ad

ಸಾಧನೆ ಮಾಡಿರುವ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಪ್ರೋತ್ಸಾಹಿಸುವುದು ಅತ್ಯಂತ ಶ್ರೇಷ್ಠ ವಿಚಾರ-ಪಲ್ಲವಿ.ಜಿ- Recognizing and encouraging

SUDDILIVE || SHIVAMOGGA

ಸಾಧನೆ ಮಾಡಿರುವ ಪ್ರತಿಭೆಗಳನ್ನು  ಗುರುತಿಸುವುದು  ಹಾಗೂ ಪ್ರೋತ್ಸಾಹಿಸುವುದು  ಅತ್ಯಂತ ಶ್ರೇಷ್ಠ ವಿಚಾರ :  ಪಲ್ಲವಿ.ಜಿ-Recognizing and encouraging talented individuals who have achieved great things is a great idea: Pallavi.ji

Recognizing, encouraging




 ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ವತಿಯಿಂದ ಆ.17 ಭಾನುವಾರದಂದು ನಡೆದ " ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ಮಟ್ಟದ  ಬಂಜಾರ ಪ್ರತಿಭಾ ಪುರಸ್ಕಾರ, ಯುವ  ಸಮಾವೇಶ & ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ " ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡ ಅಲೆಮಾರಿ ನಿಗಮದ ಅಧ್ಯಕ್ಷರಾದ  ಪಲ್ಲವಿ ಜಿ ಅವರು ಭಾಗವಹಿಸಿ ಮಾತನಾಡಿ, ಸಾಧನೆ ಮಾಡಿರುವ ಪ್ರತಿಭೆಗಳನ್ನು  ಗುರುತಿಸಿ ಪ್ರೋತ್ಸಾಹಿಸುವುದು  ಅತ್ಯಂತ ಶ್ರೇಷ್ಠ ಕೆಲಸವೆಂದು ಅಭಿಪ್ರಾಯ ಪಟ್ಟರು.

 ಪರಿಶಿಷ್ಟ ವರ್ಗದ ಎಲ್ಲ ಸಮುದಾಯಗಳು ಒಂದೇ ಬಳ್ಳಿಯ ಹೂವಿದ್ದಂತೆ ಶೋಷಿತ  ಸಮುದಾಯದವರಾದ ನಾವುಗಳು ಸಮುದಾಯದ  ಸಂಘಟನೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ  ಕೆಲಸ ಮಾಡಬೇಕಿದೆ ಎಂದರು.

 ಶೋಷಿತ ಸಮುದಾಯದ ಅಣ್ಣ-ತಮ್ಮಂದಿರು ಬಾಬಾ ಸಾಹೇಬ್  ಅಂಬೇಡ್ಕರ್ ಅವರ ಸಂದೇಶವನ್ನು, ದೊಡ್ಡ ದೊಡ್ಡ ಮಹನೀಯರ ದಾರ್ಶನಿಕರ  ಸಂದೇಶವನ್ನು ಅರಿಯಬೇಕು.


 ಆಧುನಿಕ ಜಗತ್ತಿನಲ್ಲಿ ಸಾಧನೆ ಮಾಡಲು ಹೊರಟಾಗ ಸವಾಲುಗಳು ಬಹಳ ದೊಡ್ಡದು. ಸವಾಲುಗಳನ್ನು ಎದುರಿಸಿ ಸಾಧನೆ ಮಾಡಬೇಕು. ಆಧುನಿಕತೆ ಹಾಗೂ ವೇಗ  ಇವೆರಡರ ಮಧ್ಯೆ  ಸಾಮಾಜಿಕ ಜವಾಬ್ದಾರಿ ಕೂಡ  ಬಹಳ ದೊಡ್ಡದು ಎಂದರು.

ಬಾಬಾ ಸಾಹೇಬರು ಕೊಟ್ಟಿರುವ ಮೀಸಲಾತಿಯನ್ನು  ಉಳಿಸಿಕೊಳ್ಳುವ ಸಲುವಾಗಿ ಎಲ್ಲರೂ ಒಂದಾಗಬೇಕಿದೆ. ಪ್ರತಿಭಾ ಪುರಸ್ಕಾರ ದಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದ್ದು  ಕೇವಲ ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಸಮಾಜಕ್ಕೆ ಸೀಮಿತವಾಗಿರದೆ  ದೇಶಕ್ಕೆ ಮರಳಿ ಕೊಡುಗೆ ಕೊಡುವ ಇಚ್ಛಾಶಕ್ತಿಯಿಂದ ಬಾಳಬೇಕು ಎಂದರು. ಚಿತ್ರದುರ್ಗ ಬಂಜಾರ ಗುರುಪೀಠದ  ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿಕಾರಿಪುರದ ಸಾಲೂರಿನ ಸೈನಾ ಭಗತ್ ಸ್ವಾಮೀಜಿ  ದಿವ್ಯ ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯರು  ಹಾಗೂ  ಸಂತ ಸೇವಾಲಾಲ್ ಜನ್ಮಸ್ಥಳದ  ಸಂಸ್ಥಾಪಕರಾದ ಡಾ. ಈಶ್ವರ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.


 ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಶಿಕ್ಷಣ ನಿರ್ದೇಶಕರಾದ ಡಾ. ಬಿ ಹೇಮ್ಲಾನಾಯ್ಕ, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸವಿತಾ ಬಾಯಿ  ಮಲ್ಲೇಶ್ ನಾಯ್ಕ್, ಪ್ರಾಧ್ಯಾಪಕರಾದ  ಡಾ.ಟಿ ವಸಂತ್ ನಾಯ್ಕ್, ಪರಿಶಿಷ್ಟ ಜಾತಿ ಅಲೆಮಾರಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ  ಆನಂದ್ ಕುಮಾರ್ ಏಕಲವ್ಯ, ಉಪನ್ಯಾಸಕರಾದ ರಾಮಾನಾಯ್ಕ್, ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ.ಆರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಉತ್ತಮ್ ಮೂಡ್, ಪ್ರಮುಖರಾದ ಕೃಷ್ಣನಾಯ್ಕ್, ಶ್ರೀಮತಿ ವಿಜಯಲಕ್ಷ್ಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Recognizing and encouraging

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close