SUDDILIVE || SHIVAMOGGA
ಗಣಪತಿ ಹಬ್ಬದ ಚಂದಾ ಹಣದ ವಿಚಾರದಲ್ಲಿ ಗಲಾಟೆ-Ruckus over Ganapati festival subscription money
ಗಣಪತಿ ಹಬ್ಬದ ಚಂದಾ ಹಣದ ವಿಚಾರವಾಗಿ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ರವಿವರ್ಮ ಬೀದಿಯಲ್ಲಿ ಗಲಾಡೆ ಮಾಡುತ್ತಿದ್ದರು.
ನಾಗರಾಜ್, ಕೃಷ್ಣ ಮತ್ತು ಚಂದನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ. ಗಣೇಶ ಹಬ್ಬದ ಚಂದಾ ಹಣದ ವಿಚಾರವಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಯುವಕರು ಪರಾರಿಯಾಗಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಮೂವರು ಯುವಕರನ್ನು ಹಿಡಿದು ವಿಚಾರಣೆ ಮಾಡಿದಾಗ ಗಲಾಟೆಗೆ ಕಾರಣ ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ruckus over Ganapati festival subscription money