ad

ಗುತ್ತಿಗೆದಾರರ ಬಾಕಿ ಹಣ ಕೊಡಿ-Pay the contractor's dues

 SUDDILIVE || SHIVAMOGGA

ಗುತ್ತಿಗೆದಾರರ ಬಾಕಿ ಹಣ ಕೊಡಿ-Pay the contractor's dues

Pay, Dues

ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ ನಮ್ಮ ಬಾಕಿ ಹಣಕೊಡುವಂತೆ  ಆಗ್ರಹಿಸಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಚೆನ್ನಬಸವರಾಜು, ರಾಜ್ಯ ಸರ್ಕಾರ ಗ್ಯಾರೆಂಟಿಗೋಸ್ಕರ ನಮ್ಮಂಥಹ ಗುತ್ತಿಗೆದಾರರ ಹಣವನ್ನ ತಡೆಹಿಡಿಯುತ್ತಿದೆ. ಒಮ್ನೆಲೆ ಕೊಡಲು ಸಾಧ್ಯವಾಗದ ಸರ್ಕಾರಕ್ಕೆ ಎರಡು ಮೂರು ಕಂತಿನಲ್ಲಿಯಾದರೂ ಹಣ ಬಿಡುಗಡೆ ಮಾಡಬೇಕು ಎಂದರು. 

ಶಿವಮೊಗ್ಗ ಅಪ್ಪರ್ ಉಂಗ ವಿಭಾಗದಲ್ಲಿ ಕೋವಿಡ್ ನಿಂದ ಇದುವರೆಗೂ 5000 ಕೋಟಿ ಹಣ ಬಾಕಿಯಿದೆ. ಈ ಹಣವನ್ನ ಎರಡೂ ಸರ್ಕಾರದಲ್ಲಿ ನೀಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿಗಳನ್ನ‌ ಭೇಟಿ ಮಾಡಿ ಹಣ ಬಿಡುಗಡೆಗೆ ಮನವಿ ನೀಡಲಾಗಿತ್ತು. ಸಿಎಂ ಹಂತಹಂತವಾಗಿ ನೀಡಲಾಗುವುದಾಗಿ ಹೇಳಿ ಇದುವರೆಗೂ ಏನೂ ಹಣಬಂದಿಲ್ಲ. 

ಈ ಸರ್ಕಾರ ಕಳೆದ ಎರಡು ವರೆ ವರ್ಷದಿಂದ ಯಾವ ಯೋಜನೆ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರದಲ್ಲಿರುವ ಬಾಕಿ ಹಣವನ್ನ ಕೊಡಬೇಕಾದರೂ ಯಾವುದೇ ಸರ್ಕಾರ ಬದಲಾದರೂ ಹಣಕೊಡಬೇಕಾದುದ್ದು ಆಡಳಿತದಲ್ಲುರುವ ಸರ್ಕಾರವೇ ಹೊರತು ಬೇರೆಯವರಲ್ಲವಾದುದರಿಂದ ಬಾಕಿ ಹಣಕೊಡುವುದು ಹಾಲಿ ಸರ್ಕಾರೇ ಎಂದರು. 

ಆಗಸ್ಟ್ 20 ರಂದು ಗೋಪಾಳದ ಆಗಮುಡಿ ಕನ್ವೆಷನಲ್ ಹಾಲ್ ನಲ್ಲಿ ಗುತ್ತಿಗೆದಾರರ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಗುತ್ತಿಗೆದಾರರ ಸಮಸ್ಯೆಗಳ ಕುರಿತು ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗುವುದು ಎಂದರು‌. 

Pay the contractor's dues


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close