ad

ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬೇಕೆ-ಮಾಹಿತಿ ಇಲ್ಲಿದೆ-Should you volunteer? Here's the information

SUDDILIVE || SHIVAMOGGA

ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬೇಕೆ-ಮಾಹಿತಿ ಇಲ್ಲಿದೆ-Should you volunteer? Here's the information

Volunteer, information

ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿದ್ದು, ಈ ಹಿನ್ನೆಲೆಯಲ್ಲಿ  ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ ಸಾರ್ವಜನಿಕರು ದಿನಾಂಕಃ 01-08-2025 ರಿಂದ 15-08-2025 ರ ವರೆಗೆ ತಮ್ಮ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಗೆ ಸಲ್ಲಸಿ ನೋಂದಾಯಿಸಿಕೊಳ್ಳ ಬಹುದಾಗಿರುತ್ತದೆ. 

ಆದ್ದರಿಂದ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಶಿವಮೊಗ್ಗ-ಎ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ಭದ್ರಾವತಿ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಭದ್ರಾವತಿ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ಸಾಗರ ತಾಲ್ಲೂಕು  ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಸಾಗರ  ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕು  ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ತೀರ್ಥಹಳ್ಳಿ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ ಮತ್ತು ಸೊರಬ ಹಾಗೂ ಶಿಕಾರಿಪುರ ತಾಲ್ಲೂಕು  ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಶಿಕಾರಿಪುರ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ ತಮ್ಮ ವಿವರಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳ ಬಹುದಾಗಿರುತ್ತದೆ.

Should you volunteer? Here's the information

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close