ad

ಗೋವುಗಳ ರಕ್ಷಣೆ-cows are protected

SUDDILIVE || BHADRAVATHI | SORABA

ಗೋವುಗಳ ರಕ್ಷಣೆ-cows are protected

Cow, protected

ಎರಡು ಬೇರೆ ಬೇರೆ ಊರುಗಳಲ್ಲಿ ಹಸುಗಳ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳಿಂದ ಸೊರಬ ಮತ್ತು ಭದ್ರಾವತಿಯಲ್ಲಿ ಎರಡು ಜಾನುವಾರುಗಳನ್ನ ರಕ್ಷಣೆ ಮಾಡಲಾಗಿದೆ. 


ನಿರ್ಮಾಣ ಹಂತದಲ್ಲಿರುವ  ಕಟ್ಟಡದ ಪಕ್ಕದ ಮಣ್ಣಿನ ಗುಂಡಿಯೊಳಗೆ ಸಿಲುಕಿದ್ದ ಎರಡು ಹಸುಗಳನ್ನು ಸಾರ್ವಜನಿಕರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ
ಸಿದ್ಧಾರೂಢ ನಗರದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ನಿಲಯದ ಪಕ್ಕದ ಪಕ್ಕದಲ್ಲಿ  ನಿರ್ಮಾಣ ಹಂತದ ಪಾಯ ತೆಗೆಯಲು ತೆಗೆಸಿದ್ದ ಮಣ್ಣಿನ ಗುಂಡಿಯೊಳಗೆ ಸಿಲುಕಿದ್ದ
ಸಿದ್ದಾರೂಢ ನಗರದ ನಿವಾಸಿ ಲಿಂಗಪ್ಪರವರಿಗೆ ಸೇರಿದ
ಹಸುಗಳನ್ನು ಕಂಡು ನಿರ್ಮಾಣದ ಅಕ್ಕಪಕ್ಕದ ಸ್ಥಳೀಯರು ಹಾಗೂ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಘಟನೆ ಬಗ್ಗೆ ತಿಳಿಸಿದ ಮೇರೆಗೆ ಕೂಡಲೇ ಕಾರ್ಯ ಪ್ರವರ್ತನಾದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಸುಗಳನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ 

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಸಿ ಎಚ್ ಹುಲಿಯಪ್ಪ, ಎಲ್. ಎಫ್.  ಗಳಾದ ಮಂಜಪ್ಪ ಮತ್ತು ಬಾಬು ಗೌಡ , ಫೈರ್ ಮ್ಯಾನ್ ಪ್ರಜ್ವಲ್, ವಾಹನ ಚಾಲಕ ಸುರೇಶ್ ರವರುಗಳು ಭಾಗವಹಿಸಿದ್ದರು

ಸೊರಬ

ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಇಲ್ಲಿನ ಹೊಸಪೇಟೆ ಬಡಾವಣೆಯ ಹುಚ್ಚಪ್ಪ ಎಂಬುವರಿಗೆ ಸೇರಿದ 6 ವರ್ಷದ ಜರ್ಸಿ‌ ಆಕಳು ಆಹಾರ ಅರಸಿ ಹೋಗಿ ಸುಮಾರು 30ಅಡಿ ಆಳದ ಬಾವಿಗೆ ಬಿದ್ದಿತ್ತು. ವಿಷಯ ತಿಳಿದ ಅಗ್ನಿಶಾಮಕದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಆಕಳನ್ನು ರಕ್ಷಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಠಾಣಾಧಿಕಾರಿ ಕೆ.‌ಮಹಬಲೇಶ್ವರ್, ಸಹ ಠಾಣಾಧಿಕಾರಿ ಆರ್. ಶಂಕರ್,  ಸಿಬ್ಬಂದಿಗಳಾದ ಶ್ರೀಶೈಲ ಬಿ. ಚಿಪ್ಪಲಕಟ್ಟಿ, ಸಂದೀಪ್ ರಾಠೋಡ್ , ಭೀಮಪ್ಪ ತುಂಗಳ ಇದ್ದರು.

cows are protected

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close