ad

ನಟದರ್ಶನ್ ವಿಚಾರದಲ್ಲಿ, ಮೆಗ್ಗಾನ್ ಉನ್ನತೀಕರಣದ ಬಗ್ಗೆ ಸಿಸಿಎಫ್ ವರ್ಗಾವಣೆ ರದ್ಧತಿ ಕುರಿತು ಸಚಿವರ ಹೇಳಿಕೆ ಏನು? What is the minister's statement on the cancellation of CCF transfer regarding Natdarshan's elevation?

 SUDDILIVE || SHIVAMOGGA

ನಟದರ್ಶನ್ ವಿಚಾರದಲ್ಲಿ, ಮೆಗ್ಗಾನ್ ಉನ್ನತೀಕರಣದ ಬಗ್ಗೆ ಸಿಸಿಎಫ್ ವರ್ಗಾವಣೆ ರದ್ಧತಿ ಕುರಿತು ಸಚಿವರ ಹೇಳಿಕೆ ಏನು? What is the minister's statement on the cancellation of CCF transfer regarding Natdarshan's elevation?   

Darshan, Madhubangarappa

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲಿಗೆ ಹೋಗಿರುವ ಬಗ್ಗೆ, ಮೆಗ್ಗಾನ್ ಉನ್ಬತೀಕರಣ, ಸಿಸಿಎಫ್ ಹನುಮಂತಪ್ಪನವರ ವರ್ಗಾವಣೆ ರದ್ದತಿ ಕುರಿತಂತೆ  ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

ಇಂದು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಿಗೆ ಮಾಧ್ಯಮದವರು ನಟ ದರ್ಶನ್ ಮತ್ತೆ ಜೈಲಿಗೆ ಹೋಗಿರುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಡಿ ಬಾಸ್ ಮತ್ತೆ ಜೈಲಿಗೆ ಹೋಗಿರುವುದಾಗಿ ಕೇಳಿದ ಪ್ರಶ್ನೆಗೆ ಸಚಿವರು ಕೈ ಮುಗಿದು ಹೀಗ್ಲಿ ಬಾಸ್ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.



ಸಿಸಿಎಫ್ ವರ್ಗಾವಣೆ ರದ್ದು


ಸಿಸಿಎಫ್ ಹನುಮಂತ್ಪನವರ ವರ್ಗಾವಣೆ ರದ್ದು ಕುರಿತಂತೆ ಅದರ ಆಪ್ಷನ್ ಸರ್ಕಾರದ ಬಳಿಯಿದೆ. ಹಾಗಾಗಿ ಮತ್ತೆ ಅವರನ್ನ ಉಳಿಕೊಳ್ಳಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಅವರನ್ನ ಉಲಿಸಿಕೊಳ್ಳಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗದ ಹಕ್ಕು ಪತ್ರ ನೀಡಲು ಪ್ರಕ್ರಿಯೆ ಅರ್ದಂಬರ್ಧ ಉಳಿಯಬಾರದು ಎಂಬ ಕಾರಣಕ್ಕಾಗಿ ಅವರ ವರ್ಗಾವಣೆ ರದ್ದುಗೊಳಿಸಲಾಗಿದೆ ಎಂದರು. 

ಗ್ಯಾರೆಂಟಿಯ ಜೊತೆಗೆ ಶಿವಮೊಗ್ಗ ಜಿಲ್ಲೆ ಹೆಚ್ಚಿನ ಅನುದಾನವನ್ನ ತರಲಾಗಿದೆ.  ಶರಾವತಿ ಸಂತ್ರಸ್ತರು,  ಬಗುರ್ ಹುಕುಂ ಹಾಗೂ ಅರಣ್ಯ ಇಲಾಖೆ ಸಮಸ್ಯೆಯ ಬಗ್ಗೆ ಕಾರ್ಯರೂಪತರಲು ಪ್ರಯತ್ನವಾಗಿದೆ.  ಕಾನೂನು ಬೈಪಾಸ್ ಮಾಡಲು ಸಾಧ್ಯವಾಗಲ್ಲ. ಕ್ಯಾಬಿನೆಟ್ ನಲ್ಲೂ ಚರ್ಚಿಸಲಾಗಿದೆ. ಹಕ್ಕುಪತ್ರ ನೀಡುವ ಭರವಸೆಯನ್ನ ಉಳಿಸಿಕೊಳ್ಳಲಾಗುವುದು ಎಂದರು. 

ಯಾವುದೇ ಸಂಧರ್ಭದಲ್ಲಿಯೂ ಅರಣ್ಯ ಒತ್ತುವರಿಗಳ ಮೇಲೆ ಆಕ್ಷನ್ ಬೇಡ ಎಂದಿರುವೆ. ನ್ಯಾಯಾಲಯ ಒಕ್ಕಲೆಬ್ಬಿಸಿಲ್ಲ. ಎರಡು ಮೂರು ಪ್ರಕರಣದಲ್ಲಿ ಬಲವಂತದ ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಕೇಂದ್ರದ ವಿಶ್ವಾಸ ತೆಗೆದುಜೊಂಡು. ಗ್ರೀನ್ ಟ್ರಿಬ್ಯೂನಲ್ ನಲ್ಲಿಯೂ ಹೋರಾಟ ಮಾಡಿ ಸಂತ್ರಸ್ತರಿಗೆ ಹಕ್ಕುಪತ್ರಕೊಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು. 

ಸದನದಲ್ಲಿ ಆ.16 ರಂದು ನಡೆಯಬೇಕಿದ್ದ ಒಳಮೀಸಲಾತಿಯ ಸಭೆ ಮುಂದು ಹೋಗಿದೆ.  ಆ.19 ರಂದು ನಡೆಯಲಿದೆ. ಮರು ಸಮೀಕ್ಷೆ ಆಗಬೇಕಿದೆ. ಸಮಾನತೆಗೆ ಸಮೀಕ್ಷೆ ಅಗತ್ಯವಿದೆ ಎಂದರು. 

300 ಕೋಟಿಯಲ್ಲಿ ಉನ್ನತೀಕರಣ

ಮೆಗ್ಗಾನ್ ಆಸ್ಪತ್ರೆಯ ವಿಚಾರದಲ್ಲಿ ಮನಸ್ಸಿಗೆ ಬೇಜಾರಾಗಿದೆ. ಶರಣಪ್ರಕಾಶ್ ಪಾಟೀಲ್ ಗೆ ಮತ್ತು ದಿನೇಶ್ ಗುಂಡೂರಾವ್ ಗೆ ಮೊನ್ನೆ ಸಭೆ ನಡೆಸಿ ಮೆಗ್ಗಾನ್ ಅಪ್ ಗ್ರೇಡ್ ಗೆ 75 ಕೋಟಿ ಬೇಕಿದೆ ಎಂದು ಕೇಳಲಾಗಿದೆ. 25 ಕೋಟಿಗೆ ಸಮ್ಮತಿಸಲಾಗಿದೆ. ಮೆಗ್ಗಾನ್ ನಲ್ಲಿ ಹೊರ ಜಿಲ್ಲೆಯ ಭಾಗದಿಂದ ಬರುವ ಜನರಿದ್ದಾರೆ. ಮಿಸ್ ಮ್ಯಾನೇಜ್ ಮೆಂಟ್ ಆಗಿಲ್ಲ. ಒವರ್ ಲೋಡ್ ಆಗಿದೆ. ಎಂಆರ್ ಐನ್ನ ಡಬಲ್ ಸಿಫ್ಟ್ ಮಾಡಲು ಸೂಚಿಸಲಾಗಿದೆ. 

ಎನ್ ಸಿಹೆಚ್ ಆರ್ ಮೂಲಕ ಟ್ರಾಮಾ, ಎಂಐಆರ್ ಯುನಿಟ್ ನ್ನ ಬೇರೆಡೆ ಆರಂಭಿಸಲಾಗುವುದು. ಜಿಲ್ಲಾಡಳಿತ ಭವನ ಮಾಡಬೇಕಿದೆ 12 ಎಕರೆಯಲ್ಲಿ ಮಾಡಲಾಗುವುದು. ಎಸ್ಪಿ, ಜಿಪಂ ಡಿಸಿ ಕಚೇರಿ ಎಲ್ಲಾ ಒಙದೇ ಸೂರಿನ ಅಡಿ ತರುವ ಪ್ರಯತ್ನ ಮಾಡಲಾಗುತ್ತಿದೆ. 300 ಕೋಟಿಯಲ್ಲಿ ನಿರ್ಮಿಸಲಾಗುವುದು ಎಂದರು. 

What is the minister's statement on the cancellation of CCF transfer regarding Natdarshan's elevation?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close