ಲಿಂಗನಮಕ್ಕಿ ಜಲಾಶಯಕ್ಕೆ ಪೂಜೆ, ಬಾಗಿನ ಅರ್ಪಣೆ- Worship and offering of Bagina to the Linganamakki reservoir

SUDDILIVE || SHIVAMOGGA

ಲಿಂಗನಮಕ್ಕಿ ಜಲಾಶಯಕ್ಕೆ ಪೂಜೆ, ಬಾಗಿನ ಅರ್ಪಣೆ-Worship and offering of Bagina to the Linganamakki reservoir

Linganmakki, bagina

ಶರಾವತಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹದ ಹಿನ್ನಲೆಯಲ್ಲಿ ಇಂದು ಜಲಾಶಯದ ಗೇಟ್ ಗಳಿಗೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ.

ದಾಖಲೆ ಪ್ರಮಾಣದಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿದೆ. ಸಾಗರದ ಲಿಂಗನಮಕ್ಕಿಯಲ್ಲಿರುವ ರಾಜ್ಯದ ಪ್ರಮುಖ ಜಲಾಶಯದಲ್ಲೊಂದಾಗಿದ್ದು ಗೇಟ್ ಓಪನ್ ಮಾಡಿ 500 ಕ್ಯೂಸೆಕ್ ನೀರನ್ನ ಸಾಂಕೇತಿಕವಾಗಿ ಹರಿಸಲಾಗಿದೆ. 

ಸುಮಾರು 14 ಸಾವಿರ ಕ್ಯೂಸೆಕ್ ನೀರು ಒಳಹರಿವು ಜಲಾಶಯಕ್ಕೆ ಹರಿದು ಬರುತ್ತಿದೆ. ಒಟ್ಟು 1819 ಅಡಿ ಎತ್ತರ ಜಲಾಶಯದ ಸಾಮರ್ಥ್ಯವಿದ್ದು, ಇಂದು 1811.40 ಅಡಿ ನೀರು ಸಂಗ್ರಹವಾಗಿದೆ. 89%  ಜಲಾಶಯ ಭರ್ತಿಯಾಗಿದೆ. 

ಮುಂದಿನ ಗಾಲೇ ಎರಡು ನೋಟೀಸ್ ನೀಡಲಾಗಿದೆ. ಕನಿಷ್ಠ ಮಟ್ಟ ಜಲಾಶಯದ ನೀರು ತಲುಪಿದ್ದರಿಂದ ಸಾಂಪ್ರದಾಯಿಕವಾಗಿ ಅಧಿಕಾರಿಗಳಿಂದ ಮೊಲದ ಪೂಜೆ ಸಲ್ಲಿಸಿದ್ದಾರೆ. ಪ್ಲಾಂಟ್, ಹಾಗೂ ಡ್ಯಾಂ ಎಂಜಿನೀಯರ್ ಗಳಿಂದ ಬಾಗೀನ ಅರ್ಪಿಸಿದ್ದಾರೆ. ಒಂದು ಗೇಟ್ ಒಂದಿಂಚು ಅರ್ಧ ನಿಮಿಷಕ್ಕೂ ಹೆಚ್ಚು ಕಾಲ ಎತ್ತಿ ಪೂಜೆ ಸಲ್ಲಿಸಲಾಗಿದೆ.ಗೇಟ್ ಟೆಸ್ಟ್ ಮಾಡುವ ಸಲುವಾಗಿಯೂ ಈ ಪೂಜೆ ಮಹತ್ವ ಪಡೆದುಕೊಂಡಿದೆ.

ನಂತರ ಮಾತನಾಡಿದ ಕೆಪಿಸಿಯ ಅಧಿಕಾರಿ ಮಹಾದೇವ್ ಎಂಬುವರು ಜಲಾಶಯ ಭರ್ತಿಗೆ ಏಳು ಅಡಿ ಇದೆ. ಜಲಾಶಯದಿಂದ ನದಿಗೆ ನೀರು ಬಿಡುವಾಗ  ಸ್ಥಳೀಯ ಶಾಸಕರನ್ನ ಆಹ್ವಾನಿಸಲಾಗುವುದು.. ಜಲಾಶಯದ ನಾಲ್ಕು ವಿದ್ಯುದ್ಗಾರದಿಂದ ವಿದ್ಯುತ್ ಉದ್ಪಾದನೆ ಮಾಡಲಾಗುತ್ತಿದೆ. ಶರಾವತಿಯ ಪಾಯಿಂಟ್ ನಿಂದ ಕಳೆದ ಬಾರಿ 6200 ಮಿಲಿಯನ್ ಯುನಿಟ್ಸ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದರು. 




ಲಿಂಗನಮಕ್ಕಿಯಲ್ಲಿ 55 ಮೆಗಾವ್ಯಾಟ್, INJH ನಲ್ಲಿ 139.02 ಮೆಗಾವ್ಯಾಟ್, ಎಸ್ ಜಿ ಹೆಚ್ ನಲ್ಲಿ 1035,  ಗೇರುಸೊಪ್ಪಾದಲ್ಲಿ  250 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದೆ.   ಕೆಪಿಸಿಯಿಂದ ರಾಜ್ಯಕ್ಕೆ 40% ವಿದ್ಯುತ್ ಉತ್ಪಾದನೆ ಇದೆ ಎಂದರು. 

Worship and offering of Bagina to the Linganamakki reservoir


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close