗಂಧ ಮೀಸಲಿನಲ್ಲಿ ಶ್ರೀಗಂಧ ಮರ ಕಳ್ಳತನಕ್ಕೆ ಪ್ರಯತ್ನಿಸಿದ ಕಳ್ಳರನ್ನು ಪತ್ತೆ ಹಚ್ಚಿ ಒಬ್ಬರನ್ನು ಬಂಧಿಸುವಲ್ಲಿ RFO ರೇವಣಸಿದ್ಧಯ್ಯ ಬಿ ಹಿರೇಮಠ್ ಮತ್ತು ತಂಡ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ತಾ. ಇಂದಿರಾನಗರ ಮೂಲದ ಆರು ಜನ ರಾತ್ರಿ ಸಮಯದಲ್ಲಿ ಕಾಡಿಗೆ ಬಂದು, ವಿಶೇಷವಾಗಿ ಮಳೆ ಬರುವ ಸಮಯದಲ್ಲಿ ಬೇಲಿ ಕತ್ತರಿಸಿ ಒಳಗೆ ಬಂದು ಶ್ರೀಗಂಧ ಮರ ಕಡಿಯಲು ಪ್ರಯತ್ನಿಸುತ್ತಿದನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.. ಈ ಕಾರ್ಯಾ ಚರಣೆಯಲ್ಲಿ ಮುಧೋಳ್ ನಾಯಿಯನ್ನು ಬಳಸಲಾಗಿದೆ. ಶ್ರೀ ಮೋಹನಕುಮಾರ್ DCF ಸಾಗರ ಮತ್ತು ACF ಶ್ರೀ V S ರವೀಂದ್ರನಾಯ್ಕ್ ರವರ ಮಾರ್ಗದರ್ಶನದಲ್ಲಿ RFO ರೇವಣಸಿದ್ಧಯ್ಯ ಬಿ ಹಿರೇಮಠ್ ಮುಂದಾಳತ್ವದಲ್ಲಿ, KFDC ನೆಡುತೋಪು ಅಧೀಕ್ಷಕ ಅಶ್ವಿನ್, DRFO ಕುಮಾರನಾಯ್ಕ್, ಪ್ರಮೋದ್, ರಂಗನಾಥ್, ಕೊಟ್ರೇಶ್, ಸಚಿನ್, ಗಸ್ತುವನಪಾಲಕರಾದ ಶಿವಪ್ಪ ರಾಠೋಡ್, ಬಸವರಾಜ್, ಸಂತೋಷ್, ಸಿಬ್ಬಂದಿ ಗಳಾದ ಸುನಿಲ್, ಅಣ್ಣಪ್ಪ ಮತ್ತು ಇತರರು ಪಾಲ್ಗೊಂಡಿದ್ದರು.
Shikaripura| sandalwood thrives arrested