ad

ಸೊರಬ|| ಪಿಎಸ್ಐ ನವೀನ್ ಕುಮಾರ್ ರಿಂದ ಮನೆ ಮನೆಗೆ ಪೊಲಿಸ್-Soraba || Door to door police by PSI Naveen Kumar

 SUDDILIVE || SORABA

ಸೊರಬ|| ಪಿಎಸ್ಐ ನವೀನ್ ಕುಮಾರ್ ರಿಂದ ಮನೆ ಮನೆಗೆ ಪೊಲಿಸ್-Soraba || Door to door police by PSI Naveen Kumar

ಸಮುದಾಯ ಪೊಲೀಸ್‌ ವ್ಯವಸ್ಥೆ ಬಲಪಡಿಸುವ ಹಿತದೃಷ್ಠಿಯಿಂದ ಮನೆ ಮನೆಗೆ ಪೊಲೀಸ್‌ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದೆ ಎಂದು ಪಿಎಸ್ಐ ಎಂ.ಎಚ್. ನವೀನ್ ಕುಮಾರ್ ಹೇಳಿದರು. 

ಪಟ್ಟಣದ ಚಿಕ್ಕ ಪೇಟೆಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅವರು ಮಾಹಿತಿ ನೀಡಿದರು. 

ಬೀಟ್ ಸಿಬ್ಬಂದಿ ಜನರಲ್ಲಿ ಸುರಕ್ಷತೆ ಸೈಬರ್ ಅಪರಾಧಗಳ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಇಲಾಖೆ ಸಮಗ್ರ ಸೇವೆಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

ಪ್ರತಿ ತಿಂಗಳ ಎರಡನೇ ಶನಿವಾರದಂದು ಆಯಾ ಠಾಣಾ ವ್ಯಾಪ್ತಿಗಳಲ್ಲಿ ಈ ಯೋಜನೆಯಡಿ ಸಾರ್ವಜನಿಕ ಸಂಪರ್ಕ ಸಭೆಯನ್ನು ಬೀಟ್ ಪೊಲೀಸ್ ಅಧಿಕಾರಿಯವರು ನಡೆಸಲಿದ್ದು, ಈ ಸಭೆಯಲ್ಲಿ ಪೊಲೀಸ್ ಮತ್ತು ಇನ್ನಿತರ ಇಲಾಖೆಗಳ ಸಮಸ್ಯೆಯನ್ನು ಚರ್ಚಿಸಬಹುದು ಎಂದರು.

ಒಟ್ಟಾರೆ 'ಮನೆ-ಮನೆಗೆ ಪೊಲೀಸ್' ಯೋಜನೆಯು ಸಾರ್ವಜನಿಕರು ಮತ್ತು ಪೊಲೀಸ್ ನಡುವೆ ಒಂದು ಸಂಪರ್ಕ ಸೇತುವೆಯನ್ನು ಏರ್ಪಡಿಸಿ ಕುಂದುಕೊರತೆಗಳ ಶೀಘ್ರ ನಿವಾರಣೆಗೆ ವೇದಿಕೆಯಾಗಲಿದೆ. ಅಪರಾಧ ಕೃತ್ಯಗಳ ತಡಟ್ಟುವಲ್ಲಿ ಸಾರ್ವಜನಿಕರ ಸಹಕಾರವು ಅತ್ಯಂತ ಮಹತ್ವರದ್ದಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಹೆಡ್ ಕಾನ್ಸ್‌ಟೇಬಲ್ ನಾಗೇಶ್, ಸಿಬ್ಬಂದಿ ರಾಘವೇಂದ್ರ, ಲೋಕೇಶ್, ವಿನಯ ಕುಮಾರ್ ಸೇರಿದಂತೆ ಇತರರಿದ್ದರು.

Soraba || Door to door police by PSI Naveen Kumar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close