SUDDILIVE || SHIVAMOGGA
ಮತ್ತೊಂದು ವಿಶೇಷ ರೈಲು-One more special rail
ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ ತಿರುನೆಲ್ವೆಲಿ – ಶಿವಮೊಗ್ಗ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು (Special Train) ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ರೈಲಿನ ಟೈಮ್‌ಟೇಬಲ್
ಆಗಸ್ಟ್ 17ರಂದು ತಿರುನಲ್ವೆಲಿಯಿಂದ ಶಿವಮೊಗ್ಗಕ್ಕೆ (ರೈಲು ಸಂಖ್ಯೆ 06103) ಒಂದು ಟ್ರಿಪ್ ರೈಲು ಸಂಚರಿಸಲಿದೆ.
ಆಗಸ್ಟ್ 18ರಂದು ಶಿವಮೊಗ್ಗದಿಂದ ತಿರುನಲ್ವೆಲಿಗೆ (ರೈಲು ಸಂಖ್ಯೆ 06104) ಒಂದು ಟ್ರಿಪ್ ರೈಲು ಸಂಚರಿಸಲಿದೆ.
ಎಷ್ಟು ಬೋಗಿ ಇರಲಿದೆ?
ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿರುತ್ತದೆ. ಈ ಪೈಕಿ 2 ಟೈರ್ ಎಸಿ ಕೋಚ್ – 1, 3 ಟೈರ್ ಎಸಿ ಕೋಚ್ – 1, 3 ಟೈರ್ ಸ್ಲೀಪರ್ ಕೋಚ್ -9, ಜನರಲ್ ಕೋಚ್ – 4, ಸಿಟ್ಟಿಂಗ್ ಕಮ್ ಲಗೇಜ್ ಕೋಚ್ – 2 ಬೋಗಿಗಳನ್ನು ಹೊಂದಿರುತ್ತದೆ.
ಹೊರಡುವ ಟೈಮಿಂಗ್
ವಿಶೇಷ ರೈಲು ತಿರುನಲ್ವೆಲಿಯಿಂದ ಭಾನುವಾರ ಸಂಜೆ 4.20ಕ್ಕೆ ಹೊರಡಲಿದೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸೋಮವಾರ ಮಧ್ಯಾಹ್ನ 2.20ಕ್ಕೆ ಹೊರಡಲಿದೆ. ಮಂಗಳವಾರ ಬೆಳಗ್ಗೆ 10.45ಕ್ಕೆ ತಿರುನಲ್ವೆಲಿಗೆ ತಲುಪಲಿದೆ. ಈ ರೈಲು ಭದ್ರಾವತಿ, ಅರಸಿಕೆರೆ ಬೆಂಗಳೂರು ಮಾರ್ಗವಾಗಿ ತಮಿಳುನಾಡಿನ ತಿರುನಲ್ವೆಲಿ ತಲುಪಲಿದೆ
One more special rail