SUDDILIVE || SHIVAMOGGA
ಬೆಳಗಾವಿಯಿಂದ ಹೊನ್ನೆತಾಳು ಶಾಲೆಗೆ ಸೈಕಲ್ ಜಾಥಾ-Cycle procession from Belgaum to Honnethalu School
ಶಾಲೆಯಲ್ಲಿ ಮಕ್ಕಳು ಮೊಬೈಲ್ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿದ್ದು,ಇದನ್ನು ಓದಿ ಬೆಳಗಾವಿ ಇಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿಯ ಹೊನ್ನೆತಾಳು ಶಾಲೆಗೆ ಸುಮಾರು 400 ಕಿಲೋಮೀಟರ್ ಸೈಕಲ್ ಪ್ರಯಾಣ ಕೈಗೊಂಡು ಮಕ್ಕಳನ್ನು ಅಭಿನಂದಿಸಿದ ಬೆಳಗಾವಿಯ ಸೈಕಲ್ ಭೀಷ್ಮ ಖ್ಯಾತಿಯ ಶ್ರೀರಮೇಶ್ ಪೂಜಾರಿ.
ಇಂದು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದ 75 ವರ್ಷದ ರಮೇಶ್ ಪೂಜಾರಿಯವರು ಬೆಳಗಾವಿಯಿಂದ ಆಗಸ್ಟ್ 15 ಕ್ಕೇ ಪ್ರಯಾಣ ಆರಂಭಿಸಿದರು.ಇವರ ಪ್ರಯಾಣಕ್ಕೆ ಬೆಳಗಾವಿಯ ವಿವಿಧ ಅಧಿಕಾರಿಗಳು ಜನಪ್ರತಿನಿಧಿಗಳು ಚಾಲನೆ ನೀಡಿದರು. 8 ದಿನದ ಪ್ರಯಾಣ ಪೂರೈಸಿ ಇಂದು ನಮ್ಮ ಶಾಲೆಗೆ ತಲುಪಿದ ಇವರನ್ನು ಹೊನ್ನೇತಾಳು ಗ್ರಾಮಪಂಚಾಯತ್ ಅಧ್ಯಕ್ಷರಾದ ಸುರೇಂದ್ರ ಕೋಟೆಗುಡ್ಡೆ ಇವರು ಸ್ವಾಗತಿಸಿದರು, ಶಾಲೆಯ ಮಕ್ಕಳು ಪೋಷಕರು ಎಸ್ ಡಿ ಎಂಸಿ ಅಧ್ಯಕ್ಷರು,ಸದಸ್ಯರು,ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು ಅದ್ದೂರಿಯಾಗಿ ಬರಮಾಡಿಕೊಂಡರು.
Cycle procession from Belgaum to Honnethalu School