ad

ಕಳೆದ ಸರ್ಕಾರಕ್ಕಿಂತ ಈಗಿನ ಸರ್ಕಾರವೇ ಹೆಚ್ಚಿನ ಭ್ರಷ್ಠ ಸರ್ಕಾರವಾಗಿದೆ-ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಗಂಭೀರ ಆರೋಪ-The current government is more corrupt than the previous government

 SUDDILIVE || SHIVAMOGGA

ಕಳೆದ ಸರ್ಕಾರಕ್ಕಿಂತ ಈಗಿನ ಸರ್ಕಾರವೇ ಹೆಚ್ಚಿನ ಭ್ರಷ್ಠ ಸರ್ಕಾರವಾಗಿದೆ-ಗುತ್ತಿಗೆದಾರರ ಸಂಘದ ಅಧ್ಯಕ್ಷ ಗಂಭೀರ ಆರೋಪ-The current government is more corrupt than the previous government - serious accusation by the president of the contractors' association

Corrupt, contractor


ಸರ್ಕಾರದ ವಿವಿಧ ಇಲಾಖೆಯಲ್ಲಿ 32 ಸಾವಿರ ಕೋಟಿ ಬಾಕಿ ಇದೆ. ಗುತ್ತಿಗೆದಾರರು ಕಷ್ಟದಲ್ಲಿದ್ದಾರೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಆಗ್ರಹಿಸಿದರು. 

ಆಗಮುಡಿ ಕನ್ವೆಷನಲ್ ಹಾಲ್ ನಲ್ಲಿ ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ ಮಲೆನಾಡು ಅಧ್ಯಕ್ಷರಾಗಿ ಆಗಮಿಸಿ ಮಾತನಾಡಿದರು.  

ಸಿಎಂಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಹಣ ಕ್ಲಿಯರ್ ಮಾಡಲು ಆಗ್ರಹಿಸಲಾಗಿದೆ. ಪರ್ಸೆಂಟೇಜ್ ಮತ್ತು ಕಳಪೆಕಾಮಗಾರಿ ಬಗ್ಗೆ ಮಾತನಾಡಿದ ಅವರು ಯಾವ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಲ್ಲ. ಕೆಲವು ಟೆಂಡರ್ ಆಗದೆ ಇಂಜಿನಿಯರ್ ಅವರ ಹೇಳಿಕೆ ಮೇಲೆ ಕೆಲಸ ಮಾಡಿಕೊಡಲಾಗಿರುತ್ತದೆ. ಕೆಲಸ ಮಾಡಿಕೊಡುವ ಮುಂಚೆ ಅಧಿಕಾರಿಗಳಿಗೆ ಇರುವ ಕಾಳಜಿ ಕೆಲಸ ಆದಮೇಲೆ ಕಾಳಜಿ ಇರಲ್ಲ. ಎಲ್ಲವೂ ಅಧಿಕಾರಿಗಳದ್ದೆ ತಪ್ಪಿರುತ್ತೆ ಎಂದು ದೂರಿದರು. 

ಗುತ್ತಿಗೆದಾರರು ಕಷ್ಟದಲ್ಲಿದ್ದಾರೆ. ನಮ್ಮ ಸಹಾಯವನ್ನ ಪಡೆದು ಈಗಿನ ಸರ್ಕರ ಅಧಿಕಾರಕ್ಕೆ ಬಂತು ನಂತರ ಮರೆತಿದೆ. ಕಳೆದ ಸರ್ಕಾರದಲ್ಲಿದ್ದ 40% ಕಮಿಷನ್ ಇತ್ತು. ಈಗ ಕಮಿಷನ್ ಹೆಚ್ಚಾಗಿದೆ ಎಂದ ಅವರು ಎಷ್ಟು ಹೆಚ್ಚಾಗಿದೆ ಎಂದು ಹೇಳಲಿಲ್ಲ. ಆದರೆ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಆ ಕಮಿಷನ್ ಹೆಚ್ಚಿಗೆ ಇರುತ್ತೆ ಎಂದರು. 

ಗುತ್ತಿಗೆದಾರರ ವಿರುದ್ಧ ಮೂಕರ್ಜಿಗಳು ಹೆಚ್ಚಿಗೆ ಇವೆ. ಗುತ್ತಿಗೆದಾರರು ಕೆಲಸ ಮಾಡುವುದು ಕಷ್ಟವಾಗಿದೆ. ಕಳೆದ ಸರ್ಕಾರಕ್ಕಿಂತ ಈಗಿನ ಸರ್ಕಾರದ ಭ್ರಷ್ಠಾಚಾರ ಹೆಚ್ಚಾಗಿದೆ. ಭೈರತಿ ಸುರೇಶ್ ಕೆಲವರಿಗೆ ಅನುಕೂಲವಾಗುವಂತೆ ಸ್ಥಳೀಯವಾಗಿ ಟೆಂಡರ್ ಕರೆಯದೆ ಬೆಂಗಳೂರಿನಲ್ಲಿ ಟೆಂಡರ್ ಮಾಡಿಕೊಡಲಾಗುತ್ತಿದೆ ಎಂದು ದೂರಿದರು. 

ಮ್ಯಾಚ್ ಫಿಕ್ಸಿಂಗ್ ಆದ ಗುತ್ತಿಗೆದಾರರು ಬಿಲೋ ಟೆಂಡರ್ ಆದವರು ಹೆಚ್ಚಿನ ದರಕ್ಕೆ ಅನುಮತಿ ಮಾಡಿಕೊಂಡು ಟೆಂಡರ್ ಹೆಚ್ಚಿಗೆ ಮಾಡಿಕೊಳ್ಳುತ್ತಾರೆ ಎಂದು ದೂರಿದರು.  

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಜಗನ್ನಾಥ್ ಸೇಠ್ ಮಾತನಾಡಿ, ಕೆಂಪಣ್ಣ ಅಜರಾಮಾರು, ಯಾರಿಗೂ ಎದೆಗುಂದದೆ ಜೀವನನಡೆಸಿದ ಅವರು ಗುತ್ತಿಗೆದಾಋಇಗೆ ಗೌರವ ತಂದಿದ್ದಾರೆ. ಅಧಿಕಾರ ಬರುತ್ತೆ ಹೋಗುತ್ತೆ ಗೌರವವಾಗಿ ಬದುಕು ಮುಖ್ಯ ಅದನ್ನ ಕೆಂಪಣ್ಣ ನಡೆದುಕೊಂಡು ಬಂದಿದ್ದಾರೆ. ತಪ್ಪುಗಳನ್ನ ಸರ್ಕಾರದ ಗಮನಕ್ಕೆ ತರಬೇಕು. ಆಗುವ ಕೆಲಸಗಳನ್ನ ಸರ್ಕಾರಕ್ಕೆ ಮಾಡಿಕೊಡುವ ಜವಬ್ದಾರಿ ಗುತ್ತಿಗೆದಾರರದ್ದು ಎಂದರು.

ಇದಕಗಕೂ ಮೊದಲು ಮಲೆನಾಡು ಗುತ್ತಿಗೆದಾರರ ಸಂಘದ ಲೋಗೋ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಗುತ್ತಿಗೆದಾರರ ಸಂಘದ ಸದಸ್ಯರ ಸನ್ಮಾನ ಮಾಡಲಾಯಿತು. 

The current government is more corrupt than the previous government

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close