ad

ಮಳೆಗೆ ಶಾಲೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿತ-School roof and wall collapse due to rain

SUDDILIVE || SHIVAMOGGA

ಮಳೆಗೆ ಶಾಲೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿತ-School roof and wall collapse due to rain




ತೀವ್ರ ಮಳೆಯಿಂದಾಗಿ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಹಿರಿಯ ಪ್ರಾಥಮಿಕ ಶಾಲೆಯ ಮೆಲ್ಛಾವಣಿ‌ ಹಾಗೂ ಗೋಡೆ ಕುಸಿದು ಬಿದ್ದಿದೆ.

ಸುಮಾರು ಮೂವತ್ತು ವರ್ಷಕ್ಕಿಂತ ಹಳೆಯದಾದ ಮಂಗಳೂರು ಹೆಂಚಿನ ಮೇಲ್ಛಾವಣಿ ಸೋಮವಾರ ತಡರಾತ್ರಿ ಮುರಿದು ಬಿದ್ದಿದೆ. ಮಣ್ಣಿನಿಂದ‌ ನಿರ್ಮಿಸಿದ್ದ ಗೋಡೆ ಕೂಡ ಕುಸಿದು ಬಿದ್ದಿದೆ. ಈ‌‌ ಕಟ್ಟಡ ತೀವ್ರ ಶಿಥಿಲಗೊಂಡಿದ್ದರಿಂದ ಮಕ್ಕಳಿಗೆ ಪ್ರವೇಶವಿರಲಿಲ್ಲ. ಬದಲಾಗಿ ಇನ್ನೊಂದು‌ ಪರ್ಯಾಯ ಕಟ್ಟಡದಲದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. 

ಇನ್ನೊಂದು ಕೊಠಡಿ ಅಗತ್ಯ ಇರುವುದರಿಂದ ಎಸ್ ಡಿಎಂಸಿ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಶಿಥಿಲ ಕಟ್ಟಡ ಕೆಡವಲು ಅನುಮತಿ ಇಲ್ಲ ಎಂಬ‌ ಕಾರಣಕ್ಕೆ ಅದನ್ನು ಹಾಗೆ ಬಿಡಲಾಗಿತ್ತು. ಶಾಲಾ ಅವಧಿಯಲ್ಲಿ ಈ ಕಟ್ಟಡ ಕುಸಿದಿಲ್ಲ ಎಂಬ ಸಮಾಧಾನ ಪೋಷಕರದ್ದಾಗಿದೆ.

School roof and wall collapse due to rain

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close