ಅರಣ್ಯ ಸಚಿವರಿಗೆ ಮಾನಮರ್ಯಾದೆಯಿಲ್ಲ-ಕೋಡಿಹಳ್ಳಿ ಚಂದ್ರಶೇಖರ್- The Forest Minister Has No Dignity-Kodihalli Chandrashekhar

 SUDDILIVE || SHIVAMOGGA

ಅರಣ್ಯ ಸಚಿವರಿಗೆ ಮಾನಮರ್ಯಾದೆಯಿಲ್ಲ-ಕೋಡಿಹಳ್ಳಿ ಚಂದ್ರಶೇಖರ್-The Forest Minister Has No Dignity-Kodihalli Chandrashekhar

Kodihalli, Chandrashekar

ಅರಣ್ಯ ಇಲಾಖೆಯ ಲೋಪದ ವಿರುದ್ಧ ಇಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಆಕ್ಷೇಪಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿದ್ದ ವಿದ್ಯುತ್ ಸುರಂಗ ಮಾರ್ಗವನ್ನ ನ್ಯಾಯಾಲಯದ ಮೂಲಕ ನಿಲ್ಲಿಸಿ ಸೂಕ್ತ ವರದಿ ನೀಡುವಂತೆ ಮಾಡಿರುವ ಬಗ್ಗೆ ವಿವರಣೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಡಿನ ಅಂಚಿನಲ್ಲಿ ರೈತರು ಕೃಷಿ ಮಾಡಿದ್ದಾರೆ. ಅರಣ್ಯ ಇಲಾಖೆ ಇವರನ್ನ ಒಕ್ಕಲೆಬ್ಬಿಸುತ್ತಿದೆ. ಅರಣ್ಯ ಇಲಾಖೆ ರೈತರು ಕಾಡನ್ನ ಹಾಳು ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತೆ. ಎಷ್ಟು ಹಾಳು ಮಾಡಿದ್ದಾರೆ ಎಂದು ವಿಚಾರಿಸಿದಾಗ ಅವರ ಬಳಿ ಮಾಹಿತಿಯಿಲ್ಲ. ಆದರೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ  2010 ರಲ್ಲಿ 24 ಜಲವಿದ್ಯುತ್ ಉತ್ಪಾದನೆಗೆ ಸರ್ಕಾರ ಪರವಾನಿಗೆ ನೀಡಿದೆ. ಆನೆ ತುಳಿತದ ಸಂತ್ರಸ್ತರ ಮನೆಗೆ ಹೋದಾಗ ಈ ವಿಷಯ ತಿಳಿದಿದೆ ಎಂದು ವಿವರಿಸಿದರು. 

ಸ್ಥಳ ಪರಿಶೀಲನೆಗೆ ಹೋದಾಗ ನೇತ್ರವತಿ ನದಿಗೆ ಬರುವ ಹಳ್ಳಗಳು ಎತ್ತಿನಹೊಳೆ,  ಕೆಂಪುಹೊಳೆಗಳು  ಸೇರಿ ಹಲವು ಹಳ್ಳಗಳು ಸೇರಿ  ಗುಂಡ್ಯಾ ನಂತರ ನೇತ್ರಾವತಿಯಾಗಿ ಹರಿಯುತ್ತದೆ. ಇಲ್ಲಿ ಸುರಂಗ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದು ದಟ್ಟ ಅರಣ್ಯವಿದೆ. ಸಾವಿರಾರು ಮರಗಳನ್ನ ಕಡಿಯಲಾಗಿದೆ. ಬಿಎಸ್ ವೈ ಸರ್ಕಾರದಲ್ಲಿ ಅವರ ಪಿಎ ವಿಸಿಟ್ ಮಾಡಿದ್ದರು. ಫಲಿತಾಂಶ ಶೂನ್ಯವಾಗಿತ್ತು ಎಂದರು. 

ಇದರ ವಿರುದ್ಧ ನ್ಯಾಯಾಲಯಕ್ಕೆ ಪಿಐಎಲ್ ಹಾಕಿದಾಗ ವಿದ್ಯುತ್ ಉತ್ಪಾದನೆಗೆ ರದ್ದಾಗಿದೆ. ಕಾಡಿನಿಂದ ಆನೆಗಳು ರೈತರ ಜಮೀನಿಗೆ ಬರುತ್ತಿದೆ. ಸುರಂಗ ನಿರ್ಮಿಸಲು ಡೈನಾಮೆಟ್ ಮತ್ತು ಇತರೆ ಸ್ಪೋಟಕವಸ್ತುಗಳ ಬಳಕೆಯಿಂದಾಗಿ ಆನೆಗಳು ಕಾಡಂಚಿನ ರೈನ ಜಮೀನಿಗೆ ಲಗ್ಗೆ ಇಡುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದಾಗ ಇದು ರದ್ದಾಗಿದೆ. 

ರೈತರು ಮರ ಕಡಿಯಲು ನಿರ್ಬಂಧವಿದೆ. ಪರವಾನಗಿಯಿಲ್ಲದೆ ದಿನಕ್ಕೆ ಸಾವಿರಾರು ಮರಗಳು ಮಿಲ್ ಗೆ ಹೋಗುತ್ತವೆ. ಇವುಗಳಿಗೆ ಪರವಾನಿಗೆ ಇಲ್ಲವಾಗಿದೆ. ಪರವಾನಗಿಯಿಲ್ಲದೆ ಮರ ಕಡೆಯಲಾಗಿದೆ. ಈ ಬಗ್ಗೆ ಈಗಿನ ಅರಣ್ಯ ಸಚಿವರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ.‌ ದಿನ ಅಕ್ರಮ ಮರ ಸಾಗಾಣಿಕೆ ಆಗುತ್ತಿದೆ. ಎಂದರೆ ಅರ್ಥವೇನು ಎಂದು ನ್ಯಾಯಾಲಯಕ್ಕೆ ಪಿಐಎಲ್ ಹಾಕಿದಾಗ ಸರ್ಕಾರಕ್ಕೆ ಅಂಕಿ ಅಂಶ ನೀಡಲು ಹೇಳಿದೆ. 

ರಾಜ್ಯದಲ್ಲಿ 670 ಅಕ್ರಮ ಸಾಮಿಲ್ ಕೈಗಾರಿಕೆಗಳು ನಡೆಯುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಅಕ್ರಮ ಸಾಮಿಲ್ ಗಳಿವೆ. ಡಿಎಫ್ಒ ಗಳು ಇದನ್ನ ನಿಲ್ಲಿಸಲು ಕಾಲಾವಕಾಶಬೇಕಾ? ಹೊಂದಾಣಿಕೆ ಮಾಡಿಕೊಳ್ತಾರಾ ನ್ಯಾಯಾಲಯಕ್ಕೆ ಹೋಗಬೇಕಾ ಎಂದು ಪ್ರಶ್ನಿಸಿದ ಅವರು ನೀಲಗಿರಿ ಮರ ಬೆಳೆಸುವ ಹಿಂದೆ ಕೈಗಾರಿಕೆಗಳ ಲಾಭಿಯಿದೆ. ಸರ್ಕಾರಕ್ಕೆ ಅರಣ್ಯದ ಬಗ್ಗೆ ಕಾಳಜಿಯಿರುವ ಬಗ್ಗೆ ಅನುಮಾನವಿದೆ ಎಂದು ದೂರಿದರು. 

ಸಚಿವ ಈಶ್ವರ್ ಖಂಡ್ರೆಗೆ ಮಾನಮರ್ಯಾದೆ ಇದೆಯಾ ಈ ಎಲ್ಲಾ ಹೋರಾಟವನ್ನ ನ್ಯಾಯಾಲಯದ ಮೂಲಕವೇ ಹೇಳಿಸಬೇಕಿದೆ. ಅಧಿಕಾರಿಗಳು ಕೈಗಾರಿಕಾ ಲಾಭಿಗೆ ಮಾರಿ ಹೋಗಿದ್ದಾರೆ ಎಂದ ಅವರು ನಾಳೆ ಹೆಚ್ ಎಸ್ ರುದ್ರಪ್ಪನವರ ಸವಿ ನೆನಪಿನ ಕಾರ್ಯಕ್ರಮವನ್ನ ನಾಳೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಣೇನಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ಉದ್ಘಾಟಿಸಲಿದ್ದಾರೆ ಎಂದರು. 

The Forest Minister Has No Dignity-Kodihalli Chandrashekhar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close