ad

ಪಡಿತರ ವಿತರಕರ ಕಮಿಷನ್ ಸೇರಿದಂತೆ ಬೇಡಿಕೆಗಳನ್ನ ಈಡೇರಿಸಬೇಕು-Demands including commission for ration distributors should be met

 SUDDILIVE || SHIVAMOGGA

ಪಡಿತರ ವಿತರಕರ ಕಮಿಷನ್ ಸೇರಿದಂತೆ ಬೇಡಿಕೆಗಳನ್ನ ಈಡೇರಿಸಬೇಕು-Demands including commission for ration distributors should be met

Demand, Ration

ನ್ಯಾಯಬೆಲೆ ಅಂಗಡಿಗೆ ಪ್ರತಿತಿಂಗಳು 5 ರ ಒಳಗೆ ಪಡಿತರ ಹಂಚಿಕೆಯಾಗಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಸರ್ಕಾರವನ್ನ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಪಡಿತರ ಸಮಾವೇಶವನ್ನ ಜಯನಗರದ ಸಭಾಂಗಣದಲ್ಲಿ ನಡೆದಿದೆ.

ಸಂಘಟದ ಅಧ್ಯಕ್ಷ ಟಿ.ಕೃಷ್ಣಪ್ಪ,  6 ತಿಂಗಳವರೆಗೆ ಕಮಿಷನ್ ಬಂದಿಲ್ಲ. ನಾನು ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮೇಲೆ ಕಮಿಷನ್ ಬಂದಿದೆ. 6 ತಿಂಗಳಲ್ಲಿ 253 ಕೋಟಿ ಹಣವನ್ನ ತಡೆಹಿಡಿದಿದ್ದ ಸರ್ಕಾರ ಈಗ ಐದು ತಿಂಗಳ ಕಮಿಷನ್ ನೀಡಿದೆ ಎಙದು ತಿಳಿಸಿದರು.

ಐದು ತಿಂಗಳ ಕಮಿಷನ್ ಎಸಿ ಆಫೀಸ್ ಗೆ ಬಂದಿದೆ. ಕೇಂದ್ರ ಸರ್ಕಾರದ ಹಣ ಕಾರಣಾಂತರದಿಂದ ಬಂದಿಲ್ಲ ಮುಂದಿನ ಎರಡು ತಿಂಗಳಲ್ಲಿ ಆ ಹಣ  ಬರಲಿದೆ. ಕಮಿಷನ್ ನಂಬಿಕೊಂಡು ಪಡಿತರ ವಿತರಕರ ಸಂಘ ಬದುಕುತ್ತಿದೆ ರಾಜ್ಯ ಸರ್ಕಾರ ಈ ಹಣವನ್ನ ತಡೆಹಿಡಿಯದೆ ಆಗಾಗ್ಗೆ ನೀಡಬೇಕು ಎಂದು ಆಗ್ರಹಿಸಿದರು. 

ನಿಗದಿಪಡಿಸಿದ ದಿನದಂದೆ ಆಹಾರ ಧಾನ್ಯ ಸರಬರಾಜಾಗಬೇಕು. ದಿನದಿಂದಲೇ ವಿತರಣೆ ಆಗಬೇಕು. ಅನ್ನ ಭಾಗ್ಯ ಅಕ್ಕಿ ಸರಬರಾಜಾದ ಮೇಲೆ 24 ಗಂಟೆ ಆದ ಮೇಲೆ ಬಿಲ್ ಆಗಲ್ಲ. ಸರ್ಕಾರವೇ ಸಮಯಕ್ಕೆ ಸರಿಯಾಹಿ ಅಕ್ಕಿ ವಿತರಿಸಬೇಕು. ಅಕ್ಕಿ ನಿಲ್ಲಿಸಿ ಕಿಟ್ ಕೊಡಲು ಸರ್ಕಾರ ಹೊರಟಿದೆ. 481 ಕೋಟಿ ಪಡಿತರ ಅಕ್ಕಿಗೆ ವ್ಯಚ್ಚವಾಗಲಿದೆ.  ಕಿಟ್ ಕೊಟ್ಟರೆ 73 ಕೋಟಿ ಆಗಲಿರುವುದರಿಂದ ಸರ್ಕಾರ ಹಣ ಉಳಿಸಲು ಹೊರಟಿದೆ. ಇದನ್ನೂ ನಾವು ಆಕ್ಷೇಪಿಸೊಲ್ಲ. ಆದರೆ ಸರಿಯಾದ ಸಮಯಕ್ಕೆ ಕೊಡಬೇಕು. ಕೇಂದ್ರ ಸರ್ಕಾರ ಪ್ರತಿತಿಂಗಳು 25 ರಂದು ಪಡಿತರ ಸ್ಟಾಕ್ ನ್ನ ಬಿಡುಗಡೆ ಮಾಡುತ್ತೆ.‌ಆ ರೀತಿ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದರು.  

ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಸಭೆ ಕರೆಯಲಾಗುತ್ತಿದೆ. ಭಾರತ ರೈಸ್, ಭಾರತ್ ಬೇಳೆ ಹೆಸರು ಕಾಳು ಬೇರೆ ರಾಜ್ಯಗಳಿಗೆ ಕೊಡಲಾಗುತ್ತಿದೆ. ಅದನ್ನ ಕರ್ನಾಟಕಕ್ಕೆ ಕೊಡಿ ಎಂದು ಕೇಳಲಾಗುತ್ತಿದೆ ಈ ಬಗ್ಗೆ ಕಾರ್ಯಕ್ರಮವನ್ನ‌ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ. ಸರ್ಕಾರಿ ನ್ಯಾಬೆಲೆ ಅಂಗಡಿ ಎಂದು ಸಿನಿಮಾ ಬರಲಿದೆ. ಸರ್ಕಾರ ಮತ್ತು ನ್ಯಾಯಬೆಲೆ ಅಂಗಡಿದಾರ ವಂಚನೆಯ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. 

ರಾಜ್ಯದಲ್ಲಿ 20 ಸಾವಿರ  ನ್ಯಾಯಬೆಲೆ ಅಂಗಡಿಗಳಿವೆ. ಬಾಕಿ ಉಳಿದ ಮೇ-ಜುಲೈ ಕಮಿಷನ್ ಹಣವನ್ನ ಸೂಕ್ತ ಬಿಡುಗಡೆ ಮಾಡಬೇಕು. ಬಿಲ್ಲ ಹಾಕಿದ ಸಮಯದಲ್ಲೇ ವಿತರಣೆ ಮಾಡಿಕೊಡಬೇಕು ಎಂದರು. 

Demands including commission for ration distributors should be met

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close