ad

ಚಂದ್ರಗುತ್ತಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ-Offering of food at Chandragutti temple

SUDDILIVE || CHANDRAGUTTI

ಚಂದ್ರಗುತ್ತಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ-Offering of food at Chandragutti temple

Chandragutti, food

ಗ್ರಾಮದ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಆವರಣದಲ್ಲಿ ರಾಣೆಬೆನ್ನೂರಿನ ಶ್ರೀ ಚಂದ್ರಗುತ್ಯಮ್ಮದೇವಿ ಸೇವಾ ಸಮಿತಿ ವತಿಯಿಂದ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಶುಕ್ರವಾರ ಅನ್ನಸಂತರ್ಪಣೆ ನಡೆಸಲಾಯಿತು. 

ರಾಣೆಬೆನ್ನೂರಿನಿಂದ ಪಾದಯಾತ್ರೆ ಮೂಲಕ ಹೊರಟ ಸುಮಾರು 150 ಭಕ್ತರ ತಂಡ ಹಲಗೇರಿ, ಕೋಡ, ಹಿರೇಕೆರೂರು, ಶಿರಾಳಕೊಪ್ಪ, ಸೊರಬ ಮೂಲಕ ಚಂದ್ರಗುತ್ತಿ ತಲುಪಿತು. 

ಶ್ರೀ ಕ್ಷೇತ್ರ ಚಂದ್ರಗುತ್ಯಮ್ಮ ಗುಡ್ಡಕ್ಕೆ 12ನೇ ವರ್ಷದ ಪಾದಯಾತ್ರೆ ಪಾಲ್ಗೊಂಡ ತಂಡದ ಲವಲವಿಕೆ ಜನರಲ್ಲಿ ಬೆರಗು ಮೂಡಿಸಿತು. ಇನ್ನು ಶ್ರಾವಣ ಶುಕ್ರವಾರ ಹಿನ್ನೆಲೆ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು.

ಸಮಿತಿಯ ಗೌರವಾಧ್ಯಕ್ಷ ಬೀರಪ್ಪ ಪೂಜಾರ, ಸಂಸ್ಥಾಪಕ ಹನುಮಂತಪ್ಪ ಕರಿಲಿಂಗಪ್ಪನವರ, ಅಧ್ಯಕ್ಷ ನಾಗಪ್ಪ ಮೆಡ್ಲೇರಿ, ಕಾರ್ಯದರ್ಶಿ ಸಿ.ಎಂ. ರಾಕೇಶ್, ಖಜಾಂಜಿ ಮಂಜು ಗೌಡ್ರು, ಉಪಾಧ್ಯಕ್ಷರಾದ ಮಂಜು ಸಾಲಗೇರಿ , ನಾಗರಾಜ್ ಕಾಟಿ, ನಿಂಗಪ್ಪ ಮನೆಗಾರ ಸೇರಿದಂತೆ ಇತರರಿದ್ದರು.

Offering of food at Chandragutti temple

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close