SUDDILIVE || SHIVAMOGGA
ಆ.17 ರಂದು ರಜತ ಸಂಭ್ರಮ-Silver Jubilee on August 17th
ಗುರುಶಾಂತ ವೀರಶೈವ ಸೇವಾ ಸಮಿತಿಯ ರಜತ ಸಂಭ್ರಮವನ್ನ ಆ.17 ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸೇವಾ ಸಮಿತಿಯ ಮಹಾಲಿಂಗ ಶಾಸ್ತ್ರಿಗಳು, ವೀರಶೈವರ ಮಾತ್ರ ವಧುವರರ ಅನ್ವೇಷಣ ಕೇಂದ್ರ ಆರಂಭಿಸದೆ ಹಿಂದೂ ವಧುವರರ ಅನ್ವೇಷಣಾ ಕೇಂದ್ರದ ವೆಬ್ ಸೈಟ್ ಬಿಡುಗಡೆ ಮಾಡಲಾಗುತ್ತಿದೆ.
ಅದರ ಜೊತೆಗೆ ಯಾತ್ರಾ ಕೈಪಿಡಿ ಬಿಡುಗಡೆ, ಪ್ರತಿಭಾ ಪುರಸ್ಕಾರ ಮತ್ತು ಬೆಕ್ಕಿನಕಲ್ಮಠ ಶ್ರಾವಣ ಚಿಂತನಾ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣ ಶಿಬಿರವನ್ನ ನಡೆಸಲಾಗುತ್ತಿದೆ. ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಚಿತ್ರದುರ್ಗದ ಬಸವಮೂರ್ತಿ ಮಾದರಾಚೆನ್ನಯ್ಯ ಮಹಾಸ್ವಾಮಿಗಳು.
ಹೊಸದುರ್ಗದ ಕಾಗಿನೆಲೆ ಗುರುಪೀಠ ಈಶ್ವರಾನಂದ ಸ್ವಾಮಿಗಳು, ಆದಿಚುಂಚನಗಿರಿ ಮಠದ ಸಾಯಿನಾಥ ಸ್ವಾಮಿಗಳು ದಿವ್ಯ ಸಾನಿಧ್ಯವನ್ನ ವಹಿಸಲಿದ್ದಾರೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದರು ರಜತ ಸಂಭ್ರಮದ ಯಾತ್ರ ಕೈಪಿಡಿಯನ್ನ ಬಿಡುಗಡೆ ಮಾಡಲಿದ್ದಾರೆ ಎಂದರು.
Silver Jubilee on August 17th